• Home
  • »
  • News
  • »
  • sports
  • »
  • Pele: ಫುಟ್​ಬಾಲ್​ ದಂತಕಥೆ ಪೀಲೆ ಆಸ್ಪತ್ರೆಗೆ ದಾಖಲು, ಬೇಗ ಗುಣಮುಖರಾಗಿ ಎಂದ ಫ್ಯಾನ್ಸ್

Pele: ಫುಟ್​ಬಾಲ್​ ದಂತಕಥೆ ಪೀಲೆ ಆಸ್ಪತ್ರೆಗೆ ದಾಖಲು, ಬೇಗ ಗುಣಮುಖರಾಗಿ ಎಂದ ಫ್ಯಾನ್ಸ್

ಪೀಲೆ

ಪೀಲೆ

Pele: ಫುಟ್​ಬಾಲ್​ ದಂತಕಥೆ ಪೀಲೆ (Pele) ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೊನ್ ಟ್ಯೂಮರ್ ನಂತರ ಚಿಕಿತ್ಸೆಯಲ್ಲಿರುವ 82 ವರ್ಷದ ಪೀಲೆ ಅವರನ್ನು ಆರೋಗ್ಯ ಸಮಸ್ಯೆಯಿಂದ ಆಸ್ಪ್ರತೆಗೆ ದಾಖಲಿಸಲಾಗಿದೆ

  • Share this:

ಫುಟ್​ಬಾಲ್​ ದಂತಕಥೆ ಪೀಲೆ (Pele) ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೊನ್ ಟ್ಯೂಮರ್ ನಂತರ ಚಿಕಿತ್ಸೆಯಲ್ಲಿರುವ 82 ವರ್ಷದ ಪೀಲೆ ಅವರನ್ನು ಆರೋಗ್ಯ ಸಮಸ್ಯೆಯಿಂದ ಆಸ್ಪ್ರತೆಗೆ ದಾಖಲಿಸಲಾಗಿದೆ ಎಂದು ಅವರ ಮಗಳು ತಿಳಿಸಿದ್ದಾರೆ. ಆದರೆ ಯಾವುದೇ ತುರ್ತುಸ್ಥಿತಿ ಇಲ್ಲ ಎಂದು ಅವರ ಮಗಳು ಹೇಳಿದ್ದಾರೆ. ಅವರು ಆಸ್ಪತ್ರೆಯಲ್ಲಿ ಔಷಧಿಗಳಿಂದ ಇದೀಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೀಲೆ ಅವರ ಮಗಳು ಕೆಲಿ ನಾಸಿಮೆಂಟೊ ಇನ್ಸ್ಟಾಗ್ರಾಂ (Instagram) ನಲ್ಲಿ ಬರೆದಿದ್ದಾರೆ. ಕಳೆದ ವರ್ಷ ಕೊಲೊನ್ ಕ್ಯಾನ್ಸರ್ ಇರುವುದು ಪತ್ತೆಯಾದಾಗಿನಿಂದ ಪೀಲೆ ನಿಯಮಿತವಾಗಿ ಕಿಮೊಥೆರಪಿ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಅವರು ಸೆಪ್ಟೆಂಬರ್ 2021ರಲ್ಲಿ ಗೆಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆಸ್ಪತ್ರೆಯಲ್ಲಿ ಒಂದು ತಿಂಗಳ ಕಾಲ ಕಳೆದಿದ್ದರು.


ಫುಟ್​ಬಾಲ್​ ದಂತಕಥೆ ಪೀಲೆ:


ಇನ್ನು, ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಪರಿಗಣಿಸಲ್ಪಟ್ಟ ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೊ ಪೀಲೆ ಅವರ ನಿಜವಾದ ಹೆಸರಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ದುರ್ಬಲವಾದ ಆರೋಗ್ಯದಿಂದ ಅವರು ಬಳಲುತ್ತಿದ್ದಾರೆ. ಮೂರು ವಿಶ್ವಕಪ್‌ಗಳನ್ನು ಗೆದ್ದ ಇತಿಹಾಸದಲ್ಲಿ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ (1958, 1962 ಮತ್ತು 1970), ಪೀಲೆ ಅವರು 1977ರಲ್ಲಿ ನಿವೃತ್ತರಾಗುವ ಮೊದಲು 1,000 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಕ್ರೀಡೆಯಲ್ಲಿ ಅತ್ಯಂತ ಶ್ರೇಷ್ಠ ವೃತ್ತಿಜೀವನವನ್ನು ಹೊಂದಿದ್ದರು. ಇತ್ತೀಚೆಗೆ ಬ್ರೆಜಿಲ್ ರಾಷ್ಟ್ರೀಯ ತಂಡಕ್ಕೆ 2022ರ ವಿಶ್ವಕಪ್‌ ಟ್ರೋಫಿಯನ್ನು ಗೆಲ್ಲಲು ಇದೀಗ ಭರ್ಜರಿ ಪೈಪೋಟಿ ನೀಡುತ್ತಿದೆ.ತಂದೆಯ ಆರೋಗ್ಯದಲ್ಲಿ ಯಾವುದೇ ಗಂಭೀರ ಪರಿಸ್ಥಿತಿ ಇಲ್ಲ ಅಥವಾ ಶೀಘ್ರ ಗುಣಮುಖರಾಗಲಿದ್ದಾರೆ. ನಾವು ನಿಮ್ಮಿಂದ ಕಾಳಜಿ ಮತ್ತು ಪ್ರೀತಿಯನ್ನು ಆಶಿಸುತ್ತೇವೆ ಎಂದು ಪೀಲೆ ಅವರ ಮಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


ಪೀಲೆ ದಾಖಲೆ ಮುರಿದಿದ್ದ ಮೆಸ್ಸಿ:


1956ರಿಂದ 1974ರ ವರೆಗೆ ಬ್ರೆಝಿಲ್​ನ ಸ್ಯಾಂಟೋಸ್ ಕ್ಲಬ್ ಪರ ಆಡಿದ್ದ ಪೀಲೆ 757 ಪಂದ್ಯಗಳಲ್ಲಿ 643 ಗೋಲ್ ಬಾರಿಸಿ ಫುಟ್​ಬಾಲ್ ಇತಿಹಾಸದಲ್ಲೇ ಯಾರು ಮಾಡದ ಸಾಧನೆ ಮರೆದಿದ್ದರು. ಈ ಅಪೂರ್ವ ದಾಖಲೆಯನ್ನು ಮೆಸ್ಸಿ 644 ಗೋಲು ಗಳಿಸುವುದರೊಂದಿಗೆ ಮುರಿದಿದ್ದರು. 17 ಸೀಸನ್​ಗಳಿಂದ ಬಾರ್ಸಿಲೋನಾ ಫುಟ್​ಬಾಲ್ ಕ್ಲಬ್ ಪರ ಕಣಕ್ಕಿಳಿಯುತ್ತಿರುವ ಅರ್ಜೆಂಟೀನಾ ಆಟಗಾರ ಮೆಸ್ಸಿ 644 ಗೋಲ್‌ಗಳನ್ನು ಬಾರಿಸುವ ಮೂಲಕ ಈ ಅಪರೂಪದ ದಾಖಲೆ ನಿರ್ಮಿಸಿದ್ದರು.


ಇದನ್ನೂ ಓದಿ: IND vs BAN: ಟೀಂ ಇಂಡಿಯಾ ಮುಂದಿನ ಸರಣಿ ಯಾರ ವಿರುದ್ಧ? ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ


ಭರ್ಜರಿಯಾಗಿ ನಡೆಯುತ್ತಿದೆ ಫಿಫಾ ವಿಶ್ವಕಪ್​ 2022:


ಸದ್ಯ ಕತಾರ್​ನಲ್ಲಿ ಫಿಫಾ ವಿಶ್ವಕಪ್​ 2022 ಆರಂಭವಾಗಿದೆ. ಈಗಾಗಲೇ ಗ್ರೂಪ್​ ಹಂತದಿಂದ ರೌಂಡ್​ 16 ಹಂತಕ್ಕೆ ಕೆಲ ತಂಡಗಳು ಲಗ್ಗೆ ಇಟ್ಟಿದೆ. ಅದರ ಭಾಗವಾಗಿ ಅರ್ಜೆಂಟೈನಾ ಸಹ ರೌಂಡ್​ 16 ಹಂತಕ್ಕೆ ತಲಪುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಬಾರಿ ಕತಾರ್​ನಲ್ಲಿ ಅನೇಕ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರಂತೆ ಕತಾರ್​ನಲ್ಲಿ ಮಹಿಳೆಯರು ತುಂಡುಡುಗೆ, ಬೀಯರ್​ ಅಂತೆ ಅನೇಕ ವಿಷಯಗಳ ಮೇಲೆ ನಿಷೇಧ ಹೇರಿದೆ.


ಕತಾರಿ ಕಾನೂನು ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುತ್ತದೆ ಮತ್ತು ಸಲಿಂಗಕಾಮದ ಯಾವುದೇ ಲೈಂಗಿಕ ಕ್ರಿಯೆಗಳನ್ನು ಪ್ರದರ್ಶಿಸುವುದು ಕಂಡುಬಂದಲ್ಲಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ದೇಶದ ಷರಿಯಾ ಕಾನೂನಿನ ಅಡಿಯಲ್ಲಿ, ಸಲಿಂಗ ಸಂಬಂಧಗಳಿಗೆ ಗರಿಷ್ಠ ಶಿಕ್ಷೆ ಎಂದರೆ ಅದು ಮರಣದಂಡನೆಯಾಗಿದೆ.

Published by:shrikrishna bhat
First published: