ಫಿಫಾ ವಿಶ್ವಕಪ್ 2018: ಕ್ವಾರ್ಟರ್ ಫೈನಲ್​​ನಲ್ಲಿ ಮದಗಜಗಳ ಹೋರಾಟಕ್ಕೆ ವೇದಿಕೆ ಸಜ್ಜು

news18
Updated:July 5, 2018, 8:25 PM IST
ಫಿಫಾ ವಿಶ್ವಕಪ್ 2018: ಕ್ವಾರ್ಟರ್ ಫೈನಲ್​​ನಲ್ಲಿ ಮದಗಜಗಳ ಹೋರಾಟಕ್ಕೆ ವೇದಿಕೆ ಸಜ್ಜು
news18
Updated: July 5, 2018, 8:25 PM IST
ನ್ಯೂಸ್ 18 ಕನ್ನಡ

ಮಾಸ್ಕೋ (ಜುಲೈ. 05): ರಷ್ಯಾದಲ್ಲಿ ನಡೆಯುತ್ತಿರುವ 21ನೇ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಅಂತಿಯ ಘಟ್ಟಕ್ಕೆ ಬಂದು ತಲುಪಿದೆ. ಈ ಬಾರಿಯ ವಿಶ್ವಕಪ್ ಸಾಕಷ್ಟು ವಿಶೇಷತೆಯಿಂದ ಕೂಡಿದ್ದು, ನಿರೀಕ್ಷೆಗೂ ಮೀರಿದ ಫಲಿತಾಂಶ ಹೊರ ಬಂದಿದೆ. ಈಗಾಗಲೇ ನಾಕೌಟ್ ಹಂತದ ಪಂದ್ಯಗಳು ಮುಗಿದಿದ್ದು, ಕ್ವಾರ್ಟರ್ ಫೈನಲ್​ಗೆ 8 ತಂಡಗಳು ಪ್ರವೇಶ ಪಡೆದಿವೆ. ನಾಳೆಯಿಂದ ಕ್ವಾರ್ಟರ್ ಫೈನಲ್​​ ಪಂದ್ಯ ಆರಂಭವಾಗಲಿದ್ದು, ಮದಗಜಗಳ ಹೋರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. ನಾಲ್ಕರ ಘಟ್ಟಕ್ಕೆ ಯಾವ ತಂಡಗಳು ಪ್ರವೇಶ ಪಡೆಯಲಿದೆ ಎಂದು ಫುಟ್ಬಾಲ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಕ್ವಾರ್ಟರ್ ಫೈನಲ್​ಗೆ ಇಂಗ್ಲೆಂಡ್, ಬೆಲ್ಜಿಯಂ, ಉರುಗ್ವೆ, ಫ್ರಾನ್ಸ್​, ಕ್ರೋವೇಶಿಯಾ ಹಾಗೂ ಸ್ವೀಡನ್ ಹೀಗೆ ಒಟ್ಟು 8 ಬಲಿಷ್ಠ ತಂಡಗಳ ನಡುವೆ ಸೆಣೆಸಾಟ ನಡೆಯಲಿವೆ.

ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿ:
Loading...


ತಂಡ ದಿನಾಂಕ ಸಮಯ
ಉರುಗ್ವೆ vs ಫ್ರಾನ್ಸ್​ 06-07-2018 07:30 PM
ಬ್ರೆಜಿಲ್ vs ಬೆಲ್ಜಿಯಂ 06-07-2018 11:30 PM
ಸ್ವೀಡನ್ vs ಇಂಗ್ಲೆಂಡ್ 07-07-2018 07:30 PM
ರಷ್ಯಾ vs ಕ್ರೋವೇಶಿಯಾ 07-07-2018 11:30 PM

 
First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ