PKL 8: ಜೈಪುರ್, ಪುಣೆ, ಯುಪಿ ತಂಡಗಳಿಗೆ ಚೊಚ್ಚಲ ಗೆಲುವು; ನಾಳೆ ಬುಲ್ಸ್ ಫೈಟ್

Pro Kabaddi League: ಇಂದು ಪಿಕೆಎಲ್​ನ 4ನೇ ದಿನದಂದು ಯುಪಿ ಯೋದ್ಧಾ, ಪುಣೇರಿ ಪಲ್ಟಾನ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಗಳು ಈ ಸೀಸನ್ನಲ್ಲಿ ತಮ್ಮ ಚೊಚ್ಚಲ ಗೆಲುವಿನ ನಗೆ ಬೀರಿವೆ. ನಾಳೆ ಬೆಂಗಳೂರು ಬುಲ್ಸ್ ಪಂದ್ಯ ಇದೆ.

ಯುಪಿ ಯೋದ್ಧಾ ಮತ್ತು ಪಟ್ನಾ ಪೈರೇಟ್ಸ್

ಯುಪಿ ಯೋದ್ಧಾ ಮತ್ತು ಪಟ್ನಾ ಪೈರೇಟ್ಸ್

  • News18
  • Last Updated :
  • Share this:
    ಬೆಂಗಳೂರು, ಡಿ. 25: ಇಂದು ಪ್ರೋಕಬಡ್ಡಿ ಲೀಗ್​ನ (Pro Kabaddi League) ನಾಲ್ಕನೇ ದಿನ ಎಲ್ಲಾ ಮೂರು ಪಂದ್ಯಗಳು ರಣರೋಚಕವಾಗಿದ್ದವು. ಯುಪಿ ಯೋದ್ಧಾ, ಪುಣೇರಿ ಪಲ್ಟಾನ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಗಳು ತಂತಮ್ಮ ಪಂದ್ಯಗಳಲ್ಲಿ ರೋಚಕ ಗೆಲುವು ಪಡೆದವು. ಪಟ್ನಾ ಪೈರೇಟ್ಸ್, ತೆಲುಗು ಟೈಟಾನ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಸೋಲುವ ಮುನ್ನ ವೀರೋಚಿತ ಹೋರಾಟ ನೀಡುವಲ್ಲಿ ಸಫಲವಾದವು. ಕುತೂಹಲವೆಂದರೆ ಯುಪಿ ಯೋದ್ಧಾ, ಪುಣೇರಿ ಪಲ್ಟಾನ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಗಳಿಗೆ ಇದು ಈ ಸೀಸನ್​ನಲ್ಲಿ ಸಿಕ್ಕಿದ ಮೊದಲ ಗೆಲುವಾಗಿದೆ.

    ಯುಪಿ ಯೋದ್ಧಾಗೆ ಗೆಲುವು

    ದಿನದ ಮೊದಲ ಪಂದ್ಯದಲ್ಲಿ ಮೂರು ಬಾರಿ ಚಾಂಪಿಯನ್ಸ್ ಪಟ್ನಾ ಪೈರೇಟ್ಸ್ ವಿರುದ್ಧ ಯುಪಿ ಯೋದ್ಧಾ 36-35 ಅಂಕಗಳಿಂದ ಸೋಲಿಸಿದರು. ಪ್ರದೀಪ್ ನರ್ವಾಲ್ 12 ರೇಡಿಂಗ್ ಪಾಯಿಂಟ್ಸ್ ಗಳಿಸಿ ಯೋದ್ಧಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 20 ರೇಡ್ ಮಾಡಿದ ನರ್ವಾಲ್ 9 ಟಚ್ ಪಾಯಿಂಟ್ಸ್ ಮತ್ತು 3 ಬೋನಸ್ ಪಾಯಿಂಟ್ ಗಳಸಲು ಶಕ್ಯರಾದರು. ಪಟ್ನಾ ತಂಡಕ್ಕೆ ಸಚಿನ್ ಸೂಪರ್ ರೇಡರ್ ಎನಿಸಿದರು. ಇವರು ಮಾಡಿದ 14 ರೇಡಿಂಗ್​ನಲ್ಲಿ 10 ಅಂಕ ಗಳಿಸಿದರು.

    ಪುಣೇರಿಗೆ ಜಯ:

    ಬಾಹುಬಲಿ ಎಂದೇ ಫೇಮಸ್ ಆಗಿರುವ ಸಿದ್ಧಾರ್ಥ್ ದೇಸಾಯ್ ಅವರ 15 ಅಂಕಗಳು ತೆಲುಗು ಟೈಟಾನ್ಸ್ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಇಂದಿನ ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಪುಣೇರಿ ಪಲ್ಟಾನ್ 34-33 ಅಂಕಗಳಿಂದ ಗೆಲುವು ಪಡೆಯಿತು. ಸಬ್​ಸ್ಟಿಟ್ಯೂಟ್ ಆಗಿ ಬಂದ ಮೋಹಿತ್ ಗೋಯಟ್ ಮತ್ತು ಅಸ್ಲಮ್ ಇನಾಮ್ದಾರ್ ಅವರು ಪುಣೇರಿ ಗೆಲುವಿನ ರೂವಾರಿಗಳೆನಿಸಿದರು.

    ಇದನ್ನೂ ಓದಿ: Bengaluru Bulls Victory: ತಮಿಳ್ ತಲೈವಾಸ್ ವಿರುದ್ಧ ಗೆದ್ದುಬೀಗಿದ ಬೆಂಗಳೂರು ಬುಲ್ಸ್

    ಜೈಪುರಕ್ಕೆ ರೋಚಕ ಜಯ:

    ದಿನದ ಕೊನೆಯ ಹಾಗೂ ಮೂರನೇ ಪಂದ್ಯ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ಮಧ್ಯೆ ನಡೆಯಿತು. ಇದೂ ಕೂಡ ರೋಚಕ ಹಣಾಹಣಿ ಕಂಡಿತ್ತು. ಇದರಲ್ಲಿ ಜೈಪುರ್ 40-38 ಅಂಕಗಳಿಂದ ಜಯ ಸಾಧಿಸಿತು. ಅರ್ಜುನ್ ದೇಶವಾಲ್ 18 ಮತ್ತು ದೀಪಕ್ ಹೂಡ 10 ಅಂಕ ಗಳಿಸಿ ಜೈಪುರದ ಗೆಲುವಿಗೆ ಕಾರಣಕರ್ತರೆನಿಸಿದರು. ಹರಿಯಾಣ ಸ್ಟೀಲರ್ಸ್ ತಮಡದ ಪರ ವಿಕಾಸ್ ಖಂಡಾಲ 14 ಮತ್ತು ರೋಹಿತ್ ಗುಲಿಯಾ 7 ಅಂಕಗಳನ್ನ ಗಳಿಸಿ ಪ್ರತಿಹೋರಾಟಕ್ಕೆ ಕಾರಣರಾದರು.

    ಅಗ್ರಸ್ಥಾನದಲ್ಲಿ ಡಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್:

    ಈಗ ಎರಡು ಸುತ್ತಿನ ಪಂದ್ಯಗಳು ಮುಕ್ತಾಯವಾಗಿವೆ. ಎಲ್ಲಾ 12 ತಂಡಗಳು ತಲಾ ಎರಡೆರಡು ಪಂದ್ಯಗಳನ್ನ ಆಡಿವೆ. ದಬಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ತಲಾ 10 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿವೆ.

    ಯು ಮುಂಬಾ, ಗುಜರಾತ್ ಜೇಂಟ್ಸ್, ಪಟ್ನಾ ಪೈರೇಟ್ಸ್,  ಯುಪಿ  ಯೋದ್ಧಾ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಗಳು ತಲಾ 6 ಅಂಕಗಳೊಂದಿಗೆ ಜಂಟಿ 3-7 ಸ್ಥಾನಗಳನ್ನ ಹಂಚಿಕೊಂಡಿವೆ. ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟಾನ್ ತಂಡಗಳು 5 ಅಂಕಗಳೊಂದಿಗೆ 8-9ನೇ ಸ್ಥಾನದಲ್ಲಿವೆ.

    ಇದನ್ನೂ ಓದಿ: PKL 8: ಪ್ರೋಕಬಡ್ಡಿಯಲ್ಲಿ 15ಕ್ಕೂ ಹೆಚ್ಚು ಕನ್ನಡಿಗರು; ಇಬ್ಬರು ಕ್ಯಾಪ್ಟನ್ಸ್; ಮೂವರು ಕೋಚ್

    ಡಿ. 26, ಭಾನುವಾರದ ಪಂದ್ಯಗಳು:

    1) ಗುಜರಾತ್ ಜೇಂಟ್ಸ್ vs ದಬಾಂಗ್ ಡೆಲ್ಲಿ (ಸಮಯ ಸಂಜೆ 7:30ಕ್ಕೆ)

    2) ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್ (ಸಮಯ ರಾತ್ರಿ 8:30ಕ್ಕೆ)

    ಕರ್ನಾಟಕದ ಕೋಚ್ ಮತ್ತು ಆರು ಆಟಗಾರರನ್ನ ಹೊಂದಿರುವ ಬೆಂಗಾಲ್ ವಾರಿಯರ್ಸ್ ತಂಡ ಕರ್ನಾಟಕದವರೇ ಇಲ್ಲದ ಬೆಂಗಳೂರು ಬುಲ್ಸ್ ತಂಡಕ್ಕೆ ಭಾನುವಾರ ಸವಾಲೊಡ್ಡಿದೆ. ಬುಲ್ಸ್ ಕೋಚ್ ರಣಧೀರ್ ಸಿಂಗ್ ಅವರಿಗೆ ಸಹಾಯಕರಾಗಿದ್ದ ಬಿ.ಸಿ. ರಮೇಶ್ ಈಗ ಪೂರ್ಣಪ್ರಮಾಣದ ಕೋಚ್ ಆಗಿ ತಮ್ಮ ಗುರುವಿಗೆ ಸವಾಲೊಡ್ಡುತ್ತಿದ್ದಾರೆ.

    ಅಪ್ರತಿಮ ರಣತಂತ್ರ ವ್ಯೂಹಗಳಿಗೆ ಹೆಸರುವಾಸಿಯಾದ ಬಿ.ಸಿ. ರಮೇಶ್ ಅವರು ಹಾಲಿ ಚಾಂಪಿಯನ್ಸ್ ಬೆಂಗಾಳ್ ವಾರಿಯರ್ಸ್ ತಂಡಕ್ಕೆ ಇನ್ನಷ್ಟು ಶಕ್ತಿ ತುಂಬಿರುವುದು ಹೌದು. ಬುಲ್ಸ್ ಮತ್ತು ವಾರಿಯರ್ಸ್ ನಡುವಿನ ಹಣಾಹಣಿ ಬಹಳಷ್ಟು ರೋಚಕವಾಗಿರುವುದರಲ್ಲಿ ಅನುಮಾನ ಇಲ್ಲ.
    Published by:Vijayasarthy SN
    First published: