ಇಂಡಿಯನ್ ಪ್ರೀಮಿಯರ್ ಲೀಗ್‌ನ ಡಬಲ್ ಹೆಡರ್‌ನ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ (PBKS vs DC) ವಿರುದ್ಧ ಮುಖಾಮುಖಿಯಾಗಲಿದೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ತಂಡ ಸೋತರೆ ಪ್ಲೇಆಫ್ ರೇಸ್ ನಿಂದ ಹೊರಬೀಳಲಿದೆ. ಪಂಜಾಬ್ ಕಿಂಗ್ಸ್ ಇಲ್ಲಿ ಗೆದ್ದರೆ, 16 ಅಂಕಗಳನ್ನು ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳುತ್ತದೆ. ಈಗಾಗಲೇ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಪಂಜಾಬ್ - ಡೆಲ್ಲಿ ಅಂಕಪಟ್ಟಿ:
ಪಂಜಾಬ್ ಕಿಂಗ್ಸ್ ಈ ಋತುವಿನಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿದ ನಂತರ ಇದುವರೆಗೆ 5 ಪಂದ್ಯಗಳನ್ನು ಗೆದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ಬಗ್ಗೆ ಮಾತನಾಡುತ್ತಾ, 11 ಪಂದ್ಯಗಳನ್ನು ಆಡಿದ ನಂತರ, ಅವರ ಖಾತೆಯಲ್ಲಿ 4 ಗೆಲುವುಗಳಿವೆ. ಈ ತಂಡದ ಪ್ಲೇಆಫ್ ಪಯಣ ಬಹುತೇಕ ಮುಗಿದಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲು ಅವರ ಹಾದಿಯನ್ನು ಕಷ್ಟಕರವಾಗಿಸಿದೆ. ಆದರೆ ಇಂದಿನ ಪಂದ್ಯ ಗೆದ್ದರೆ ಡೆಲ್ಲಿ ಸಹ ಪ್ಲೇಆಫ್ ಕನಸು ಜೀವಂತವಾಗಲಿದೆ.
It's ACTION time in Delhi 👊🏻
Who wins today's second clash?
Follow the match ▶️ https://t.co/bCb6q4bzdn #TATAIPL | #DCvPBKS pic.twitter.com/BUWtMuxiiA
— IndianPremierLeague (@IPL) May 13, 2023
ಅರುಣ್ ಜೇಟ್ಲಿಯಲ್ಲಿರುವ ಪಿಚ್ ನಿಧಾನಗತಿಯಲ್ಲಿದೆ ಮತ್ತು ನಿಧಾನಗತಿಯ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಪಂದ್ಯದ ನಂತರದ ಹಂತಗಳಲ್ಲಿ ಪರಿಸ್ಥಿತಿಗಳು ಸುಲಭವಾಗುತ್ತವೆ. ಅಲ್ಲದೇ ಪಿಚ್ ಬೌಲರ್‌ಗಳಿಗೆ ಹಚ್ಚು ಸಹಾಯಕವಾಗಿರುವುದರಿಂದ ದೊಡ್ಡ ಸ್ಕೋರ್ ನಿರೀಕ್ಷೆಯಿಲ್ಲ. ಅರುಣ್ ಜೇಟ್ಲಿ ಅವರ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 163 ಆಗಿದೆ.
ಇದನ್ನೂ ಓದಿ: IPL 2023: ಅಂತೂ ಇಂತೂ ಕಾಂಗ್ರೆಸ್ ಗೆದ್ದಾಯ್ತು, RCB ಕಪ್ ಗೆಲ್ಲೋದ್ಯಾವಾಗ?
DC vs PBKS ಹೆಡ್ ಟು ಹೆಡ್ ರೆಕಾರ್ಡ್:
ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ 30 ಬಾರಿ ಮುಖಾಮುಖಿಯಾಗಿವೆ. ಡಿಸಿ 15 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ 15 ಪಂದ್ಯಗಳನ್ನು ಗೆದ್ದಿದೆ. ಆದರೆ ಈ ಸೀಸನ್ನಲ್ಲಿ ಪಂಜಾಬ್ ತಂಡ ಡೆಲ್ಲಿ ತಂಡಕ್ಕಿಂತ ಹೆಚ್ಚು ಬಲಿಷ್ಠವಾಗಿದೆ. ಹೀಗಾಗಿ ಇಂಡು ಪಂಜಾಬ್ ಗೆಲ್ಲುವ ಫೇವರೇಟ್ ತಂಡವಾಗಿದೆ.
ಪಂಜಾಬ್ - ಡೆಲ್ಲಿ ಪ್ಲೇಯಿಂಗ್ 11:
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್ (ಸಿ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆ), ಸ್ಯಾಮ್ ಕರಣ್, ಸಿಕಂದರ್ ರಜಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (c), ಫಿಲಿಪ್ ಸಾಲ್ಟ್ (wk), ಮಿಚೆಲ್ ಮಾರ್ಷ್, ರಿಲೆ ರುಸ್ಸೋ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಪ್ರವೀಣ್ ದುಬೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್.
ಅಂಪೈರ್ಗಳ ತಪ್ಪು ನಿರ್ಧಾರ:
ಹೌದು, ಇಂದಿನ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಅಂಪೈರ್ ತೆಗೆದುಕೊಂಡ ಎರಡು ನಿರ್ಧಾರಗಳು ವಿವಾದಕ್ಕೀಡಾಗಿವೆ. ಎರಡೂ ಬಾರಿ ಮೂರನೇ ಅಂಪೈರ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಿರ್ಧಾರಗಳನ್ನು ಪ್ರಕಟಿಸಿದರು.ಅವೇಶ್ ಖಾನ್ ಅವರ ಬೀಮರ್ ಅನ್ನು ಅಬ್ದುಲ್ ಸಮದ್ ಅವರು ಲೆಗ್ ಸೈಡ್ ಕಡೆಗೆ ಆಡಿದರು. ಮೈದಾನದಲ್ಲಿದ್ದ ಅಂಪೈರ್ ತಕ್ಷಣವೇ ನೋ ಬಾಲ್ ಎಂದು ಘೋಷಿಸಿದರು. ಆದರೆ ಲಕ್ನೋ ಥರ್ಡ್ ಅಂಪೈರ್ ಮೊರೆಹೋಯಿತು.ಟಿವಿ ರೀಪ್ಲೇಯಲ್ಲಿ ಅದು ನೋ ಬಾಲ್‌ನಂತೆ ಕಾಣುತ್ತಿತ್ತು. ಸಮದ್ ಶಾಟ್ ಆಡಿದಾಗ ಚೆಂಡು ಅವರ ಸೊಂಟಕ್ಕಿಂತ ಮೇಲಿತ್ತು. ಆದರೆ, ಶಾಟ್ ಆಡುವಾಗ ಸಮದ್ ಕಾಲು ಬಾಗಿದ ಕಾರಣ ಮೂರನೇ ಅಂಪೈರ್ ನೋ ಬಾಲ್ ಅಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ