ಬೆಂಗಳೂರು, ಜ. 16: ಮೂರು ಬಾರಿಯ ಚಾಂಪಿಯನ್ಸ್ ಪಟ್ನಾ ಪೈರೇಟ್ಸ್ ತಂಡ 38-31 ಅಂಕಗಳಿಂದ ಬೆಂಗಳೂರು ಬುಲ್ಸ್ ಅನ್ನು ಪರಾಭವಗೊಳಿಸಿದೆ. ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಗಳು ಅಂಕ ಹಂಚಿಕೊಂಡಿವೆ. ಬೆಂಗಳೂರು ಬು್ಸ್ ತಂಡ ಸೋಲುಂಡರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಪಟ್ನಾ ಪೈರೇಟ್ಸ್ ಎರಡನೇ ಸ್ಥಾನಕ್ಕೇರಿದೆ. ಡ್ರಾ ಮಾಡಿಕೊಂಡು ತಲಾ 3 ಅಂಕ ಗಳಿಸಿದ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ತಮಿಳ್ ತಲೈವಾಸ್ ತಂಡಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನಕ್ಕೆ ಏರಿವೆ.
ಬೆಂಗಳೂರು-ಪಾಟ್ನಾ ಪಂದ್ಯದಲ್ಲಿ ಡಿಫೆಂಡರ್ಸ್ ಮಿಂಚು:
ಪವನ್ ಶೆರಾವತ್ ಸೂಪರ್10 ರೇಡ್ ನಡುವೆಯೂ ಪಟ್ನಾ ಪೈರೇಟ್ಸ್ ಎದುರು ಬೆಂಗಳೂರು ಬುಲ್ಸ್ಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಪಂದ್ಯ ಬಹುತೇಕ ಡಿಫೆಂಡರ್ಗಳ ನಡುವಿನ ಯುದ್ಧವಾಗಿತ್ತು. ಪಟ್ನಾ ತಂಡದ ಸುನೀಲ್ 9 ಅಂಕ ಗಳಿಸಿದರು. ಎಲ್ಲವೂ ಟ್ಯಾಕಲ್ ಪಾಯಿಂಟ್ಗಳೇ. ಸುನೀಲ್ ತಮ್ಮ ತಂಡದ ರೇಡರ್ಗಳಿಗಿಂತಲೂ ಹೆಚ್ಚು ಅಂಕ ಗಳಿಸಿದರು. ಈ ಸೀಸನ್ನ ಪಂದ್ಯಾವಳಿಯಲ್ಲಿ ಡಿಫೆಂಡರ್ವೊಬ್ಬ ಒಂದು ಪಂದ್ಯದಲ್ಲಿ ತನ್ನ ತಂಡದ ಯಾವುದೇ ರೇಡರ್ಗಿಂತ ಹೆಚ್ಚು ಅಂಕ ಗಳಿಸಿದ್ದು ಇದೇ ಮೊದಲು.
ಬೆಂಗಲೂರು ಬುಲ್ಸ್ ತಂಡದ ಡಿಫೆಂಡರ್ಗಳಾದ ಮಹೇಂದರ್ ಸಿಂಗ್ ಮತ್ತು ಸೌರಭ್ ನಂದಾಲ್ ಅವರೂ ತಲಾ 6 ವಿಕೆಟ್ ಸಂಪಾದಿಸಿದರು. ಆದರೆ, ಪಟ್ನಾ ಪೈರೇಟ್ಸ್ ತಂಡದ ರೇಡರ್ಗಳಾದ ಸಚಿನ್, ಗುಮನ್ ಸಿಂಗ್ ಇಬ್ಬರೂ ಸೇರಿ 17 ಅಂಕಗಳನ್ನ ಕೊಳ್ಳೆ ಹೊಡೆದರು. ಅಂತಿಮವಾಗಿ ಪಟ್ನಾ ಪೈರೇಟ್ಸ್ ಗೆಲುವಿನ ನಗೆ ಬೀರಿತು. 7 ಅಂಕಗಳ ಅಂತರದ ಸೋಲಾದ್ದರಿಂದ ಬೆಂಗಳೂರು ಬುಲ್ಸ್ ತಂಡಕ್ಕೆ 1 ಅಂಕ ದಕ್ಕಿತು.
ಇದನ್ನೂ ಓದಿ: U19 World Cup: ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಜಯಭೇರಿ; ಇಲ್ಲಿವೆ ಮುಂದಿನ ಪಂದ್ಯಗಳು
ತಮಿಳ್ ತಲೈವಾಸ್-ಜೈಪುರ್ ಪಿಂಕ್ ಪ್ಯಾಂಥರ್ಸ್ ಪಂದ್ಯ ಡ್ರಾ:
ಇದಕ್ಕೆ ಮುನ್ನ ನಡೆದ ತಮಿಳ್ ತಲೈವಾಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ 31 ಅಂಕಗಳಿಂದ ಡ್ರಾನಲ್ಲಿ ಅಂತ್ಯಗೊಂಡಿತು. ಜೈಪುರ್ ತಂಡದ ಅರ್ಜುನ್ ದೇಶವಾಲ್ ಅವರ ಮ್ಯಾಜಿಕ್ ಇಂದು ನಡೆಯಲಿಲ್ಲ. ಈ ಪಂದ್ಯದಲ್ಲಿ ಅವರು 15 ರೇಡ್ಗಳಿಂದ ಗಳಿಸಿದ್ದು ಕೇವಲ 6 ಅಂಕ ಮಾತ್ರ.
ತಮಿಳ್ ತಲೈವಾಸ್ ತಂಡದ ರೇಡರ್ ಮಂಜೀತ್ 9 ಅಂಕ ಗಳಿಸಿದರು. ಡೂ ಆರ್ ಡೈ ರೇಡರ್ ಅಜಿತ್ ಪವಾರ್ 13 ರೇಡ್ಗಳಿಂದ ಕೇವಲ 3 ಅಂಕ ಗಳಿಸಿದ್ದು ತಲೈವಾಸ್ಗೆ ನೆರವಾಗಲಿಲ್ಲ.
ನಿನ್ನೆ ಪಂದ್ಯಗಳ ಫಲಿತಾಂಶ:
1) ಹರ್ಯಾಣ ಸ್ಟೀಲರ್ಸ್ ವಿರುದ್ಧ ದಬಂಗ್ ಡೆಲ್ಲಿಗೆ 28-25 ಅಂಕಗಳಿಂದ ಜಯ
2) ತೆಲುಗು ಟೈಟಾನ್ಸ್ ವಿರುದ್ಧ ಯು ಪಿ ಯೋದ್ಧಾಗೆ 39-33 ಅಂಕಗಳಿಂದ ಜಯ
3) ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ಸ್ ಪಂದ್ಯ 32-32 ಅಂಕಗಳಿಂದ ಡ್ರಾ.
ಇದನ್ನೂ ಓದಿ: PKL 8: ಬೆಂಗಾಲ್ ವಾರಿಯರ್ಸ್ ಮತ್ತು ಪುಣೇರಿ ಪಲ್ಟನ್ಗೆ ಗೆಲುವಿನ ಸಿಂಚನ
ನಾಳೆಯ ಪಂದ್ಯಗಳು:
1) ಪುಣೇರಿ ಪಲ್ಟನ್ vs ಯು ಪಿ ಯೋದ್ಧಾ, ಸಮಯ ಸಂಜೆ 7:30ಕ್ಕೆ
2) ತೆಲುಗು ಟೈಟಾನ್ಸ್ vs ಬೆಂಗಾಲ್ ವಾರಿಯರ್ಸ್, ಸಮಯ ರಾತ್ರಿ 8:30ಕ್ಕೆ
ಅಂಕಪಟ್ಟಿ:
1) ಬೆಂಗಳೂರು ಬುಲ್ಸ್: 39 ಅಂಕ
2) ಪಟ್ನಾ ಪೈರೇಟ್ಸ್: 39 ಅಂಕ
3) ದಬಂಗ್ ಡೆಲ್ಲಿ: 37 ಅಂಕ
4) ಜೈಪುರ್ ಪಿಂಕ್ ಪ್ಯಾಂಥರ್ಸ್: 31 ಅಂಕ
5) ತಮಿಳ್ ತಲೈವಾಸ್: 30 ಅಂಕ
6) ಯು ಪಿ ಯೋದ್ಧಾ: 28 ಅಂಕ
7) ಯು ಮುಂಬಾ: 28 ಅಂಕ
8) ಬೆಂಗಾಲ್ ವಾರಿಯರ್ಸ್: 25 ಅಂಕ
9) ಹರ್ಯಾಣ ಸ್ಟೀಲರ್ಸ್: 24 ಅಂಕ
10) ಪುಣೇರಿ ಪಲ್ಟನ್: 21 ಅಂಕ
11) ಗುಜರಾತ್ ಜೈಂಟ್ಸ್: 20 ಅಂಕ
12) ತೆಲುಗು ಟೈಟಾನ್ಸ್: 11 ಅಂಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ