ಮಗನ ಆಯ್ಕೆಗೆ ತೆರೆ ಮರೆ ಪ್ರಯತ್ನ: ವಿವಾದದಲ್ಲಿ ಪಾಕ್ ಮಾಜಿ ಆಟಗಾರ

news18
Updated:September 14, 2018, 6:52 PM IST
ಮಗನ ಆಯ್ಕೆಗೆ ತೆರೆ ಮರೆ ಪ್ರಯತ್ನ: ವಿವಾದದಲ್ಲಿ ಪಾಕ್ ಮಾಜಿ ಆಟಗಾರ
news18
Updated: September 14, 2018, 6:52 PM IST
-ನ್ಯೂಸ್ 18 ಕನ್ನಡ

ಏಷ್ಯಾ ಕಪ್ ಆರಂಭವಾಗುವ ಮೊದಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ. ಪಾಕ್ ತಂಡದ ಮಾಜಿ ಆಟಗಾರ ಇಂಜಮಾಮ್ ಉಲ್ ಹಕ್ ಈ ವಿವಾದದ ಕೇಂದ್ರ ಬಿಂದು. ಪಿಸಿಬಿ ಆಯ್ಕೆ ಸಮಿತಿಯ ಮಾಜಿ ಸದಸ್ಯರಾಗಿರುವ ಇಂಜಮಾಮ್ ಉಲ್ ಹಕ್ ತಮ್ಮ ಮಗನನ್ನು ತಂಡಕ್ಕೆ ಆಯ್ಕೆ ಮಾಡಿಸಲು ತೆರೆ ಮರೆಯ ಪ್ರಯತ್ನ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಪಾಕಿಸ್ತಾನ ಅಂಡರ್ 19 ತಂಡದ ಆಯ್ಕೆ ಸಮಿತಿಯ ಸದಸ್ಯ ಬಾಸಿತ್ ಅಲಿಗೆ ಕರೆ ಮಾಡಿ, ಮಗನಿಗೆ ತಂಡದಲ್ಲಿ ಆಡಲು ಅವಕಾಶ ನೀಡಬೇಕೆಂದು ಇಂಜಮಾಮ್ ಕೇಳಿಕೊಂಡಿದ್ದಾರೆಂದು ಪಾಕ್ ತಂಡದ ಮಾಜಿ ಆಟಗಾರ ಅಬ್ದುಲ್ ಖಾದಿರ್ ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಾಮಾಜಿಕ ತಾಣದಲ್ಲಿ ಹೇಳಿಕೆಯನ್ನು ನೀಡಿರುವ ಇಂಜಮಾಮ್ ಆರೋಪವನ್ನು ನಿರಾಕರಿಸಿದ್ದಾರೆ.

ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡಲಾಗಿದ್ದು, ಆಯ್ಕೆ ಸಮಿತಿಯ ಸದಸ್ಯರಿಗೆ ಯಾವುದೇ ಕರೆ ಮಾಡಿರಲಿಲ್ಲ. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಪಾಕ್ ಕ್ರಿಕೆಟ್​ ಮಂಡಳಿಯ ಮುಖ್ಯಸ್ಥರೊಂದಿಗೆ ಇದರ ಬಗ್ಗೆ ವಿಚಾರಣೆ ನಡೆಸಲು ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಅದೇ ರೀತಿ ಈ ಆರೋಪವನ್ನು ಅಂಡರ್ 19 ಆಯ್ಕೆ ಸಮಿತಿ ಮುಖ್ಯಸ್ಥ ಬಾಸಿತ್ ಅಲಿ ಕೂಡ ನಿರಾಕರಿಸಿದ್ದಾರೆ.


Loading...


ಪಾಕ್ ತಂಡದ ಆಯ್ಕೆಯ ವೇಳೆ ಹಲವಾರು ಬಾರಿ ಇಂತಹ ಆರೋಪಗಳು ಕೇಳಿ ಬಂದಿದೆ. ಇದೀಗ ಪಾಕಿಸ್ತಾನ ತಂಡ ಏಷ್ಯಾ ಕಪ್​ಗಾಗಿ ಸಜ್ಜಾಗುತ್ತಿದ್ದಂತೆ ಇಂತಹದೊಂದು ಆರೋಪ ಕೇಳಿ ಬಂದಿರುವುದು ಪಿಸಿಬಿಯನ್ನು ಇಕ್ಕಟಿಗೆ ಸಿಲುಕಿಸಿದೆ.

 
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ