2020ರ ಏಷ್ಯಾ ಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ

2020ರ ಸಪ್ಟೆಂಬರ್ ತಿಂಗಳಲ್ಲಿ ಏಷ್ಯಾ ಕಪ್ ಟೂರ್ನಿಯನ್ನು ಆಯೋಜಿಸಲಾಗಿದೆ. ಇದಾದ ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.

Vinay Bhat | news18
Updated:December 14, 2018, 11:26 AM IST
2020ರ ಏಷ್ಯಾ ಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ
(Credit: AFP)
  • News18
  • Last Updated: December 14, 2018, 11:26 AM IST
  • Share this:
ಹೊಸದಿಲ್ಲಿ: 2020ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಈ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ನಜ್ಮುಲ್ ಹಸನ್ ಸ್ಪಷ್ಟಪಡಿಸಿದ್ದಾರೆ.

ಟಿ-20 ಮಾದರಿಯಲ್ಲಿ ನಡೆಯುವ ಈ ಟೂರ್ನಿಯು ಪಾಕ್​​ನಲ್ಲೇ ನಡೆಯುತ್ತಾ ಅಥವಾ ಯುಎಇನಲ್ಲಿ ಆಯೋಜಿಸಲಾಗುತ್ತಾ ಎಂಬ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ. ಈ ಹಿಂದೆ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಪಾಕ್​ನಲ್ಲಿ ಉಗ್ರರು ದಾಳಿ ನಡೆಸಿದ್ದರು. ಆಗಿನಿಂದ ತಂಡಗಳು ಪಾಕ್​ಗೆ ತೆರಳಲು ಹಿಂದೇಟು ಹಾಕುತ್ತಿದೆ.

ಇದನ್ನೂ ಓದಿ: 2ನೇ ಟೆಸ್ಟ್​​: ಆಸೀಸ್​​ರಿಂದ ಭರ್ಜರಿ ಆರಂಭ: ವಿಕೆಟ್​​ಗಾಗಿ ಭಾರತೀಯರ ಪರದಾಟ

ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಬಿರುಕು ಬಿಟ್ಟಿರುವುದರಿಂದ ಕೊನೆಯ ಏಷ್ಯಾ ಕಪ್​​​ ಟೂರ್ನಿ ಯುಎಇನಲ್ಲಿ ನಡೆದಿತ್ತು. ಒಂದು ವೇಳೆ ಮುಂಬರುವ ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲೇ ನಡೆಯುವುದು ಎಂದಾದರೆ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಪಾಕ್​ಗೆ ತೆರಳುವುದು ಅನುಮಾನ.

2020ರ ಸಪ್ಟೆಂಬರ್ ತಿಂಗಳಲ್ಲಿ ಏಷ್ಯಾ ಕಪ್ ಟೂರ್ನಿಯನ್ನು ಆಯೋಜಿಸಲಾಗಿದೆ. ಇದಾದ ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.
First published:December 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading