ಪ್ರೋಕಬಡ್ಡಿ ಫೈನಲ್​ಗೆ ಫಾರ್ಚೂನ್ ಜೈಂಟ್ಸ್: ಪ್ರಶಸ್ತಿಗಾಗಿ ಬೆಂಗಳೂರು ವರ್ಸಸ್ ಗುಜರಾತ್ ಸೆಣಸು

ಆರನೇ ಆವೃತ್ತಿಯ ಪ್ರೋಕಬಡ್ಡಿ ಲೀಗ್ ಟೂರ್ನಿಯ ಫೈನಲ್ ಪಂದ್ಯ ಶನಿವಾರ ನಡೆಯಲಿದ್ದು ಬೆಂಗಳೂರು ಬುಲ್ಸ್ ತಂಡಕ್ಕೆ ಗುಜರಾತ್ ಫಾರ್ಚೂನ್ ಜೈಂಟ್ಸ್ ಸವಾಲು ಹಾಕಲಿದೆ.

Vijayasarthy SN | news18
Updated:January 3, 2019, 10:46 PM IST
ಪ್ರೋಕಬಡ್ಡಿ ಫೈನಲ್​ಗೆ ಫಾರ್ಚೂನ್ ಜೈಂಟ್ಸ್: ಪ್ರಶಸ್ತಿಗಾಗಿ ಬೆಂಗಳೂರು ವರ್ಸಸ್ ಗುಜರಾತ್ ಸೆಣಸು
ಯುಪಿ ಯೋದ್ಧಾ ರೈಡರನ್ನು ಹಿಡಿದ ಗುಜರಾತ್ ಡಿಫೆಂಡರ್ಸ್
  • News18
  • Last Updated: January 3, 2019, 10:46 PM IST
  • Share this:
ಮುಂಬೈ(ಡಿ. 03): ಬೆಂಗಳೂರು ಬುಲ್ಸ್ ವಿರುದ್ಧ ಮೊದಲ ಕ್ವಾಲಿಫೈರ್​ನಲ್ಲಿ ಸೋಲುಂಡಿದ್ದ ಗುಜರಾತ್ ಫಾರ್ಚೂನ್ ಜೈಂಟ್ಸ್ ಎರಡನೇ ಕ್ವಾಲಿಫೈರ್​ನಲ್ಲಿ ಯುಪಿ ಯೋದ್ಧಾ ವಿರುದ್ಧ ಗೆಲುವು ಸಾಧಿಸಿ ಫೈನಲ್ ತಲುಪುವಲ್ಲಿ ಸಫಲವಾಗಿದೆ. ಇಂದು ನಡೆದ ಪ್ರೋಕಬಡ್ಡಿಯ ನಾಕೌಟ್ ಹಂತದ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತಿಗರು 38-31 ಅಂಕಗಳಿಂದ ರೋಚಕ ಜಯ ಪಡೆದರು.

ಜನವರಿ 5, ಶನಿವಾರದಂದು ನಡೆಯುವ ಫೈನಲ್ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವು ಬೆಂಗಳೂರು ಬುಲ್ಸ್ ತಂಡದ ಸವಾಲನ್ನು ಎದುರಿಲಿದೆ. ಇದೇ ಬೆಂಗಳೂರಿಗರು ಮೊದಲ ಕ್ವಾಲಿಫಯರ್​ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು 41-29 ಅಂಕಗಳ ಅಂತರದಿಂದ ಸೋಲಿಸಿ ಫೈನಲ್ ತಲುಪಿದ್ದರು. ಫೈನಲ್​ನಲ್ಲೂ ಬೆಂಗಳೂರಿಗರು ಅದೇ ಪ್ರದರ್ಶನ ತೋರಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಡುತ್ತಾರಾ ಎಂಬ ಕುತೂಹಲ ಗರಿಗೆದರಿದೆ.

ಇನ್ನು, ಆರನೇ ಸೀಸನ್​ನ ಪ್ರೋಕಬಡ್ಡಿಯಲ್ಲಿ ಹೊಸ ತಂಡವಾಗಿರುವ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವು ತನ್ನ ಪದಾರ್ಪಣೆಯ ಸೀಸನ್​ನಲ್ಲೇ ಫೈನಲ್ ತಲುಪಿ ಅಚ್ಚರಿ ಮೂಡಿಸಿದೆ. ಎ ಝೋನ್​ನಲ್ಲಿ 17 ಗೆಲುವು, 3 ಸೋಲುಗಳನ್ನು ಕಂಡು ಬರೋಬ್ಬರಿ 93 ಅಂಕಗಳೊಂದಿಗೆ ನಾಕೌಟ್ ಹಂತಕ್ಕೆ ಗುಜರಾತ್ ಲಗ್ಗೆ ಇಟ್ಟಿತ್ತು. ಆದರೆ, ಬಿ ಝೋನ್​ನ ಟಾಪ್ ತಂಡವಾದ ಬೆಂಗಳೂರು ಬುಲ್ಸ್ ತಂಡದ ಆಲ್​ರೌಂಡ್ ಆಟದ ಮುಂದೆ ಗುಜರಾತಿಗರ ಆಟವು ಕ್ವಾಲಿಫಯರ್​ನಲ್ಲಿ ನಡೆಯಲಿಲ್ಲ. ಕಳೆದ ಮೂರ್ನಾಲ್ಕು ಸೀಸನ್​ನಲ್ಲಿ ನೀರಸ ಪ್ರದರ್ಶನ ನೀಡುತ್ತಾ ಬಂದಿದ್ದ ಬೆಂಗಳೂರು ಬುಲ್ಸ್ ತಂಡ ಈ ವರ್ಷ ನಿಜಕ್ಕೂ ಆಕರ್ಷಕ ಆಟವಾಡಿದೆ. ಇದೇ ಆಟ ಶನಿವಾರದ ಫೈನಲ್​ನಲ್ಲಿ ಬೆಂಗಳೂರಿಗೆ ಚೊಚ್ಚಲ ಪ್ರಶಸ್ತಿ ತಂದುಕೊಡುತ್ತಾ ಎಂದು ಕಾದುನೋಡಬೇಕು.
First published: January 3, 2019, 10:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading