ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (Pakistan Cricket Board) ಮಹತ್ವದ ನಿರ್ಣಯ ಕೈಗೊಂಡಿದೆ. ಪಾಕಿಸ್ತಾನದ ತಂಡದ (Pakistan Team) ಆಯ್ಕೆ ಸಮಿತಿ ಮುಖ್ಯಸ್ಥರಾಗಿ (Selection Committee), ಮಾಜಿ ಆಟಗಾರ, ಸ್ಟಾರ್ ಆಲ್ರೌಂಡರ್ ಶಾಹಿದ್ ಅಫ್ರಿದಿ (Shahid Afridi) ಅವರನ್ನು ನೇಮಕ ಮಾಡಿದ್ದಾಗಿ ತಿಳಿಸಿದೆ. ಡಿಸೆಂಬರ್ 26ರಿಂದ ನಡೆಯಲಿರುವ ನ್ಯೂಜಿಲೆಂಡ್ (New Zealand) ವಿರುದ್ಧದ ಟೆಸ್ಟ್ ಸರಣಿಯಿಂದ ಅಫ್ರಿದಿ, ಆಯ್ಕೆ ಸಮಿತಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಪಿಸಿಬಿ ಪ್ರಕಟಿಸಿದೆ. ಇದಕ್ಕೂ ಮುನ್ನ ಪಾಕಿಸ್ತಾನದಲ್ಲೇ ನಡೆದಿದ್ದ ಎರಡು ಪಂದ್ಯಗಳ ಟೆಸ್ಟ್ ಟೂರ್ನಿಯಲ್ಲಿ ಸೋಲುಂಡಿತ್ತು. ಅದರಲ್ಲೂ ಇಂಗ್ಲೆಂಡ್ (England) ವಿರುದ್ಧ ನಡೆದಿದ್ದ ಟೆಸ್ಟ್ ಟೂರ್ನಿಯಲ್ಲಿ 3-0 ಅಂತರದಲ್ಲಿ ಸೋಲುಂಡು ವೈಟ್ವಾಶ್ (whitewash) ಮುಖಭಂಗಕ್ಕೆ ಒಳಗಾಗಿತ್ತು.
ಇಂಗ್ಲೆಂಡ್ ವಿರುದ್ಧದ ವೈಟ್ವಾಶ್ ಬಳಿಕ ಪಿಸಿಬಿ ಅಧ್ಯಕ್ಷರಾಗಿದ್ದ ರಮೀಜ್ ರಾಜಾ ಅವರನ್ನು ಹುದ್ದೆಯಿಂದ ಕಳೆಗಿಳಿಸಲಾಗಿತ್ತು. ಅವರ ಸ್ಥಾನದಲ್ಲಿ ನಜಮ್ ಸೇಠಿ ನೇತೃತ್ವದಲ್ಲಿ 14 ಸದಸ್ಯರ ಕಮಿಟಿಗೆ ಜವಾಬ್ದಾರಿಯನ್ನು ವಹಿಸಲಾಗಿತ್ತು. ಇಂಗ್ಲೆಂಡ್ ವಿರುದ್ಧ ಸತತ ಸೋಲುಗಳ ಕಾರಣ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಿಂದಲೂ ಪಾಕಿಸ್ತಾನ ಹೊರ ಬಿದ್ದಿತ್ತು. ಈ ಕಾರಣದಿಂದಲೇ ಹೊಸ ಆಯ್ಕೆ ಸಮಿತಿಯನ್ನು ಪಿಸಿಬಿ ನೇಮಕ ಮಾಡಿದೆ. ಈ ಸಮಿತಿಗೆ ಅಧ್ಯಕ್ಷರಾಗಿ ಅಫ್ರಿದಿ ಆಯ್ಕೆಯಾಗಿದ್ದು, ಉಳಿದಂತೆ ಅಬ್ದುಲ್ ರಜಾಕ್, ಇಫ್ತಿಕರ್ ಅಂಜುಮ್ ಕಮಿಟಿ ಸದಸ್ಯರಾಗಿದ್ದಾರೆ.
I am pleased to announce that 3 more players Shahnawaz Dhani, Mir Hamza and Sajid Khan have been added to strengthen the squad for the first test match. We are here to support the captain so he may have more option at his disposal🇵🇰 https://t.co/yrCHdEXdzG
— Shahid Afridi (@SAfridiOfficial) December 24, 2022
ಆಸ್ಟೇಲಿಯಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದ ಪಾಕಿಸ್ತಾನ ತಂಡ ಕೊನೆ ಪಂದ್ಯದಲ್ಲಿ ಮಾತ್ರ ಹೀನಾಯವಾಗಿ ಸೋಲುಂಡಿತ್ತು. ಆ ಬಳಿಕ ಇಂಗ್ಲೆಂಡ್ ವಿರುದ್ಧ ನಡೆದ 7 ಟಿ20 ಪಂದ್ಯಗಳ ಸರಣಿಯಲ್ಲಿ 3-4ರ ಅಂತರದಲ್ಲಿ ಸೋಲುಂಡಿತ್ತು.
ಏಷ್ಯಾಕಪ್ 2022ರ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಸೋಲುಂಡು ಹೊರಬಿದ್ದಿದ್ದ ಪಾಕಿಸ್ತಾನ, ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದೃಷ್ಠ ಆಟದ ಮೂಲಕ ಫೈನಲ್ವರೆಗೂ ಬಂದು ಇಂಗ್ಲೆಂಡ್ ವಿರುದ್ಧ ಸೋಲುಂಡಿತ್ತು. ವಿಶ್ವಕಪ್ ಸೋಲಿನ ಕಹಿ ನೆನಪಿನಲ್ಲೇ ಇಂಗ್ಲೆಂಡ್ ವಿರುದ್ಧ ವೈಟ್ವಾಶ್ಗೆ ಒಳಗಾಗಿ ತವರು ನೆಲದಲ್ಲಿ 17 ವರ್ಷಗಳ ಬಳಿ ಆಡಿದ್ದ ಇಂಗ್ಲಿಷ್ ಆಟಗಾರರಿಗೆ ತಲೆಬಾಗಿತ್ತು. ಇದರೊಂದಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಆಯ್ಕೆ ಸಮಿತಿ ಮೇಲೆ ಸಾಕಷ್ಟು ವಿಮರ್ಶೆಗಳು ಕೇಳಿ ಬಂದಿದ್ದವು.
📢 Update to Pakistan v New Zealand series schedule 📢
Details here ➡️ https://t.co/JllfqBg2a6#PAKvNZ | #TayyariKiwiHai pic.twitter.com/cSCoi8qTkA
— Pakistan Cricket (@TheRealPCB) December 24, 2022
ಇನ್ನು, ಆಯ್ಕೆ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಬಳಿಕ ಮಾತನಾಡಿರೋ ಅಫ್ರಿದಿ, ತಮಗೆ ಮಹತ್ವದ ಜವಾಬ್ದಾರಿಯನ್ನು ನೀಡಿದ ಪಿಸಿಬಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಉತ್ತಮ ತಂಡವನ್ನು ತಯಾರಿ ಮಾಡಲು ಪ್ರಯತ್ನಿಸುತ್ತೇನೆ. ಮತ್ತೆ ತಂಡ ವಿಜಯಗಳ ಹಾದಿಯಲ್ಲಿ ಮುನ್ನಡೆಯಲಿದೆ. ಇದೇ ನನ್ನ ಗುರಿಯಾಗಿದೆ ಎಂದಿದ್ದಾರೆ.
ಶೀಘ್ರವೇ ಆಯ್ಕೆ ಸಮಿತಿ ತನ್ನ ಮೊದಲ ಸಭೆಯನ್ನು ನಡೆಸಲಿದೆ. ಈ ವೇಳೆ ತಮ್ಮ ಚಿಂತನೆಗಳನ್ನು ಸಮಿತಿ ಮುಂದಿಡುತ್ತೇನೆ. ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡ ಉತ್ತಮ ಪೈಪೋಟಿ ನೀಡುವಂತೆ ಮಾಡಲು ಪ್ರಯತ್ನಿಸುತ್ತೇನೆ. ಆ ಮೂಲಕ ಮತ್ತೆ ಅಭಿಮಾನಿಗಳ ನಂಬಿಕೆಯನ್ನು ಮತ್ತೆ ಗಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ