CWG 2022: ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಫೈಟಿಂಗ್! ಹೊಡೆದಾಡಿಕೊಂಡ ಹಾಕಿ ಆಟಗಾರರು

ಹಾಕಿ ಪಂದ್ಯಾಟದಲ್ಲಿ ಇಂಗ್ಲೆಂಡ್ ಆಟಗಾರನ ಜೆರ್ಸಿ ಹಿಡಿದೆಳೆದ ಕೆನಡಾ ಆಟಗಾರ

ಹಾಕಿ ಪಂದ್ಯಾಟದಲ್ಲಿ ಇಂಗ್ಲೆಂಡ್ ಆಟಗಾರನ ಜೆರ್ಸಿ ಹಿಡಿದೆಳೆದ ಕೆನಡಾ ಆಟಗಾರ

ಕಾಮನ್ ವೆಲ್ತ್ ಗೇಮ್ಸ್ ನ್ನಲ್ಲಿ ಇಂಗ್ಲೆಂಡ್ ಮತ್ತು ಕೆನಡಾದ ನಡುವಿನ ಪುರುಷರ ಹಾಕಿ ಪಂದ್ಯಾಟದಲ್ಲಿ ಆಟಗಾರರಿಬ್ಬರ ನಡುವಿನ ಜಗಳ ತ್ರೀವ್ರ ಕಾದಾಟದ ಸ್ವರೂಪ ಪಡೆದಿದೆ. ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವು ಸಾಧಿಸಿ ಸೆಮಿಫೈನಲ್ಗೆ ಪ್ರವೇಶಿಸಿದೆ.

  • Share this:

ಗೆಲುವಿಗಾಗಿ ನಡೆಯುವ ಸ್ಪರ್ಧೆ (Competition) ತಮ್ಮ ಆಟದ ಮೂಲಕ ತೋರಿಸಬೇಕೆ ವಿನ: ಅದು ಹೊಡೆದಾಟುವಷ್ಟು ಮಟ್ಟಕ್ಕೆ ಹೋಗಬಾರದು. 2022 ರ ಕಾಮನ್ ವೆಲ್ತ್ ಆಟವು (Commonwealth Game) ಪ್ರಾರಭವಾಗಿ ಒಂದು ವಾರ ಕಳೆದಿದೆ. ಅನೇಕ ಆಟಗಳು ಫೈನಲ್ (Final) ತಲುಪಿದೆ. ಹಾಕಿ (Hockey) ಆಟ ಸೆಮಿಫೈನಲ್ ಗೆ (Semi Final) ತಲುಪಿದೆ. ವಿಶ್ವದ ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಹಾಕಿ ಆಟಗಾರರು (Hockey Players) ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇಂಗ್ಲೆಂಡ್ (England) ಮತ್ತು ಕೆನಡಾದ (Canada) ನಡುವಿನ ಹಾಕಿ ಪಂದ್ಯದಲ್ಲಿ  ಕ್ರಿಸ್ ಗ್ರಿಫಿತ್ಸ್ (Chris Griffiths)  ಮತ್ತು  ಬಲರಾಜ್ ಪನೇಸರ್ Balraj Panesar)  ಎಂಬ ಇಬ್ಬರು ಆಟಗಾರರ ನಡುವಿನ ಜಗಳ ನಂತರ  ಪರಸ್ಪರ ಹೊಡೆದಾಟಕ್ಕೆ ಕಾರಣವಾಗಿದೆ.


ಗುರುವಾರ ಇಂಗ್ಲೆಂಡ್ ಮತ್ತು ಕೆನಡಾ ನಡುವೆ ನಡೆದ ಪುರುಷರ ಹಾಕಿ ಪಂದ್ಯದಲ್ಲಿ ಕನೆಡಾ ಸೋತು ಆಟದಿಂದ ನಿರ್ಗಮಿಸಿದೆ. ಮತ್ತು ಇಂಗ್ಲೆಂಡ್ ಗೆಲುವು ಪಡೆಯುವುದರ ಮೂಲಕ ಸೆಮಿಫೈನಲ್ ನಲ್ಲಿ ತನ್ನ ಸ್ಥಾನ ಖಚಿತ ಪಡಿಸಿಕೊಂಡಿ್ದೆ. ಆದರೆ ಆಡದ ನಡುವೆ ಈ ಎರಡು ದೇಶದ ಆಟಗಾರರಿಬ್ಬರ ನಡುವೆ ನಡೆದ ಜಗಳ ಕಾದಾಟಕ್ಕೆ ಕಾರಣವಾಯಿತು.


ಇಂಗ್ಲೆಂಡ್ ಆಟಗಾರನ ಜೆರ್ಸಿಯನ್ನು ಹಿಡಿದೆಳೆದ ಕೆನಾಡದ ಆಟಗಾರ
ಪಂದ್ಯದ ವಿರಾಮದ ಮೊದಲು ಇಂಗ್ಲೆಂಡ್ 4-1 ಮುನ್ನಡೆಯಲ್ಲಿದ್ದಾಗ ಆಟಗಾರರ ನಡುವೆ ಕಾದಾಟ ನಡೆಯಿತು. ಇಂಗ್ಲೆಂಡಿನ ಆಟಗಾರ ಕ್ರಿಸ್ ಏನೋ ಮಾತನಾಡಲು ಆರಂಭಿಸಿದ ಆದರೆ ಇವನ ಮಾತುಗಳನ್ನು ಕೇಳಿದ ಕೆನಾಡದ ಆಟಗಾರ ಬಲರಾಜ್ ಸಹನೆ ಕಳೆದುಕೊಂಡು ಆಟದ ಮೈದಾನದಲ್ಲೆ ಕ್ರಿಸ್ ನ ಜೆರ್ಸಿಯನ್ನು ಹಿಡಿದನು. ಅವರಿಬ್ಬರ ನಡುವೆ ಕಾದಾಟ ಆರಂಭವಾಯಿತು.


ಇದನ್ನೂ ಓದಿ: CWG 2022: ಭಾರತಕ್ಕೆ 2ನೇ ಚಿನ್ನದ ಪದಕ, ವೇಟ್‌ಲಿಫ್ಟಿಂಗ್​ನಲ್ಲಿ ಜೆರೆಮಿ ಲಾಲ್ರಿನ್ನುಂಗಾ ಸಾಧನೆ


ಬೇರ್ಪಡಿಸಲು ಪ್ರಯತ್ನಿಸಿದ ಆಟಗಾರರು
ಇವರಿಬ್ಬರ ನಡುವಿನ ಕಾದಾಟ ಜೋರಾಗುತ್ತಿದ್ದಂತೆ ಉಭಯ ತಂಡಗಳ ಇತರೆ ಆಟಗಾರರು ಅವರಿಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸಿದರು. ಆದರೆ ಅವರಿಬ್ಬರ ನಡುವೆ ಕಾದಾಟ ಜೋರಾಗಿಯೇ ನಡೆಯುತ್ತಿತ್ತು.


ಮಧ್ಯ ಪ್ರವೇಶಿದ ಪಂದ್ಯದ ಆಧಿಕಾರಿಗಳು
ಜಗಳ ಹೆಚ್ಚಾಗುತ್ತಿದ್ದಂತೆ ಪಂದ್ಯದ ಅಧಿಕಾರಿಗಳು (Refries) ಮಧ್ಯೆ ಪ್ರವೇಶಿಸಿದರು. ಅವರಿಬ್ಬರನ್ನೂ ಸರಿಪಡಿಸಿದರು. ಅಲ್ಲದೆ ಅವರಿಗೆ ಬೈಯ್ದು ಬುದ್ಧಿ ಹೇಳಿದರು. ಅಲ್ಲದೆ ಇಂಗ್ಲೆಂಡ್ ಆಟಗಾರನ ಜೆರ್ಸಿ ಹಿಡಿದಿದ್ದ ಬಲರಾಜ್ ಗೆ ರೆಡ್ ಕಾರ್ಡ್ (Red Card) ತೋರಿಸಿ ಪಂದ್ಯದಿಂದ ಹೊರ ಕಳಿಸಿದರು. ಕ್ರಿಸ್ ಗೆ ಯೆಲ್ಲೋ ಕಾರ್ಡ್ (Yellow Card) ನೀಡಲಾಯಿತು.



ಆಟದಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್
ಈ ಕಾದಾಟದ ನಂತರ ಪಂದ್ಯವು ತ್ರೀವ್ತಗತಿಯನ್ನು ಪಡೆಯಿತು. ಮತ್ತು ನಂತರದಲ್ಲಿ ಇಂಗ್ಲೆಂಡ್ ತಂಡ 11-2 ಅಂತರದಲ್ಲಿ ಗೆಲುವನ್ನು ಪಡೆಯಿತು. ಮತ್ತು ಸೆಮಿಫೈನಲ್ ತಲುಪಿತು. ಸೆಮಿಫೈನಲ್ಸ್ ನ್ನಲ್ಲಿ ಆಸ್ಟ್ರೇಲಿಯಾವನ್ನು ಇಂಗ್ಲೆಂಡ್ ಅನ್ನು ಎದುರಿಸಲಿದೆ.


ಇದನ್ನೂ ಓದಿ: CWG 2022: ಭಾರತಕ್ಕೆ ಮತ್ತೊಂದು ಬೆಳ್ಳಿ, ಒಂದೇ ದಿನ 4 ಪದಕಕ್ಕೆ ಮುತ್ತಿಕ್ಕಿದ ಭಾರತೀಯರು


ಇಂಗ್ಲೆಂಡಿನ ಹೊರತಾಗಿ ಭಾರತದ ಪುರುಷರ ಹಾಕಿ ತಂಡವು ಹಿಂದಿನ ದಿನದಲ್ಲಿ ವೇಲ್ಸ್ ವಿರುದ್ಧ 4-1 ಅಂತರದಲ್ಲಿ ಜಯಗಳಿಸಿದೆ. ಮತ್ತು ಸೆಮಿಫೈನಲ್ ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಹರ್ಮನ್ ಫ್ರೀತ್ ಸಿಂಗ್ (18', 19', 41') ಗೋಲು ಗಳಿಸಿದರೆ, ಗುರ್ಜಂತ್ ಸಿಂಗ್ (49') ಒಂದು ಗೋಲನ್ನು ಸೇರಿಸಿದ್ದರಿಂದ ಕಠಿಣ ಸ್ಪರ್ಧೆಯಲ್ಲಿ ಭರ್ಜರಿಯಾದ ಗೆಲುವು ಸಾದಿಸಿದೆ. ಭಾರತವು ಈ ಬಾರಿ ಹೆಚ್ಚಿನ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುತ್ತಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

Published by:Nalini Suvarna
First published: