IPL 2023, PBKS vs KKR: ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (PBKS vs KKR) ನಡುವೆ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ 7 ರನ್ ಗಳಿಂದ ಕೋಲ್ಕತ್ತಾ ವಿರುದ್ಧ ಜಯ ದಾಖಲಿಸಿದೆ.
ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಭಾನುಕಾ ರಾಜಪಕ್ಸೆ 50 ರನ್ ಗಳಿಸಿದರೆ, ನಾಯಕ ಶಿಖರ್ ಧವನ್ 40 ರನ್ ಗಳಿಸಿದರು. ಮಳೆಯಿಂದಾಗಿ ಆಟ ನಿಲ್ಲಿಸುವ ವೇಳೆಗೆ ಕೋಲ್ಕತ್ತಾ 16 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು. ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ ಮತ್ತು ಡಕ್ವರ್ತ್-ಲೂಯಿಸ್ ನಿಯಮದ ಆಧಾರದ ಮೇಲೆ ಪಂಜಾಬ್ ಅನ್ನು 7 ರನ್‌ಗಳಿಂದ ವಿಜಯಿ ಎಂದು ಘೋಷಿಸಲಾಯಿತು.
ಮಳೆಯ ಕಾರಣ ಪಂಜಾಬ್ ಮತ್ತು ಕೋಲ್ಕತ್ತಾ ನಡುವಿನ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದಡಿ ಪಂಜಾಬ್ ತಂಡಕ್ಕೆ ಗೆಲುವು ದೊರಕಿದೆ. ಡಿಎಲ್ಎಸ್ ನಿಯಮದ ಪ್ರಕಾರ ಕೆಕೆಆರ್ ವಿರುದ್ಧ ಪಂಜಾಬ್ ತಂಡ 7 ರನ್‌ಗಳಿಂದ ಗೆಲುವನ್ನು ದಾಖಲಿಸಿದೆ.
We win! 🕺🏼#PBKSvKKR #JazbaHaiPunjabi #SaddaPunjab #TATAIPL pic.twitter.com/nBdvtxnmIK
— Punjab Kings (@PunjabKingsIPL) April 1, 2023
ಕೋಲ್ಕತ್ತಾ ತಂಡ ಸೋಲಿನ ಸನಿಹ ತಲುಪಿದೆ. 17 ಓವರ್‌ಗಳಲ್ಲಿ 7 ವಿಕೆಟ್‌ಗೆ 146 ರನ್ ಗಳಿಸಿತು ಮತ್ತು ಗೆಲುವಿಗೆ 24 ಎಸೆತಗಳಲ್ಲಿ 46 ರನ್ ಅಗತ್ಯವಿದೆ. ಸದ್ಯ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ. ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂಜಾಬ್ ತಂಡ 7 ರನ್‌ಗಳ ಮುನ್ನಡೆಯಲ್ಲಿದೆ. ಪಂದ್ಯ ಆರಂಭವಾಗದಿದ್ದರೆ ಕೋಲ್ಕತ್ತಾ ಸೋಲನುಭವಿಸಲಿದೆ.
13 ಓವರ್‌ಗಳ ನಂತರ ಕೋಲ್ಕತ್ತಾ 5 ವಿಕೆಟ್ ಕಳೆದುಕೊಂಡು 100 ರನ್ ಗಳಿಸಿತು. ಈ ವೇಳೆ ಆಂಡ್ರೆ ರಸೆಲ್ ಮತ್ತು ವೆಂಕಟೇಶ್ ಅಯ್ಯರ್ ಕ್ರೀಸ್‌ನಲ್ಲಿದ್ದು, ತಂಡದ ಪರ ಹೋರಾಟ ನಡೆಸುತ್ತಿದ್ದಾರೆ.
ಸ್ಪಿನ್ನರ್ ರಾಹುಲ್ ಚಹಾರ್ ಅವರು ತಮ್ಮ ಸ್ಪೆಲ್‌ನ ಮೊದಲ ಎಸೆತದಲ್ಲಿ ರಿಂಕು ಸಿಂಗ್ ಅವರನ್ನು ಔಟ್ ಮಾಡಿದರು.
ನಾಯಕ ನಿತೀಶ್ ರಾಣಾ ಅವರು ಸಿಕಂದರ್ ರಾಜಾ ಕೋಲ್ಕತ್ತಾ ತಂಡಕ್ಕೆ ದೊಡ್ಡ ಹೊಡೆತ ನೀಡಿದರು. 24 ರನ್ ಗಳಿಸಿದ ಬಳಿಕ ರಾಹುಲ್ ಚಹಾರ್ ಗೆ ಕ್ಯಾಚ್ ನೀಡಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ವರುಣ್ ಚಕ್ರವರ್ತಿ ಬದಲಿಗೆ ವೆಂಕಟೇಶ್ ಅಯ್ಯರ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಯ್ಕೆ ಮಾಡಿದೆ. ಪಂಜಾಬ್ ತಂಡವು ಭಾನುಕಾ ರಾಜಪಕ್ಸೆ ಬದಲಿಗೆ ರಿಷಿ ಧವನ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಯ್ಕೆ ಮಾಡಿದೆ.
ಅರ್ಷದೀಪ್ ಸಿಂಗ್ ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದರು. ಮಂದೀಪ್ ಸಿಂಗ್ 2 ರನ್ ಗಳಿಸಿ ಔಟಾದರು. ಕೊನೆಯ ಎಸೆತದಲ್ಲಿ ಅನುಕುಲ್ ರಾಯ್ ಅವರ ವಿಕೆಟ್ ಪಡೆದರು. ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಅದ್ಭುತ ಆರಂಭ ನೀಡಿದರು.
ಅರ್ಷದೀಪ್ ಸಿಂಗ್ ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದರು. ಮಂದೀಪ್ ಸಿಂಗ್ 2 ರನ್ ಗಳಿಸಿ ಔಟಾದರು. ಕೊನೆಯ ಎಸೆತದಲ್ಲಿ ಅನುಕುಲ್ ರಾಯ್ ಅವರ ವಿಕೆಟ್ ಪಡೆದರು. ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಅದ್ಭುತ ಆರಂಭ ನೀಡಿದರು.
ಮೊಹಾಲಿಯಲ್ಲಿ ಫ್ಲಡ್‌ಲೈಟ್ ದೋಷದಿಂದ ಕಳೆದ ಅರ್ಧ ಗಂಟೆಯಿಂದ ಪಂದ್ಯ ಸ್ಥಗಿತಗೊಂಡಿತ್ತು. ಎರಡೂ ತಂಡಗಳ ಆಟಗಾರರು ಪಂದ್ಯ ಆರಂಭಕ್ಕಾಗಿ ಕಾದಿದ್ದರು. ಇದೀಗ ಪಂದ್ಯ ಆರಂಭವಾಗಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಲಿಲ್ಲ. ಕೆಕೆಆರ್ ಪರ ಟೀಮ್ ಸೌಥಿ 2 ವಿಕೆಟ್ ಪಡೆದರು. ಉಳಿದಂತೆ ಉಮೇಶ್ ಯಾದವ್, ಸುನೀಲ್ ನರೇನ್ ಮತ್ತು ವರುಣ್ ಚರ್ಕವರ್ತಿ ತಲಾ 1 ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಶಿಖರ್ ಧವನ್ 40 ರನ್, ಪ್ರಭಾಸಿಮ್ರಾನ್ ಸಿಂಗ್ 23 ರನ್, ಭಾನುಕಾ ರಾಜಪಕ್ಸೆ 50 ರನ್, ಜಿತೇಶ್ ಶರ್ಮಾ 21 ರನ್, ಸಿಕಂದರ್ ರಜಾ 16 ರನ್, ಸ್ಯಾಮ್ ಕರಣ್ 26 ರನ್ ಮತ್ತು ಶಾರುಖ್ ಖಾನ್ 11 ರನ್ ಗಳಿಸಿದರು.
ಪಂಜಾಬ್ ನಾಯಕ ಶಿಖರ್ ಧವನ್ 40 ರನ್ ಗಳಿಸಿ ಔಟಾದರು. ವರುಣ್ ಚಕ್ರವರ್ತಿ ಬೌಲಿಂಗ್ಗೆ ಕ್ಲೀನ್ ಬೌಲ್ಡ್ ಆಗಿ ಹಿಂತಿರುಗಿದರು.
ಭಾನುಕಾ ರಾಜಪಕ್ಸೆ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 50 ರನ್ ಗಳಿಸಿ ಔಟಾದರು. ಉಮೇಶ್ ಯಾದವ್ ಅವರ ಓವರ್‌ನಲ್ಲಿ ಕೋಲ್ಕತ್ತಾಗೆ ಎರಡನೇ ಯಶಸ್ಸು ಸಿಕ್ಕಿತು.
ವಿಕೆಟ್ ಪತನದ ನಂತರವೂ ಪಂಜಾಬ್ ಕಿಂಗ್ಸ್ ರನ್ ವೇಗವನ್ನು ಕಾಯ್ದುಕೊಂಡಿದೆ. 10 ಓವರ್‌ಗಳ ನಂತರ ತಂಡ 1 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ.
ಓವರ್: 8
ಸ್ಕೋರ್: 79
ವಿಕೆಟ್: 1
ಟಾಟಾ ಮೋಟಾರ್ಸ್ IPL-2023 ಅಧಿಕೃತ ಪಾಲುದಾರಿಕೆಯ ಮೂಲಕ EV ಕಾರಿಗಳಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಆದರೆ IPL-2023 ರಲ್ಲಿ ಬ್ಯಾಟ್ಸ್‌ಮನ್ Tiago.ev ನ ಕಾರಿಗೆ ಚೆಂಡು ಬಡಿದರೆ ಟಾಟಾ ಮೋಟಾರ್ಸ್ ಈ ಕೊಡುಗೆಯನ್ನು ಅಂದರೆ 5 ಲಕ್ಷ ನೀಡುತ್ತದೆ. ಕಾರಿಗೆ ಚೆಂಡು ಎಷ್ಟು ಬಾರಿ ಬಡಿದರೂ ಅಷ್ಟೂ ಹಣವನ್ನು ದಾನ ಮಾಡುವುದಾಗಿ ಘೋಷಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿರುವ ಪಂಜಾಬ್ ತಂಡಕ್ಕೆ ಆರಂಭಿ ಆಘಾತ ಎದುರಾಗಿದೆ. ಪಂಜಾಬ್ ಆರಂಭಿಕ ಆಟಗಾರ ಪ್ರಸಿದ್ಧ ಕೃಷ್ಣ 12 ಎಸೆತದಲ್ಲಿ 2 ಫೋರ್, 2 ಸಿಕ್ಸ್ ಮೂಲಕ 23 ರನ್ಗೆ ವಿಕೆಟ್ ಒಪ್ಪಿಸಿದರು.
ರಹಮಾನುಲ್ಲಾ ಗುರ್ಬಾಜ್ (WK), ಮನದೀಪ್ ಸಿಂಗ್, ನಿತೀಶ್ ರಾಣಾ (c), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಟಿಮ್ ಸೌಥಿ, ಅನುಕುಲ್ ರಾಯ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಶಿಖರ್ ಧವನ್ (c), ಪ್ರಭಾಸಿಮ್ರಾನ್ ಸಿಂಗ್ (WK), ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ್ ಕರಣ್, ಸಿಕಂದರ್ ರಜಾ, ನಾಥನ್ ಎಲ್ಲಿಸ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.
Focus levels 👌🏻👌🏻@PunjabKingsIPL skipper @SDhawan25 is Match Day ready 🔥🔥
Follow the match – https://t.co/UeBnlhdZdr #TATAIPL | #PBKSvKKR | #IPL2023 pic.twitter.com/bm3tO8Gat3
— IndianPremierLeague (@IPL) April 1, 2023