PKL 8: ಇಂದು ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಸೆಣಸು; Dream11 ಕಾಂಬಿನೇಶನ್

Pro Kabaddi League 2021: ಪ್ರೋಕಬಡ್ಡಿ ಲೀಗ್​ನ ಮೂರನೇ ದಿನ ಬೆಂಗಳೂರು ಬುಲ್ಸ್ ಮತ್ತು ತಮಿಳ್ ತಲೈವಾಸ್ ಕಾದಾಡಲಿವೆ. ಇದೂ ಸೇರಿ ಇಂದು ಮೂರು ಪಂದ್ಯಗಳಿವೆ. ಬುಲ್ಸ್-ತಲೈವಾಸ್ ಪಂದ್ಯದ ಡ್ರೀಮ್11 ಎರಡು ಕಾಂಬಿನೇಶನ್ ಇಲ್ಲಿವೆ:

ಬೆಂಗಳೂರು ಬುಲ್ಸ್ ತಂಡದ ಡಿ. 24ರ ಪಂದ್ಯ

ಬೆಂಗಳೂರು ಬುಲ್ಸ್ ತಂಡದ ಡಿ. 24ರ ಪಂದ್ಯ

  • News18
  • Last Updated :
  • Share this:
ಬೆಂಗಳೂರು, ಡಿ. 24: ಪ್ರೋಕಬಡ್ಡಿ ಲೀಗ್​ನ (Pro Kabaddi League) ಈ ವರ್ಷದ ಪಂದ್ಯಾವಳಿ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಕಬಡ್ಡಿಪ್ರಿಯರಿಗೆ ಎರಡು ದಿನದಲ್ಲಿ ಆರು ಪಂದ್ಯಗಳ ರಸದೌತಣ ಸಿಕ್ಕಿದೆ. ವೈಟ್ ಫೀಲ್ಡ್​ನ ಶೆರಡಾನ್ ಗ್ರ್ಯಾಂಡ್ ಹೋಟೆಲ್​ನ ಒಳಾಂಗಣದಲ್ಲಿ ಇಂದೂ ಕೂಡ ಮೂರು ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಯು ಮುಂಬಾ ಮತ್ತು ದಬಂಗ್ ಡೆಲ್ಲಿ ತಂಡಗಳು ಸೆಣಸುತ್ತಿವೆ. ಎರಡನೇ ಪಂದ್ಯ ಸೌತ್ ಡರ್ಬಿಯಾಗಿದ್ದು, ತಮಿಳ್ ತಲೈವಾಸ್​ಗೆ ಬೆಂಗಳೂರು ಬುಲ್ಸ್ (Bengaluru Bulls vs Tamil Thalaivas) ಸೆಡ್ಡು ಹೊಡೆಯುತ್ತಿದೆ. ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ಮಧ್ಯೆ ಪೈಪೋಟಿ ಇದೆ.

ಡಿ. 24, ಇಂದು ನಡೆಯುವ ಪಂದ್ಯಗಳು:

1) ಯು ಮುಂಬಾ vs ದಬಂಗ್ ಡೆಲ್ಲಿ: ಸಮಯ ಸಂಜೆ 7:30ಕ್ಕೆ
2) ತಮಿಳ್ ತಲೈವಾಸ್ vs ಬೆಂಗಳೂರು ಬುಲ್ಸ್: ಸಮಯ ರಾತ್ರಿ 8:30ಕ್ಕೆ
3) ಬಂಗಾಲ್ ವಾರಿಯರ್ಸ್ vs ಗುಜರಾತ್ ಜೈಂಟ್ಸ್: ಸಮಯ ರಾತ್ರಿ 9:30ಕ್ಕೆ

ತಮಿಳರ ನಾಯಕ ಕರ್ನಾಟಕದ ಆಟಗಾರ:

ಕಳೆದ ಸೀಸನ್​ನಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡ ಅಂಕಪಟ್ಟಿಯಲ್ಲಿ ತಳಕ್ಕೆ ಕುಸಿದಿದ್ದ ತಮಿಳ್ ತಲೈವಾಸ್ ಈ ಸೀಸನ್​ನಲ್ಲಿ ಮೈಕೊಡವಿಕೊಂಡು ಉತ್ತಮ ಅರಂಭಗೊಂಡಿದೆ. ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯ ಟೈ ಮಾಡಿಕೊಂಡಿತು. ಇನ್ನು, ಕಳೆದ ಬಾರಿ ಪ್ಲೇ ಆಫ್ ಪ್ರವೇಶಿಸಿದ್ದ ಬೆಂಗಳೂರು ಬುಲ್ಸ್ ತಂಡ ಈ ಬಾರಿ ತುಸು ನೀರಸ ಆರಂಭ ಪಡೆದಿದೆ. ಯು ಮುಂಬಾ ವಿರುದ್ಧದ ಪಂದ್ಯದಲ್ಲಿ ಬುಲ್ಸ್ 16 ಅಂಕಗಳ ಅಂತರದಲ್ಲಿ ಸೋತಿತು. ಕಳೆದ ಎರಡು ದಿನದಲ್ಲಿ ಏಪಕ್ಷೀಯವಾಗಿ ನಡೆದ ಪಂದ್ಯ ಇದೊಂದೇ ಆಗಿತ್ತು.

ಇದನ್ನೂ ಓದಿ: PKL 8: ಪ್ರೋಕಬಡ್ಡಿಯಲ್ಲಿ 15ಕ್ಕೂ ಹೆಚ್ಚು ಕನ್ನಡಿಗರು; ಇಬ್ಬರು ಕ್ಯಾಪ್ಟನ್ಸ್; ಮೂವರು ಕೋಚ್

ಕರ್ನಾಟಕ ರಾಜ್ಯ ತಂಡದ ಪರವಾಗಿ ಆಡುವ ಕೆ ಪಿರಪಂಜನ್ (ಪ್ರಪಂಚನ್) ಅವರು ಅವರು ತಮಿಳ್ ತಲೈವಾಸ್ ತಂಡದ ನಾಯಕನಾಗಿ ಅಮೋಘ ಪ್ರದರ್ಶನ ನೀಡುತ್ತಿದ್ಧಾರೆ. ಬೆಂಗಳೂರು ಬುಲ್ಸ್ ತಂಡವನ್ನ ಕಟ್ಟಿಹಾಕಬಲ್ಲ ಸಮರ್ಥ ಆಟಗಾರರ ಪಡೆ ಅವರೊಂದಿಗೆ ಇದೆ. ಆದರೆ, ಪವನ್ ಶೆರಾವತ್, ಜಿ ಬಿ ಮೋರೆ, ಚಂದ್ರನ್ ರಂಜಿತ್ ಮೊದಲಾದ ಪ್ರತಿಭಾನ್ವಿತ ಆಟಗಾರರನ್ನ ಹೊಂದಿರುವ ಬೆಂಗಳೂರು ಬುಲ್ಸ್ ಗಾಯಗೊಂಡ ಗೂಳಿಗಳಂತೆ ತಿರುಗಿಬೀಳುವ ಸನ್ನಾಹದಲ್ಲಂತೂ ಇದೆ.

ಪ್ಲೇಯಿಂಗ್ ಸೆವೆನ್ ಹೀಗಿರಬಹುದು:

ಬೆಂಗಳೂರು ಬುಲ್ಸ್: ಪವನ್ ಕುಮಾರ್ ಶೆರಾವತ್, ಚಂದ್ರನ್ ರಂಜಿತ್, ಜಿಬಿ ಮೋರೆ, ಮಹೇಂದರ್ ಸಿಂಗ್, ಸೌರಭ್ ನಂದಾಲ್, ಅಮನ್, ಮಯೂರ್ ಜಗನ್ನಾಥ್.

ತಮಿಳ್ ತಲೈವಾಸ್: ಕೆ ಪ್ರಪಂಜನ್, ಮಂಜೀತ್, ಭವಾನಿ ರಾಜಪೂತ್, ಸುರ್ಜೀತ್ ಸಿಂಗ್, ಸಾಗರ್, ಸಾಹಿಲ್, ಮೋಹಿತ್ II.

ಡ್ರೀಮ್11 ಆಡುವ ಕ್ರೀಡಾಪ್ರೇಮಿಗಳಿಗೆ ಟಿಪ್ಸ್:

ಡ್ರೀಮ್11 ಜನಪ್ರಿಯ ಸ್ಪೋರ್ಟ್ಸ್ ಆ್ಯಪ್ ಆಗಿದ್ದು, ಒಂದು ಪಂದ್ಯದಲ್ಲಿ ಎರಡೂ ತಂಡಗಳಲ್ಲಿ ಯಾವ್ಯಾವ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಬಲ್ಲರು ಎಂದು ಅಂದಾಜಿಸಿ ತಮ್ಮದೇ ತಂಡ ಕಟ್ಟುವುದು ಆಟದ ನಿಯಮ. ಈ ತಂಡದಲ್ಲಿರುವ ಆಟಗಾರರು ಎಷ್ಟು ಅಂಕಗಳನ್ನ ಗಳಿಸುತ್ತಾರೆ ಎಂಬುದರ ಮೇಲೆ ನಿಮ್ಮ ಬೆಟಿಂಗ್ ಅವಲಂಬಿತವಾಗಿರುತ್ತದೆ. ಒಂದು ತಂಡದಲ್ಲಿ ರೇಡರ್ಸ್, ಡಿಫೆಂಡರ್ಸ್, ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ಎಲ್ಲರೂ ಇರಬೇಕು. ನೀವು ಯಾವುದೇ ಆಟಗಾರನನ್ನೂ ಕ್ಯಾಪ್ಟನ್ ಅಥವಾ ವೈಸ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಬಹುದು.

ಇದನ್ನೂ ಓದಿ: PKL 8: ಮೊದಲ ದಿನ ಅಭಿಷೇಕ್ ಸಿಂಗ್ ಹೀರೋ, ಎರಡನೇ ದಿನದ ಪಂದ್ಯಗಳ ನಿರೀಕ್ಷೆ, ಟೈಮಿಂಗ್

ಡ್ರೀಮ್11 ಉತ್ತಮ ಕಾಂಬಿನೇಶನ್:

ಮೊದಲ ಕಾಂಬಿನೇಶನ್: ಜಿಬಿ ಮೋರೆ, ಸುರ್ಜೀತ್ ಸಿಂಗ್, ಮೊಹಿತ್, ಪವನ್ ಕುಮಾರ್ ಶೆರಾವತ್, ಸಾಗರ್, ಕೆ ಪ್ರಪಂಜನ್, ಸಾಹಿಲ್.
ಕ್ಯಾಪ್ಟನ್ ಪವನ್ ಕುಮಾರ್ ಶೆರಾವತ್, ವೈಸ್ ಕ್ಯಾಪ್ಟನ್ ಮಂಜೀತ್.

ಎರಡನೇ ಕಾಂಬಿನೇಶನ್: ಕೆ ಪ್ರಪಂಜನ್, ಮಹೇಂದರ್ ಸಿಮಗ್, ಜಿಬಿ ಮೋರೆ, ಚಂದ್ರನ್ ರಂಜಿತ್, ಭವಾನಿ ರಾಜಪೂತ್, ಸಾಗರ್, ಅಮನ್, ಮಂಜೀತ್.
ಕ್ಯಾಪ್ಟನ್ ಕೆ ಪ್ರಪಂಚನ್, ವೈಸ್ ಕ್ಯಾಪ್ಟನ್ ಚಂದ್ರನ್ ರಂಜಿತ್

ನಿನ್ನೆ ನಡೆದ ಪಂದ್ಯಗಳು:
1) ನಿನ್ನೆಯ ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗುಜರಾತ್ ಜೈಂಟ್ಸ್ 34-27 ಅಂಕಗಳಿಂದ ಸೋಲಿಸಿತು.
2) ಎರಡನೆ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡವನ್ನ ದಬಾಂಬ್ ಡೆಲ್ಲಿ 41-30 ಅಂಕಗಳಿಂದ ಮಣಿಸಿತು.
3) ಮೂರನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಪಟ್ನಾ ಪೈರೇಟ್ 42-39 ಅಂಕಗಳಿಂದ ರೋಚಕ ಗೆಲುವು ಪಡೆಯಿತು.

ಇದನ್ನೂ ಓದಿ: PKL 2021: ಲೈವ್​ ಪಂದ್ಯ ನೋಡೋದೆಲ್ಲಿ? ಪ್ರೊ ಕಬ್ಬಡಿ ಲೀಗ್​ ಸೀಸನ್​ 8 ಟೂರ್ನಿಯ ಕಂಪ್ಲೀಟ್ ಮಾಹಿತಿ

ಅಂಕಪಟ್ಟಿ:

ಅಂಕಪಟ್ಟಿಯಲ್ಲಿ ಯು ಮುಂಬಾ, ದಬಂಗ್ ಡೆಲ್ಲಿ, ಗುಜರಾತ್ ಜೈಂಟ್ಸ್, ಬೆಂಗಾಲ್ ವಾರಿಯರ್ಸ್ ಮತ್ತು ಪಟ್ನಾ ಪೈರೇಟ್ಸ್ ತಂಡಗಳು ಮೊದಲ ಐದು ಸ್ಥಾನದಲ್ಲಿವೆ. ಬೆಂಗಳೂರು ಬುಲ್ಸ್ ಹೊರತುಪಡಿಸಿ ಉಳಿದ ಎಲ್ಲಾ ತಂಡಗಳು ಅಂಕಪಟ್ಟಿಯಲ್ಲಿ ಕನಿಷ್ಠ ಒಂದಾದರೂ ಪಾಯಿಂಟ್ ಹೊಂದಿವೆ.
Published by:Vijayasarthy SN
First published: