ಬೆಂಗಳೂರು, ಜ. 4: ಇಂದು ನಡೆದ ಪ್ರೋಕಬಡ್ಡಿ ಲೀಗ್ನ ಎರಡು ಪಂದ್ಯಗಳಲ್ಲಿ ಹರ್ಯಾಣ ಸ್ಟೀಲರ್ಸ್ ಮತ್ತು ಯು ಮುಂಬಾ (Haryana Steelers vs U Mumba) ನಡುವಿನ ಮೊದಲು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಎರಡನೇ ಪಂದ್ಯದಲ್ಲಿ ಯುಪಿ ಯೋದ್ಧಾ ತಂಡದ ಪ್ರತಿರೋಧವನ್ನ ಹಿಮ್ಮೆಟ್ಟಿಸಿದ ತಮಿಳ್ ತಲೈವಾಸ್ (Tamil Thalaivas beat U P Yoddha) ಟೂರ್ನಿಯಲ್ಲಿ ಎರಡನೇ ಗೆಲುವು ಪಡೆಯಿತು.
ಲೋ ಸ್ಕೋರಿಂಗ್ ಇದ್ದ ಮೊದಲ ಪಂದ್ಯದಲ್ಲಿ ಯು ಮುಂಬಾ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು 24-24 ಅಂಕಗಳಿಂದ ಸ್ಕೋರು ಸಮ ಮಾಡಿಕೊಂಡವು. ಹರ್ಯಾಣ ಸ್ಟೀಲರ್ಸ್ ತಂಡ ರೇಡಿಂಗ್ನಲ್ಲಿ ಹೆಚ್ಚು ಅಂಕ ಗಳಿಸಿದರೆ ಯು ಮುಂಬಾ ತಂಡದ ಡಿಫೆನ್ಸ್ ಭರ್ಜರಿಯಾಗಿತ್ತು. ಆರಂಭದಿಂದ ಕೊನೆಯವರೆಗೂ ಎರಡೂ ತಂಡಗಳ ಮಧ್ಯೆ ಸ್ಕೋರ್ನಲ್ಲಿ ಅಷ್ಟೇನೂ ವ್ಯತ್ಯಾಸ ಕಾಣಲಿಲ್ಲ. ಕೊನೆಯವರೆಗೂ ತುರುಸಿ ಪೈಪೋಟಿ ಇತ್ತು. ಹರ್ಯಾಣದ ಆಲ್ರೌಂಡರ್ ರೋಹಿತ್ ಗುಲಿಯಾ 8 ಅಂಕ ಗಳಿಸಿ ಗಮನ ಸೆಳೆದರು.
ಈ ಡ್ರಾ ಪಂದ್ಯದ ಮೂಲಕ ಯು ಮುಂಬಾ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿದರೆ ಹರಿಯಾಣ ಸ್ಟೀಲರ್ಸ್ ತಂಡ 7ನೇ ಸ್ಥಾನಕ್ಕೆ ಏರಿತು.
ತಮಿಳ್ ತಲೈವಾಸ್ಗೆ ರೋಚಕ ಗೆಲುವು:
ಇಂದಿನ ಎರಡನೇ ಪಂದ್ಯದಲ್ಲಿ ಯು ಪಿ ಯೋದ್ಧಾ ವಿರುದ್ಧ ತಮಿಳ್ ತಲೈವಾಸ್ 39-33 ಅಂಕಗಳಿಂದ ಸೋಲಿಸಿತು. ಸುರೇಂದರ್ ಗಿಲ್ ಅವರು 14 ಅಂಕ ಗಳಿಸಿ ಮೆರೆದರೂ ತಮಿಳ್ ತಲೈವಾಸ್ ಗೆಲುವನ್ನ ತಡೆಯಲು ಆಗಲಿಲ್ಲ. ರೇಡಿಂಗ್ನಲ್ಲಿ ಮಂಜೀತ್(7), ಅಜಿಂಕ್ಯ ಪವಾರ್(6), ಪ್ರಪಂಜನ್(5), ಭವಾನಿ ರಾಜಪೂತ್(4) ಅವರು ಮಿಂಚಿದರೆ ಡಿಫೆನ್ಸ್ನಲ್ಲಿ ಸಾಗರ್ ಮತ್ತು ಸುರ್ಜೀತ್ ಭದ್ರಕೋಟೆಯಂತಿದ್ದರು.
ಇದನ್ನೂ ಓದಿ: PKL 8: ಅಂಕಪಟ್ಟಿ, ಅತಿಹೆಚ್ಚು ಯಶಸ್ವಿ ರೇಡ್, ಟ್ಯಾಕಲ್ನಲ್ಲಿ ಬಂಗಳೂರು ಬುಲ್ಸ್ ಮುಂದು
ಅತ್ತ ಯುಪಿ ಯೋದ್ಧಾ ತಂಡಕ್ಕೆ ಸುರೇಂದರ್ ಗಿಲ್ ಅವರೊಬ್ಬರೇ ರೇಡಿಂಗ್ ಶಕ್ತಿ ಎನಿಸಿದ್ದರು. ಸ್ಟಾರ್ ಆಟಗಾರ ಪ್ರದೀಪ್ ನರ್ವಾಲ್ 6 ಅಂಕ ಗಳಿಸಿದರು. ಡಿಫೆನ್ಸ್ನಲ್ಲಿ ಶುಭಂ ಕುಮಾರ್ ಮತ್ತು ಅಂಶು ಸಿಂಗ್ ಉತ್ತಮ ಪ್ರದರ್ಶನ ನೀಡಿದರು.
ನಾಳೆ ಪಂದ್ಯಗಳು:
1) ಪುಣೇರಿ ಪಲ್ಟಾನ್ vs ಗುಜರಾತ್ ಜೈಂಟ್ಸ್, ಸಮಯ 7:30ಕ್ಕೆ
2) ದಬಂಗ್ ಡೆಲ್ಲಿ vs ತೆಲುಗು ಟೈಟಾನ್ಸ್, ಸಮಯ 8:30ಕ್ಕೆ
ಇದನ್ನೂ ಓದಿ: Pro Kabaddi: ಕಬಡ್ಡಿ ಅಂಗಳ ಅಳತೆ, ವಿವಿಧ ನಿಯಮಗಳು, ಫೌಲ್, ಎಲ್ಲಾ ಡೀಟೇಲ್ಸ್
ಅಂಕಪಟ್ಟಿ:
1) ಬೆಂಗಳೂರು ಬುಲ್ಸ್: 23 ಅಂಕ
2) ದಬಂಗ್ ಡೆಲ್ಲಿ: 21 ಅಂಕ
3) ಪಟ್ನಾ ಪೈರೇಟ್ಸ್: 21 ಅಂಕ
4) ಯು ಮುಂಬಾ: 20 ಅಂಕ
5) ತಮಿಳ್ ತಲೈವಾಸ್: 19 ಅಂಕ
6) ಬೆಂಗಾಲ್ ವಾರಿಯರ್ಸ್: 16 ಅಂಕ
7) ಹರ್ಯಾಣ ಸ್ಟೀಲರ್ಸ್: 15 ಅಂಕ
8) ಯು ಪಿ ಯೋದ್ಧಾ: 14 ಅಂಕ
9) ಗುಜರಾತ್ ಜೈಂಟ್ಸ್: 13 ಅಂಕ
10) ಜೈಪುರ್ ಪಿಂಕ್ ಪ್ಯಾಂಥರ್ಸ್: 12 ಅಂಕ
11) ತೆಲುಗು ಟೈಟಾನ್ಸ್: 9 ಅಂಕ
12) ಪುಣೇರಿ ಪಲ್ಟಾನ್: 5 ಅಂಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ