Bengaluru Bulls- ಪ್ರೋಕಬಡ್ಡಿ: ಬೆಂಗಳೂರು ಬುಲ್ಸ್ ಪಂದ್ಯಗಳ ವೇಳಾಪಟ್ಟಿ, ಆಟಗಾರರ ಪಟ್ಟಿ

PKL 8: ಪ್ರೋಕಬಡ್ಡಿ ಪಂದ್ಯಾವಳಿ ಬೆಂಗಳೂರಿನಲ್ಲಿ ಎರಡು ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದ ವೇಳಾಪಟ್ಟಿ ಪ್ರಕಟವಾಗಿದೆ. ಡಿ. 22ರಂದು ಆರಂಭವಾಗಿ ಜ. 20ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿವೆ. ಬೆಂಗಳೂರು ಬುಲ್ಸ್ ತಂಡದ ವಿವರ ಇಲ್ಲಿದೆ:

ಬೆಂಗಳೂರು ಬುಲ್ಸ್ ತಂಡ

ಬೆಂಗಳೂರು ಬುಲ್ಸ್ ತಂಡ

 • Share this:
  ಬೆಂಗಳೂರು: ಎಂಟನೇ ಸೀಸನ್​ನ ಪ್ರೋಕಬಡ್ಡಿ ಪಂದ್ಯಾವಳಿ ಇದೇ ಡಿಸೆಂಬರ್ 22ಕ್ಕೆ ಆರಂಭವಾಗುತ್ತಿದೆ. ಎರಡು ಹಂತದಲ್ಲಿ ಟೂರ್ನಿ ಆಯೋಜಿಸಲಾಗುತ್ತಿದ್ದು, ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಡಿ. 22ಕ್ಕೆ ಆರಂಭಗೊಳ್ಳುವ ಮೊದಲ ಸುತ್ತು ಜನವರಿ 20ರವರೆಗೆ ನಡೆಯಲಿದೆ. ಜನವರಿ ಮೊದಲೆರಡು ವಾರದೊಳಗೆ ಎರಡನೇ ಹಂತದ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ.

  ಒಟ್ಟು 12 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು, ಪ್ರತೀ ತಂಡವು ಎರಡು ಬಾರಿ ಇತರ ತಂಡಗಳೊಂದಿಗೆ ಸೆಣಸಲಿದೆ. ಬೆಂಗಳೂರು ಬುಲ್ಸ್ ಸೇರಿ ಎಲ್ಲಾ ತಂಡಗಳು ಕೂಡ ಮೊದಲ ಸುತ್ತಿನಲ್ಲಿ 11 ಪಂದ್ಯಗಳು, ಎರಡನೇ ಸುತ್ತಿನಲ್ಲಿ 11 ಪಂದ್ಯಗಳನ್ನ ಆಡಲಿವೆ. ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಕಬಡ್ಡಿ ಯಾನ ಆರಂಭವಾಗಲಿದ್ದು ಜನವರಿ 16ರವರೆಗೆ ನಡೆಯಲಿದೆ.

  ಬೆಂಗಳೂರು ಬುಲ್ಸ್ ತಂಡದ ಸ್ಟಾರ್ ಆಟಗಾರರು:

  ಬೆಂಗಳೂರು ಬುಲ್ಸ್ ತಂಡ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಬಲಶಾಲಿಯಾಗಿದೆ. ಪವನ್ ಶೆರಾವತ್ ಬೆಂಗಳೂರು ಬುಲ್ಸ್ ತಂಡದ ಟ್ರಂಪ್ ಕಾರ್ಡ್. ಚಂದ್ರನ್ ರಂಜಿತ್, ಇರಾನೀ ಆಟಗಾರ ಅಬೋಲ್ ಫಜಲ್, ಕೊರಿಯಾ ಆಟಗಾರ ಡಾಂಗ್ ಗಿಯೋನ್ ಲೀ, ದೀಪಕ್ ನರವಾಲ್, ಜಿಬಿ ಮೋರೆ ಅವರು ಬುಲ್ಸ್ ತಂಡಕ್ಕೆ ಶಕ್ತಿ ತುಂಬಿದ್ದಾರೆ.

  ಇದನ್ನೂ ಓದಿ: Kabaddi Moves- ಡುಬ್ಕಿ, ಫ್ರಾಗ್ ಜಂಪ್, ಸ್ಕಾರ್ಪಿಯನ್ ಕಿಕ್… 6 ಸಖತ್ ಕಬಡ್ಡಿ ರೇಡಿಂಗ್ ಕಲೆಗಳು

  ಒಮ್ಮೆ ಚಾಂಪಿಯನ್ ಆಗಿದ್ದ ಬುಲ್ಸ್:

  ಎರಡು ಸೀಸನ್ ಹಿಂದೆ ಬೆಂಗಳೂರು ಬುಲ್ಸ್ ತಂಡ ಪ್ರೋಕಬಡ್ಡಿ ಚಾಂಪಿಯನ್ ಆಗಿತ್ತು. ಕಳೆದ ಸೀಸನ್​ನಲ್ಲಿ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಿ ನಿರ್ಗಮಿಸಿತ್ತು.

  ಬೆಂಗಳೂರು ಬುಲ್ಸ್ ತಂಡ:

  ರೇಡರ್ಸ್: ಪವನ್ ಶೆರಾವತ್, ದೀಪಕ್ ನರ್ವಾಲ್, ಬಂಟಿ, ಚಂದ್ರನ್ ರಂಜಿತ್, ಅಬೋಲ್​ಫಜಲ್ ಮಗಸುದ್​ಲೂಮಹಾಲಿ (ಇರಾನೀ ಆಟಗಾರ), ಡಾಂಗ್ ಗಿಯೋನ್ ಲೀ (ಕೊರಿಯನ್ ಆಟಗಾರ), ಜಿಬಿ ಮೋರೆ.

  ಡಿಫೆಂಡರ್ಸ್: ಮಯೂರ್ ಕದಂ, ಜಿಯಾವುರ್ ರಹಮಾನ್ (ಬಾಂಗ್ಲಾದೇಶೀ ಆಟಗಾರ), ಮೋಹಿತ್ ಶೆರಾವತ್, ಮಹೇಂದರ್ ಸಿಂಗ್, ಅಮಿತ್ ಶೇವೋರನ್, ಅಂಕಿತ್, ವಿಕಾಸ್, ಸೌರಭ್ ನಂದಾಲ್,

  ಇದನ್ನೂ ಓದಿ: Pro Kabaddi- ಡ್ಯಾಶ್, ಬ್ಲಾಕ್… ಕಬಡ್ಡಿಯ 5 ರಕ್ಷಣಾ ತಂತ್ರಗಳು ಬಲು ರೋಚಕ

  ಬೆಂಗಳೂರು ಬುಲ್ಸ್ ತಂಡದ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ:   ಸಂ. ಬೆಂಗಳೂರು ಬುಲ್ಸ್ ಎದುರಾಳಿ ತಂಡ ದಿನ ವಾರ ಸಮಯ
  1 ಯು ಮುಂಬಾ ಡಿ. 22 ಬುಧವಾರ ಸಂಜೆ 7:30
  2 ತಮಿಳ್ ತಲೈವಾಸ್ ಡಿ. 24 ಶುಕ್ರವಾರ ರಾತ್ರಿ 8:30
  3 ಬಂಗಾಲ್ ವಾರಿಯರ್ಸ್ ಡಿ. 26 ಭಾನುವಾರ ರಾತ್ರಿ 8:30
  4 ಹರ್ಯಾಣ ಸ್ಟೀಲರ್ಸ್ ಡಿ. 30 ಗುರುವಾರ ರಾತ್ರಿ 8:30
  5 ತೆಲುಗು ಟೈಟಾನ್ಸ್ ಜ. 1 ಶನಿವಾರ ರಾತ್ರಿ 8:30
  6 ಪುಣೇರಿ ಪಲ್ಟಾನ್ ಜ. 2 ಭಾನುವಾರ ರಾತ್ರಿ 8:30
  7 ಜೈಪುರ್ ಪಿಂಕ್ ಪ್ಯಾಂಥರ್ಸ್ ಜ. 6 ಗುರುವಾರ ರಾತ್ರಿ 8:30
  8 ಯುಪಿ ಯೋದ್ಧಾ ಜ. 9 ಭಾನುವಾರ ರಾತ್ರಿ 8:30
  9 ದಬಾಂಗ್ ಡೆಲ್ಲಿ ಜ. 12 ಬುಧವಾರ ರಾತ್ರಿ 8:30
  10 ಗುಜರಾತ್ ಜೈಂಟ್ಸ್ ಜ. 14 ಶುಕ್ರವಾರ ರಾತ್ರಿ 8:30
  11 ಪಾಟ್ನಾ ಪೈರೇಟ್ಸ್ ಜ. 16 ಭಾನುವಾರ ರಾತ್ರಿ 8:30

  ಇದನ್ನೂ ಓದಿ: Pro Kabaddi- ಬೆಂಗಳೂರಿನ ಶೆರಟಾನ್ ಹೋಟೆಲ್​ನಲ್ಲಿ ಪ್ರೋಕಬಡ್ಡಿ ಪಂದ್ಯಾವಳಿ; ಇಲ್ಲಿದೆ ವೇಳಾಪಟ್ಟಿ

  ಪಂದ್ಯಗಳು ನಡೆಯುವ ಸ್ಥಳ:

  ಈ ಬಾರಿ ಬೆಂಗಳೂರಿನಲ್ಲೇ ಎಲ್ಲಾ ಪ್ರೋಕಬಡ್ಡಿ ಪಂದ್ಯಗಳು ನಡೆಯಲಿವೆ. ವೈಟ್​ಫೀಲ್ಡ್​ನ ಶೆರಟಾನ್ ಗ್ರ್ಯಾಂಡ್ ಹೋಟೆಲ್​ನ ಒಳಾಂಗಣದಲ್ಲಿ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಪಂದ್ಯಗಳನ್ನ ಆಯೋಜಿಸಲಾಗುತ್ತಿದೆ.
  Published by:Vijayasarthy SN
  First published: