PKL 8: ಪವನ್ ಸೂಪರ್ ರೇಡ್; ಬೆಂಗಳೂರು ಬುಲ್ಸ್​ಗೆ ದಾಖಲೆ ಗೆಲುವು; ಮಣ್ಣುಮುಕ್ಕಿದ ದಬಂಗ್ ಡೆಲ್ಲಿ

Pro Kabaddi League 2022: ಬೆಂಗಳೂರು ಬುಲ್ಸ್ ತಂಡ 61-22 ಅಂಕಗಳಿಂದ ದಬಂಗ್ ಡೆಲ್ಲಿಯನ್ನ ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ಮತ್ತು ಯು ಪಿ ಯೋದ್ಧಾ ತಂಡಗಳು 36-36ರಿಂದ ಡ್ರಾ ಮಾಡಿಕೊಂಡವು.

ಬೆಂಗಳೂರು ಬುಲ್ಸ್ ಮತ್ತು ದಬಂಗ್ ಡೆಲ್ಲಿ ಪಂದ್ಯ

ಬೆಂಗಳೂರು ಬುಲ್ಸ್ ಮತ್ತು ದಬಂಗ್ ಡೆಲ್ಲಿ ಪಂದ್ಯ

  • News18
  • Last Updated :
  • Share this:
    ಬೆಂಗಳೂರು, ಜ. 12: ಎಕ್ಸ್​ಪ್ರೆಸ್ ಆಟಗಾರ ನವೀನ್ ಮೇಲೆ ತಾನು ಎಷ್ಟರಮಟ್ಟಿಗೆ ಅವಲಂಬಿತವಾಗಿದ್ದೇನೆ ಎಂಬ ದಬಂಗ್ ಡೆಲ್ಲಿಗೆ ಇಂದು ಆಯಿತು. ನವೀನ್ ಅನುಪಸ್ಥಿತಿಯಲ್ಲಿ ಇಂದು ಬೆಂಗಳೂರು ಬುಲ್ಸ್ ವಿರುದ್ಧ ಆಡಿದ ದಬಂಗ್ ಡೆಲ್ಲಿ ಹೀನಾಯವಾಗಿ ಸೋಲಪ್ಪಿತು. ಮಿಂಚಿನಂತೆ ರೇಡ್ ಮಾಡಿ ಅಂಕಗಳ ಮೇಲೆ ಅಂಕಗಳನ್ನ ಬಾಚಿ ಗುಡ್ಡೆ ಹಾಕುತ್ತಿದ್ದ ನವೀನ್ ಇಲ್ಲದೆ ದಬಂಗ್ ಡೆಲ್ಲಿ ಒಂದೊಂದು ಅಂಕ ಗಳಿಸಲೂ ಪರದಾಡಿತು. ಇಂದು ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 61-22 ಅಂಕಗಳಿಂದ ದಬಂಗ್ ಡೆಲ್ಲಿಯನ್ನ ಮಕಾಡೆ ಕೆಡವಿತು. 39 ಅಂಕಗಳ ಅಂತರದ ಗೆಲುವು ಪ್ರೋಕಬಡ್ಡಿ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ಅಂತರದ ಗೆಲುವಾಗಿದೆ.

    ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ ಮೊದಲ ಬಾರಿಗೆ ಈ ಸೀಸನ್​ನಲ್ಲಿ ಪಂದ್ಯವೊಂದರಲ್ಲಿ 20 ಅಂಕಗಳ ಗಡಿದಾಟಿದರು. ಪವನ್ 27 ರೇಡ್​ಗಳಿಂದ 27 ಅಂಕ ಕಲೆಹಾಕಿದ್ದು ವಿಶೇಷ. ಈ 27 ರೇಡ್​ನಲ್ಲಿ ಅವರು ಸಿಕ್ಕಿಬಿದ್ದದ್ದು ಕೇವಲ 3 ಬಾರಿ ಮಾತ್ರ. ಇತರ ಪ್ರಮುಖ ರೇಡರ್​ಗಳಾದ ಭರತ್ ಮತ್ತು ಚಂದ್ರನ್ ರಂಜಜಿತ್ ಕ್ರಮವಾಗಿ 7 ಮತ್ತು 5 ಅಂಕಗಳನ್ನ ಗಳಿಸಿದರು. ಬೆಂಗಳೂರು ಬುಲ್ಸ್ ತಂಡದ ಡಿಫೆಂಡರ್​ಗಳೂ ಇವತ್ತು ಸೂಪರ್ ಶೋ ಕೊಟ್ಟರು.

    ದಬಂಗ್ ಡೆಲ್ಲಿ ಪರ ಅಶು ಮಲಿಕ್ 13 ರೇಡ್​ಗಳನ್ನ ಮಾಡಿ 6 ಅಂಕ ಗಳಿಸುವಲ್ಲಿ ಮಾತ್ರ ಶಕ್ಯರಾದರು. ಈ ಆರು ಅಂಕದಲ್ಲಿ ಮೂರು ಬೋನಸ್ ಅಂಕಗಳೇ ಇವೆ. ಹಿರಿಯ ಆಟಗಾರ ಅಜಯ್ ಠಾಕೂರ್ ಅವರಿಗೆ ಕೇವಲ 6 ಅಂಕ ಗಳಿಸಲು ಮಾತ್ರ ಸಾಧ್ಯವಾಯಿತು. ಆರಂಭದಿಂದ ಕೊನೆಯವರೆಗೆ ಈ ಪಂದ್ಯ ಬೆಂಗಳೂರು ಬುಲ್ಸ್ ತಂಡದ ಹಿಡಿತದಲ್ಲೇ ಇತ್ತು.

    ಬೆಂಗಳೂರು ಬುಲ್ಸ್ ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿತು. ದಬಂಗ್ ಡೆಲ್ಲಿ ಮೊದಲ ಬಾರಿಗೆ 3ನೇ ಸ್ಥಾನಕ್ಕೆ ಕುಸಿಯಿತು.

    ಇದನ್ನೂ ಓದಿ: PKL 8: ತೆಲುಗು ಟೈಟಾನ್ಸ್​ಗೆ 8ನೇ ಪಂದ್ಯದಲ್ಲೂ ಸಿಗದ ಜಯ; ಪಟ್ನಾ ಪೈರೇಟ್ಸ್ ಅಗ್ರಸ್ಥಾನಕ್ಕೆ

    ಹರ್ಯಾಣ ಸ್ಟೀಲರ್ಸ್-ಯುಪಿ ಯೋದ್ಧಾ ಪಂದ್ಯ ಡ್ರಾ:

    ಇಂದಿನ ಮೊದಲ ಪಂದ್ಯ ರೋಚಕವಾಗಿತ್ತು. ಹರಿಯಾಣ ಸ್ಟೀಲರ್ಸ್ ಮತ್ತು ಯುಪಿ ಯೋದ್ಧಾ ನಡುವಿನ ಪಂದ್ಯ 36-36 ಅಂಕಗಳಿಂದ ಸಮವಾಯಿತು.

    ಹರ್ಯಾಣ ಸ್ಟೀಲರ್ಸ್ ಪರ ರೇಡರ್ ವಿಕಾಶ್ ಕಂಡಾಲ ಮಿಂಚಿದರೆ, ಯು ಪಿ ಯೋದ್ಧಾ ತಂಡದ ಸುರೇಂದರ್ ಗಿಲ್ ಗಮನ ಸೆಳೆಯುವ ಪ್ರದರ್ಶನ ನೀಡಿದರು.

    ಎರಡೂ ತಂಡಗಳು ಸಮಾನವಾಗಿ 23 ಅಂಕಗಳನ್ನ ಹೊಂದಿವೆ. ಅಂಕಪಟ್ಟಿಯಲ್ಲಿ ಯುಪಿ ಯೋದ್ಧಾ 6ನೇ ಸ್ಥಾನದಲ್ಲಿದ್ದರೆ ಹರ್ಯಾಣ ಸ್ಟೀಲರ್ಸ್ 8ನೇ ಸ್ಥಾನದಲ್ಲಿದೆ.

    ನಾಳೆಯ ಪಂದ್ಯಗಳು:

    1) ಬೆಂಗಾಲ್ ವಾರಿಯರ್ಸ್ vs ತಮಿಳ್ ತಲೈವಾಸ್, ಸಮಯ ಸಂಜೆ 7:30ಕ್ಕೆ

    2) ಯು ಮುಂಬಾ vs ಪುಣೇರಿ ಪಲ್ಟನ್, ಸಮಯ ರಾತ್ರಿ 8:30ಕ್ಕೆ

    ಇದನ್ನೂ ಓದಿ: IPL 2022: ನಾಯಕರಿಲ್ಲದ ತಂಡಗಳು; ನಾಯಕರಾಗಬಲ್ಲ ಆಟಗಾರರು, ಇಲ್ಲಿದೆ ಡೀಟೇಲ್ಸ್

    ಅಂಕಪಟ್ಟಿ:

    1) ಪಟ್ನ ಪೈರೇಟ್ಸ್: 34 ಅಂಕ
    2) ಬೆಂಗಳೂರು ಬುಲ್ಸ್: 33 ಅಂಕ
    3) ದಬಂಗ್ ಡೆಲ್ಲಿ: 32 ಅಂಕ
    4) ತಮಿಳ್ ತಲೈವಾಸ್: 27 ಅಂಕ
    5) ಯು ಮುಂಬಾ: 25 ಅಂಕ
    6) ಯು ಪಿ ಯೋದ್ಧಾ: 23 ಅಂಕ
    7) ಜೈಪುರ್ ಪಿಂಕ್ ಪ್ಯಾಂಥರ್ಸ್: 23 ಅಂಕ
    8) ಹರ್ಯಾಣ ಸ್ಟೀಲರ್ಸ್: 23 ಅಂಕ
    9) ಗುಜರಾತ್ ಜೈಂಟ್ಸ್: 20 ಅಂಕ
    10) ಬೆಂಗಾಲ್ ವಾರಿಯರ್ಸ್: 17 ಅಂಕ
    11) ಪುಣೇರಿ ಪಲ್ಟನ್: 16 ಅಂಕ
    12) ತೆಲುಗು ಟೈಟಾನ್ಸ್: 10 ಅಂಕ
    Published by:Vijayasarthy SN
    First published: