ಇಂಡಿಯನ್ ಪ್ರೀಮಿಯರ್ ಲೀಗ್ 2023ರ (IPl 2023) 26ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (RR vs LSG) ಅನ್ನು ಮುಖಾಮುಖಿ ಆಗಿದ್ದವು. ರಾಜಸ್ಥಾನ ತಂಡ ಜೈಪುರದ ತನ್ನ ತವರು ಮೈದಾನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ (Sawai Mansingh Stadium) ಈ ಪಂದ್ಯವನ್ನು ಆಡಿತು. ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಜಸ್ಥಾನ ರಾಯಲ್ಸ್‌ಗೆ 155 ರನ್‌ಗಳ ಗುರಿಯನ್ನು ನೀಡಿತು. ಲಕ್ನೋ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 154 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡ ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸುವ ಮೂಲಕ 10 ರನ್ಗಳಿಂದ ಸೋಲನ್ನಪ್ಪಿತು.
ತವರಿನಲ್ಲಿ ಎಡವಿದ ರಾಜಸ್ಥಾನ್:
ಇನ್ನು, ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡವು 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸುವ ಮೂಲಕ 10 ರನ್ಗಳಿಂದ ಸೋಲನ್ನಪ್ಪಿತು. ರಾಜಸ್ಥಾನ್ ಪರ ಯಶಸ್ವಿ ಜೇಸ್ವಾಲ್ 44 ರನ್, ಜೊಸ್ ಬಟ್ಲರ್ 40 ರನ್, ನಾಯಕ ಸಂಜು ಸ್ಯಾಮ್ಸನ್ 2 ರನ್, ದೇವದತ್ ಪಡಿಕಲ್ 26 ರನ್, ಹಿಟ್ಮಾಯರ್ 2 ರನ್, ರಿಯಾನ್ ಪರಾಗ್ 15 ರನ್, ಡ್ರುವ್ ಜುರೇಲ್ ಶೂನ್ಯ, ರವಿಚಂದ್ರನ್ ಅಶ್ವಿನ್ 3 ರನ್ ಗಳಿಸಿದರು.
A brilliant final over from @Avesh_6 🔥🔥@LucknowIPL win by 10 runs to add two more points to their tally.
Scorecard - https://t.co/gyzqiryPIq #TATAIPL #RRvLSG #IPL2023 pic.twitter.com/c6iEP6V7cN
— IndianPremierLeague (@IPL) April 19, 2023
ಅವೇಶ್ ಖಾನ್ ಭರ್ಜರಿ ಬೌಲಿಂಗ್:
ಇನ್ನು, ರಾಜಸ್ಥಾನ್ ತಂಡವನ್ನು ತವರಿನಲ್ಲಿ ಕಟ್ಟಿಹಾಕುವಲ್ಲಿ ಲಕ್ನೋ ತಂಡದ ಬೌಲರ್ಗಳು ಯಶಸ್ವಿಯಾದರು. ಲಕ್ನೋ ಸೂಪರ್ ಜೈಂಟ್ಸ್ ಪರ ಆವೇಶ್ ಖಾನ್4 ಓವರ್ ಮಾಡಿ25 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಮಾರ್ಕೋಸ್ ಸ್ಟೋನಿಸ್ 2 ವಿಕೆಟ್ ಪಡೆದರು.
ಇದನ್ನೂ ಓದಿ: PBKS vs RCB: ಪಂಜಾಬ್ ವಿರುದ್ಧ ಪಂದ್ಯದಿಂದ ಆರ್ಸಿಬಿ ಸ್ಟಾರ್ ಬೌಲರ್ ಔಟ್! ಆದ್ರೆ ತಂಡಕ್ಕೆ ಬೆಂಕಿ ಬೌಲರ್ ಎಂಟ್ರಿ
ಲಕ್ನೋ ನಿಧಾನಗತಿಯ ಬ್ಯಾಟಿಂಗ್:
ಕೆಎಲ್ ರಾಹುಲ್ 39 ರನ್, ಕೈಲ್ ಮೇಯರ್ಸ್ 42 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಫೋರ್ ನೆರವಿನಿಂದ 51 ರನ್, ಆಯುಷ್ ಬಡೋನಿ 1 ರನ್, ಮಾರ್ಕಸ್ ಸ್ಟೊಯಿನಿಸ್ 21 ರನ್, ಕೃನಾಲ್ ಪಾಂಡ್ಯ 4 ರನ್, ಯುದ್ಧವೀರ್ ಸಿಂಗ್ ಚರಕ್ 1 ರನ್ ಗಳಿಸಿದರು. ಈ ಮೂಲಕ ಲಕ್ನೋ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 154 ರನ್ ಗಳಿಸಿತು.
ಅಶ್ವಿನ್ಗೆ 2 ವಿಕೆಟ್:
ಇನ್ನು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಪರ ರವಿಚಂದ್ರನ್ ಅಶ್ವೀನ್ 2 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಟ್ರೆಂಟ್ ಬೋಲ್ಟ್ 1 ವಿಕೆಟ್, ಸಂದೀಪ್ ಶರ್ಮಾ 1 ವಿಕೆಟ್ ಮತ್ತು ಜೇಸನ್ ಹೋಲ್ಡರ್ 1 ವಿಕೆಟ್ ವಿಕೆಟ್ ಪಡದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ