ಭಾರತ-ಶ್ರೀಲಂಕಾ ಅಂಡರ್-19 ಟೆಸ್ಟ್: ತ್ರಿಶತಕದ ಅಂಚಿನಲ್ಲಿ ಎಡವಿದ ಪವನ್ ಷಾ: ಭಾರತ 613 ರನ್​ಗೆ ಡಿಕ್ಲೇರ್

news18
Updated:July 25, 2018, 2:30 PM IST
ಭಾರತ-ಶ್ರೀಲಂಕಾ ಅಂಡರ್-19 ಟೆಸ್ಟ್: ತ್ರಿಶತಕದ ಅಂಚಿನಲ್ಲಿ ಎಡವಿದ ಪವನ್ ಷಾ: ಭಾರತ 613 ರನ್​ಗೆ ಡಿಕ್ಲೇರ್
news18
Updated: July 25, 2018, 2:30 PM IST
ನ್ಯೂಸ್ 18 ಕನ್ನಡ

ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂಡರ್-19 ಎರಡನೇ ಯೂರ್ಥ ಟೆಸ್ಟ್​ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಅಂಡರ್-19 ತಂಡ ಬೃಹತ್ ಮೊತ್ತ ಕಲೆಹಾಕಿದೆ. ಪವನ್ ಷಾ ಅವರ ಅಮೋಘ 282 ರನ್​ಗಳ ನೆರವಿನಿಂದ ಭಾರತ 8 ವಿಕೆಟ್ ಕಳೆದುಕೊಂಡು 613 ರನ್​ಗೆ ಡಿಕ್ಲೇರ್ ಮಾಡಿದೆ.

ಮೊದಲ ದಿನದಾಟದ ಅಂತ್ಯಕ್ಕೆ 428 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ, ಎರಡನೇ ದಿನವಾದ ಇಂದು ಉತ್ತಮ ಬ್ಯಾಟಿಂಗ್ ಆರಂಭಿಸಿತು. ಪವನ್ ಷಾ ಹಾಗೂ ನೇಹಲ್ ಪಡೇರಾ 5ನೇ ವಿಕೆಟ್​ಗೆ 160 ರನ್​ಗಳ ಕಾಣಿಕೆ ನೀಡಿದರು. 64 ರನ್​ ಬಾರಿಸಿ ವಡೇರಾ ಔಟ್ ಆದರೆ, ಬಂದ ಬೆನ್ನಲ್ಲೆ ಆಯುಶ್ ಬಡೊನಿ ಕೇವಲ 1 ರನ್​ಗೆ ನಿರ್ಗಮಿಸಿದರು. ಈ ಮಧ್ಯೆ ಪವನ್ ಷಾ ಅಮೋಘ ದ್ವಿಶತಕದ ಸಂಭ್ರಮ ಹಂಚಿಕೊಂಡರು. ನಂತರ ಕ್ರೀಸ್​ಗೆ ಬಂದ ಅರ್ಜುನ್ ತೆಂಡೂಲ್ಕರ್ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 14 ರನ್​ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಅಂತಿಮವಾಗಿ ಪವನ್ ಷಾ ರನೌಟ್​ಗೆ ಬಲಿಯಾದ ವೇಳೆ ತಂಡ ಡಿಕ್ಲೇರ್ ಮಾಡಿತು. ಷಾ 332 ಎಸೆತಗಳಲ್ಲಿ 33 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 282 ರನ್​ ಬಾರಿಸಿದರು. ಶ್ರೀಲಂಕಾ ಪರ ಪರೇರಾ, ನಿಫುಣ್ ಮಲಿಂಗ, ಸೇನರತ್ನೆ ಹಾಗೂ ವಿಜಯಕಾಂತ್ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಭಾರತ: 613/8(ಡಿಕ್ಲೇರ್)

(ಪವನ್ ಷಾ 282, ಅಥರ್ವ ತೈದೆ 177, ನೇಹಲ್ 64, ಸೇನರತ್ನೆ 177/1)
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...