ಪ್ರೋ ಕಬಡ್ಡಿ ಫೈನಲ್: ಪ್ರಶಸ್ತಿಗಾಗಿ ಬೆಂಗಳೂರು-ಗುಜರಾತ್ ಫೈಟ್

ಬಲಿಷ್ಠ ತಂಡವಾಗಿ ಹೊರ ಹೊಮ್ಮಿರುವ ಬೆಂಗಳೂರು ಬುಲ್ಸ್​ ತಂಡ ಪ್ರಶಸ್ತಿ ಬಾಚಿಕೊಳ್ಳುವ ತವಕದಲ್ಲಿದೆ. ಒಟ್ಟು 13 ಪಂದ್ಯಗಳನ್ನು ಗೆದ್ದಿರುವ ಬೆಂಗಳೂರು 78 ಅಂಕ ತನ್ನ ಖಾತೆಯಲ್ಲಿ ಸೇರಿಸಿಕೊಂಡಿದೆ.

Vinay Bhat | news18
Updated:January 5, 2019, 5:09 PM IST
ಪ್ರೋ ಕಬಡ್ಡಿ ಫೈನಲ್: ಪ್ರಶಸ್ತಿಗಾಗಿ ಬೆಂಗಳೂರು-ಗುಜರಾತ್ ಫೈಟ್
Pic: Twitter
  • News18
  • Last Updated: January 5, 2019, 5:09 PM IST
  • Share this:
ಮುಂಬೈ: ಆರನೇ ಆವೃತ್ತಿಯ ಕಬಡ್ಡಿ ಹಬ್ಬ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಇಂದು ಮುಂಬಯಿಯಲ್ಲಿ ಬೆಂಗಳೂರು ಬುಲ್ಸ್​ ಹಾಗೂ ಗುಜರಾತ್ ಫಾರ್ಚೂನ್​​​​ ಜೈಂಟ್ಸ್​ ನಡುವೆ ಫೈನಲ್ ಕಾದಾಟ ನಡೆಯಲಿದೆ.

ಈ ಹಿಂದೆ 2017 ಹಾಗೂ 2015 ರಲ್ಲಿ ಗುಜರಾತ್ ತಂಡ ಫೈನಲ್​ಗೆ ಲಗ್ಗೆ ಇಟ್ಟಿತ್ತಾದರು ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಬಾರಿ 22 ಪಂದ್ಯಗಳಲ್ಲಿ 17ರಲ್ಲಿ ಗೆದ್ದು 3ರಲ್ಲಿ ಸೋತು ಒಟ್ಟು 93 ಅಂಕ ತನ್ನದಾಗಿಸಿದೆ. ಗುಜರಾತ್ ತಂಡದ ಡಿಫೆನ್ಸ್​ ವೀಕ್ ಆಗಿದ್ದರು ರೈಡಿಂಗ್​ನಲ್ಲಿ ಹೆಚ್ಚು ಬಲಿಷ್ಠವಾಗಿದೆ.

ಇತ್ತ ಬಲಿಷ್ಠ ತಂಡವಾಗಿ ಹೊರ ಹೊಮ್ಮಿರುವ ಬೆಂಗಳೂರು ಬುಲ್ಸ್​ ತಂಡ ಪ್ರಶಸ್ತಿ ಬಾಚಿಕೊಳ್ಳುವ ತವಕದಲ್ಲಿದೆ. ಒಟ್ಟು 13 ಪಂದ್ಯಗಳನ್ನು ಗೆದ್ದಿರುವ ಬೆಂಗಳೂರು 78 ಅಂಕ ತನ್ನ ಖಾತೆಯಲ್ಲಿ ಸೇರಿಸಿಕೊಂಡಿದೆ. ರೈಡಿಂಗ್ ಹಾಗೂ ಡಿಫೆನ್ಸ್​ ವಿಭಾಗಗಳಲ್ಲಿ ಅತ್ಯಂತ ಬಲಶಾಲಿಯಾಗಿರುವ ತಂಡಕ್ಕೆ ನಾಯಕ ರೋಹಿತ್ ಕುಮಾರ್ ಅವರ ತಾಳ್ಳೆಯ ಆಟ ಪ್ಲಸ್ ಪಾಯಿಂಟ್.

ಇದನ್ನೂ ಓದಿ: (VIDEO): ಆಸೀಸ್ ನೆಲದಲ್ಲಿ ನಾವು ಭಾರತೀಯರೆಂದು ಮತ್ತೆ ಸಾಭೀತು ಮಾಡಿದ ಕನ್ನಡಿಗ

ಸದ್ಯ ಉಭಯ ತಂಡಗಳು ಮೊದಲ ಕಿರೀಟಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದು, ರಾತ್ರಿ 8 ಗಂಟೆಗೆ ಆರಂಭವಾಗಲಿರುವ ಹೈ ವೋಲ್ಟೇಜ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

First published: January 5, 2019, 5:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading