DC vs PBKS: ಪಂಜಾಬ್​ಗೆ ಭರ್ಜರಿ ಗೆಲುವು, ಪ್ಲೇಆಫ್​ ರೇಸ್​ನಿಂದ ಹೊರಬಿದ್ದ ಡೆಲ್ಲಿ

ಪಂಜಾಬ್​ಗೆ ಗೆಲುವು

ಪಂಜಾಬ್​ಗೆ ಗೆಲುವು

DC vs PBKS: ಪಂಜಾಬ್​ ಕಿಂಗ್ಸ್ ತಂಡಕ್ಕೆ ಈಗಲೂ ಪ್ಲೇಆಫ್​ ಕನಸು ಜೀವಂತವಾಗಿದೆ. ಆದರೆ ಡೆಲ್ಲಿ ತಂಡ ಈ ಬಾರಿ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿದೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ಋತುವಿನಲ್ಲಿ ಮತ್ತೊಬ್ಬ ಭಾರತೀಯ ಬ್ಯಾಟ್ಸ್‌ಮನ್ ಶತಕವನ್ನು ಪೂರ್ಣಗೊಳಿಸಿದ್ದಾರೆ. ವೆಂಕಟೇಶ್ ಅಯ್ಯರ್, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ನಂತರ ಪ್ರಭ್ ಸಿಮ್ರಾನ್ ಸಿಂಗ್ (Prabhsimran Singh) ಈ ಋತುವಿನಲ್ಲಿ ಶತಕ ಸಿಡಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಮೂಲಕ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 167 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ  8 ವಿಕೆಟ್​ ನಷ್ಟಕ್ಕೆ 136 ರನ್​ ಗಳಿಸುವ ಮೂಲಕ 31 ರನ್​ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಪಂಜಾಬ್​ ಕಿಂಗ್ಸ್ ತಂಡಕ್ಕೆ ಈಗಲೂ ಪ್ಲೇಆಫ್​ ಕನಸು ಜೀವಂತವಾಗಿದೆ. ಆದರೆ ಡೆಲ್ಲಿ ತಂಡ ಈ ಬಾರಿ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿದೆ.


ಬ್ಯಾಟಿಂಗ್​ನಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್:


ಇನ್ನು, ಟಾರ್ಗೆಟ್​ ಬೆನ್ನಟ್ಟಿದ ಡೆಲ್ಲಿ ಕ್ಯಾಪಟಲ್ಸ್​ ನಿಗದಿತ 20 ಓವರ್​ಗಳಲ್ಲಿ  8 ವಿಕೆಟ್​ ನಷ್ಟಕ್ಕೆ 136 ರನ್​ ಗಳಿಸಿತು. ಡೇವಿಡ್ ವಾರ್ನರ್ ನಾಯಕನಾ ಆಟವಾಡಿದರು. ಅವರು 27 ಎಸೆತದಲ್ಲಿ 1 ಸಿಕ್ಸ್ ಮತ್ತು 10 ಫೋರ್​ ಮೂಲಕ 54 ರನ್​, ಫಿಲಿಪ್ ಸಾಲ್ಟ್ 21 ರನ್, ಮಿಚೆಲ್ ಮಾರ್ಷ್ 3 ರನ್, ರಿಲೆ ರುಸ್ಸೋ 5 ರನ್, ಅಮನ್ ಹಕೀಮ್ ಖಾನ್ 16 ರನ್, ಅಕ್ಷರ್ ಪಟೇಲ್ 1 ರನ್, ಪ್ರವೀಣ್ ದುಬೆ 16 ರನ್, ಕುಲದೀಪ್ ಯಾದವ್ 10 ರನ್ ಮತ್ತು ಮುಖೇಶ್ ಕುಮಾರ್ 6 ರನ್ ಗಳಿಸಿದರು.


ಹರ್‌ಪ್ರೀತ್ ಬ್ರಾರ್ ಭರ್ಜರಿ ಬೌಲಿಂಗ್​:


ಪಂಜಾಬ್​ ಕಿಂಗ್ಸ್ ಕಡಿಮೆ ಮೊತ್ತದ ಟಾರ್ಗೆಟ್​ ಅನ್ನು ಡಿಫೆಂಡ್​ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಪಂಜಾಬ್​ ಪರ ಹರ್‌ಪ್ರೀತ್ ಬ್ರಾರ್ 4 ಓವರ್​ಗೆ 30 ರನ್ ನೀಡಿ 4 ವಿಕೆಟ್​ ಪಡೆದು ಡೆಲ್ಲಿ ಕುಸಿತಕ್ಕೆ ಕಾರಣರಾದರು. ಉಳಿದಂತೆ ನಾಥನ್​ ಎಲ್ಲಿಸ್ 2 ವಿಕೆಟ್ ಮತ್ತು ರಾಹುಲ್ ಚಹಾರ್​ 4 ಓವರ್​ಗೆ 16 ರನ್ ನೀಡಿ 2 ವಿಕೆಟ್​ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖಪಾತ್ರವಹಿಸಿದರು.


ಇದನ್ನೂ ಓದಿ: IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!


ಪ್ರಭ್ ಸಿಮ್ರಾನ್ ಭರ್ಜರಿ ಶತಕ:


ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪ್ರಭ್ ಸಿಮ್ರಾನ್ ಸಿಂಗ್ 64 ಎಸೆತಗಳಲ್ಲಿ 103 ರನ್ ಗಳಿಸಿದರು. ಇದರಲ್ಲಿ 6 ಸಿಕ್ಸರ್ ಹಾಗೂ 10 ಬೌಂಡರಿಗಳು ಸೇರಿದ್ದವು. ಪ್ರಭ್ ಸಿಮ್ರಾನ್ ಸಿಂಗ್ ಬಿಟ್ಟರೆ ಉಳಿದ ಪಂಜಾಬ್ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಇಶಾಂತ್ ಶರ್ಮಾ ಎರಡು ವಿಕೆಟ್ ಪಡೆದರು.


ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಆರಂಭಿಕರು ಕಿಂಗ್ಸ್‌ಗೆ ಉತ್ತಮ ಆರಂಭವನ್ನು ನೀಡಲಿಲ್ಲ. ನಾಯಕ ಶಿಖರ್ ಧವನ್ (7), ಲಿವಿಂಗ್ ಸ್ಟೋನ್ (4) ಮತ್ತು ಜಿತೇಶ್ ಶರ್ಮಾ (5) ತಕ್ಷಣವೇ ಔಟಾದರು. ಈ ಹಂತದಲ್ಲಿ ಶತಕದ ವೀರ ಪ್ರಭ್ ಸಿಮ್ರಾನ್ ಸಿಂಗ್ ತಂಡದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡರು. ನಾಲ್ಕನೇ ವಿಕೆಟ್‌ಗೆ ಸ್ಯಾಮ್ ಕರನ್ (20) ಜತೆ 72 ರನ್ ಸೇರಿಸಿದರು.


top videos



    ಇದರಲ್ಲಿ ಸ್ಯಾಮ್ ಕರಣ್ ಕೇವಲ 20 ರನ್ ಗಳಿಸಿದರು. ಉಳಿದದ್ದು ಪ್ರಭ್ ಸಿಮ್ರಾನ್ ಸಿಂಗ್​ ಬ್ಯಾಟ್ ನಿಂದ. ಆದರೆ ನಿರ್ಣಾಯಕ ಹಂತದಲ್ಲಿ ಸ್ಯಾಮ್ ಕರನ್ ಮತ್ತು ಹರ್ ಪ್ರೀತ್ ಬ್ರಾರ್ (2) ತಕ್ಷಣವೇ ಔಟಾದರು. ಈ ಋತುವಿನಲ್ಲಿ ಇದುವರೆಗೆ ಐದು ಶತಕಗಳು ದಾಖಲಾಗಿವೆ.ಈ ಪೈಕಿ ನಾಲ್ವರು ಭಾರತೀಯ ಆಟಗಾರರು ಮಾತ್ರ ಶತಕ ಗಳಿಸಿದ್ದಾರೆ. ಆದರೆ ಪ್ರಭ್ ಸಿಮ್ರಾನ್ ಸಿಂಗ್ ಶತಕದ ಬಳಿಕ ಔಟಾದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ಆಟಗಾರರು ದೊಡ್ಡ ಹೊಡೆತಗಳನ್ನು ಸ್ಕೋರ್​ ಮಾಡುವಲ್ಲಿ ವಿಫಲರಾದರು.

    First published: