HOME » NEWS » Sports » PRAJNESH GUNNESWARAN OF INDIA REACH FINAL OF ORLANDO CHALLENGER SNVS

ಸತತ ಎರಡನೇ ಚಾಲೆಂಜರ್ಸ್ ಟೂರ್ನಿ ಫೈನಲ್​ಗೆ ಭಾರತದ ಪ್ರಜ್ಞೇಶ್ ಗುನ್ನೇಸ್ವರನ್

ಅಮೆರಿಕದ ಒರ್ಲಾಂಡೋದಲ್ಲಿ ನಡೆಯುತ್ತಿರುವ ಚಾಲೆಂಜರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್​ನಲ್ಲಿ ಪ್ರಜ್ಞೇಶ್ ಗುನ್ನೇಸ್ವರನ್ ಗೆಲುವು ಸಾಧಿಸಿದ್ದಾರೆ. ಕಳೆದ ವಾರ ನಡೆದ ಕ್ಯಾರಿ ಚಾಲೆಂಜರ್ಸ್ ಟೂರ್ನಿಯಲ್ಲೂ ಅವರು ಫೈನಲ್ ತಲುಪಿದ್ದರು.

news18
Updated:November 22, 2020, 12:45 PM IST
ಸತತ ಎರಡನೇ ಚಾಲೆಂಜರ್ಸ್ ಟೂರ್ನಿ ಫೈನಲ್​ಗೆ ಭಾರತದ ಪ್ರಜ್ಞೇಶ್ ಗುನ್ನೇಸ್ವರನ್
ಪ್ರಜ್ಞೇಶ್ ಗುನ್ನೇಶ್ವರನ್
  • News18
  • Last Updated: November 22, 2020, 12:45 PM IST
  • Share this:
ಅಮೆರಿಕ: ಭಾರತದ ನೂತನ ಟೆನಿಸ್ ನಂಬರ್ ಒನ್ ಆಟಗಾರ ಪ್ರಜ್ಞೇಶ್ ಗುನ್ನೇಸ್ವರನ್ ಅವರು ತಮ್ಮ ಮಿಂಚಿನ ಓಟ ಮುಂದುವರಿಸಿದ್ದಾರೆ. ಕಳೆದ ವಾರ ಕ್ಯಾರಿ ಚಾಲೆಂಜರ್ಸ್ ಟೂರ್ನಿಯ ಫೈನಲ್ ತಲುಪಿದ್ದ ಪ್ರಜ್ಞೇಶ್ ಇದೀಗ ಒರ್ಲಾಂಡೋ ಚಾಲೆಂಜರ್ಸ್ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತು ತಲುಪಿದ್ದಾರೆ. ನಿನ್ನೆ ಒರ್ಲಾಂಡೋದಲ್ಲಿ ನಡೆದ ಚಾಲೆಂಜರ್ಸ್ ಟೂರ್ನಿಯ ಸೆಮಿಫೈನಲ್​ನಲ್ಲಿ ಕ್ರಿಸ್ಟೋಫರ್ ಯೂಬ್ಯಾಂಕ್ಸ್ ಅವರನ್ನು 6-4, 7-6ರಿಂದ ಸೋಲಿಸಿದರು.

ಟೂರ್ನಿಯ ನಾಲ್ಕನೇ ಶ್ರೇಯಾಂಕದ ಪ್ರಜ್ಞೇಶ್ ಅವರು ಸೆಮಿಫೈನಲ್​ನಲ್ಲಿ ಎದುರಾಳಿ ಮೇಲೆ ಮೇಲುಗೈ ಸಾಧಿಸಿದರಾದರೂ ಪಂದ್ಯ ಗೆಲ್ಲಲು ಸಾಕಷ್ಟು ಶ್ರಮ ಹಾಕಬೇಕಾಯಿತು. ಎರಡನೇ ಸೆಟ್​​ನಲ್ಲಿ 10ನೇ ಗೇಮ್​ನಲ್ಲೇ ಅವರು ಪಂದ್ಯ ಗೆಲ್ಲುವ ಅವಕಾಶ ಇತ್ತು. ಸರ್ವಿಸ್ ಉಳಿಸಿಕೊಳ್ಳಲು ವಿಫಲರಾಗಿ ಕೊನೆಗೆ ಟೈ ಬ್ರೇಕರ್​ನಲ್ಲಿ ಪಂದ್ಯವನ್ನ ಗೆಲ್ಲಬೇಕಾಯಿತು.

ಸೆಮಿಫೈನಲ್​ನಲ್ಲಿ ಅವರ ಎದುರಾಳಿಯಾಗಿದ್ದ ಕ್ರಿಸ್ಟೋಫರ್ ಯೂಬ್ಯಾಂಕ್ಸ್ ಅವರು ಕ್ವಾರ್ಟರ್​ಫೈನಲ್​ನಲ್ಲಿ ಎರಡನೇ ಶ್ರೇಯಾಂಕಿತ ಡೆನಿಸ್ ಕುಡ್ಲಾ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು. ಡೆನಿಸ್ ಕುಡ್ಲಾ ಅವರು ಕ್ಯಾರಿ ಚಾಲೆಂಜರ್ ಟೂರ್ನಿಯ ಫೈನಲ್​ನಲ್ಲಿ ಪ್ರಜ್ಞೇಶ್ ಅವರನ್ನು ಸೋಲಿಸಿದ್ದರು. ಈ ಹಿನ್ನೆಲೆಯಲ್ಲಿ ಯೂಬ್ಯಾಂಕ್ಸ್ ವಿರುದ್ಧ ಸಾಧಿಸಿದ ಗೆಲುವು ಪ್ರಜ್ಞೇಶ್ ಅವರಿಗೆ ಸಮಾಧಾನಕರವೆನಿಸಿದೆ.

ಇದನ್ನೂ ಓದಿ: Virat Kohli: ಆರ್​ಸಿಬಿ ಸ್ಪಿನ್ನರ್ ಆ್ಯಡಂ ಝಂಪಾರಿಂದ ವಿರಾಟ್ ಕೊಹ್ಲಿ ಬಗ್ಗೆ ಶಾಕಿಂಗ್ ಹೇಳಿಕೆ: ಏನು ಹೇಳಿದ್ರು?

ಇನ್ನು, ಫೈನಲ್​ನಲ್ಲಿ ಪ್ರಜ್ಞೇಶ್​ಗೆ ಸವಾಲು ಒಡ್ಡಿರುವ ಬ್ರಾಂಡನ್ ನಕಶಿಮಾ ಅವರು ಪ್ರೀಕ್ವಾರ್ಟರ್​ಫೈನಲ್​ನಲ್ಲಿ ನಂಬರ್ ಒನ್ ಆಟಗಾರ ತಿಯಾಗೋ ಮಾಂಡಿಯೆರೋ ಅವರನ್ನು ನೇರ ಸೆಟ್​ಗಳಿಂದ ಸೋಲಿಸಿದ್ದಾರೆ. ಎಂಟರ ಸುತ್ತಿನಲ್ಲಿ 8ನೇ ಶ್ರೇಯಾಂಕಿತ ಆಟಗಾರನನ್ನು ಸೋಲಿಸಿ ಇದೀಗ ಫೈನಲ್​ವರೆಗೂ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜ್ಞೇಶ್ ಅವರ ಪ್ರಶಸ್ತಿ ಕನಸು ಸಾಕಾರಗೊಳ್ಳಲು ಸಾಕಷ್ಟು ಪರಿಶ್ರಮ ಬೇಕಾಗಬಹುದು.

ಈ ಟೂರ್ನಿಯಲ್ಲಿ ಪ್ರಜ್ಞೇಶ್ ಸೆಮಿಫೈನಲ್ ತಲುಪಿದಾಗ ಅವರು ಭಾರತದ ನಂಬರ್ ಒನ್ ಟೆನಿಸ್ ಆಟಗಾರ ಆಗಿ ಪದೋನ್ನತಿಯನ್ನೂ ಪಡೆದರು. ಭಾರತೀಯರ ಟೆನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಸುಮಿತ್ ನಗಲ್ ಅವರನ್ನ ಪ್ರಜ್ಞೇಶ್ ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. ಸುಮಿತ್ ನಗಲ್ ಅವರು ವಿಶ್ವ ಪಟ್ಟಿಯಲ್ಲಿ 136ನೇ ಸ್ಥಾನದಲ್ಲಿದ್ದಾರೆ. 137ನೇ ಸ್ಥಾನದಲ್ಲಿದ್ದ ಪ್ರಜ್ಞೇಶ್ ಅವರು ಓರ್ಲಾಂಡೋ ಟೂರ್ನಿಯಲ್ಲಿನ ಸಾಧನೆಯ ಫಲಶ್ರುತಿಯಾಗಿ ನಾಲ್ಕೈದು ಸ್ಥಾನವಾದರೂ ಮೇಲೇರುವ ನಿರೀಕ್ಷೆ ಇದೆ.
Published by: Vijayasarthy SN
First published: November 22, 2020, 12:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading