Pro Kabaddi League: ಪಾಟ್ನಾ ವಿರುದ್ಧ ಸೋತು ಸುಣ್ಣವಾದ ಬೆಂಗಳೂರು ಬುಲ್ಸ್

Patna Pirates V/S Bengaluru Bulls: ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಆಡಿದ 21 ಪಂದ್ಯಗಳಲ್ಲಿ 10 ಜಯ, ಸೋಲು 9 , 1 ಡ್ರಾ ಸಾಧಿಸಿದ್ದು 61 ಅಂಕಗಳಿಸಿದೆ. ಇನ್ನು ಬೆಂಗಳೂರು ಫೈನಲ್ ಪ್ರವೇಶಿಸಬೇಕಾದರೆ ಮುಂದೆ ಹರಿಯಾಣ ಸ್ಟೀಲರ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಗೆದ್ದು ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ.

ಬೆಂಗಳೂರು ಬುಲ್ಸ್, ಪಾಟ್ನಾ ಪೈರೇಟ್ಸ್

ಬೆಂಗಳೂರು ಬುಲ್ಸ್, ಪಾಟ್ನಾ ಪೈರೇಟ್ಸ್

 • Share this:
  ಬಹುನಿರೀಕ್ಷಿತ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ( Pro Kabaddi League) 120ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್(Bengaluru Bulls) ವಿರುದ್ಧ ಪಾಟ್ನಾ ಪೈರೇಟ್ಸ್(Patna Pirates )ಗೆಲುವು ಸಾಧಿಸಿದೆ.. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ(Hotel) ನಡೆದ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ (Point Table) ಅಗ್ರಸ್ಥಾನದಲ್ಲಿರುವ(Toper) ಪಾಟ್ನಾ ವಿರುದ್ಧ ಬೆಂಗಳೂರು 34-36 ಅಂತರದಿಂದ ಸೋಲು ಕಾಣುವ ಮೂಲಕ ಐದನೇ ಸ್ಥಾನಕ್ಕೆ(5th Place) ಕುಸಿದಿದೆ. ಉತ್ತಮ ಲಯದಲ್ಲಿ ಇದ್ದ ಬೆಂಗಳೂರು ಬುಲ್ಸ್‌ಗೆ ಮುಳುವಾಗಿದ್ದು ಮೊದಲರ್ಧದಲ್ಲಿ ಅನುಭವಿಸಿದ ಹಿನ್ನಡೆ. ಎರಡನೇ ಅವಧಿಯಲ್ಲಿ ತಿರುಗಿಬಿದ್ದರೂ ಕೇವಲ ಎರಡು ಅಂಕಗಳ ಅಂತರದಿಂದ ಸೋಲಬೇಕಾಯಿತು.ಆರಂಭದಲ್ಲಿ ಪಾಟ್ನಾ ಕಾಯ್ದುಕೊಂಡ ಮುನ್ನಡೆಯನ್ನು ಪಂದ್ಯದ ಯಾವುದೇ ಹಂತದಲ್ಲೂ ಬಿಟ್ಟು ಕೊಡಲಿಲ್ಲ. ಅಂತಿಮವಾಗಿ ಪಾಟ್ನಾ 36-34 ರಿಂದ ಜಯ ಸಾಧಿಸಿ ಪ್ರೊ ಕಬಡ್ಡಿ ಲೀಗ್ ನಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ.

  ಪಂದ್ಯದ ಮೊದಲಾರ್ಧದಲ್ಲಿ ಪಾಟ್ನಾ ಪ್ರಾಬಲ್ಯ

  ಮೊದಲಾರ್ಧದಲ್ಲಿ ಪಾಟ್ನಾ 19-14 ರಲ್ಲಿ ಮುನ್ನಡೆ ಪಡೆದುಕೊಂಡಿತು, ದ್ವಿತೀಯಾರ್ಧದಲ್ಲಿ ಬುಲ್ಸ್​ ಕಮ್​ಬ್ಯಾಕ್ ಮಾಡಿತ್ತಾದರೂ ಪಾಟ್ನಾ ರಕ್ಷಣಾತ್ಮಕ ಆಟಕ್ಕೆ ಮುಂದಾಗಿ ತನ್ನ ಮುನ್ನಡೆಯನ್ನು ಕೊನೆಯವರೆಗೂ ಕಾಪಾಡಿಕೊಂಡಿತು. ಕೊನೆಯ ನಿಮಿಷದಲ್ಲಿ 34 - 34 ರಲ್ಲಿ ಸಮಬಲ ಸಾಧಿಸುವಲ್ಲಿ ಬುಲ್ಸ್ ಯಶಸ್ವಿಯಾದರೂ, ಪಾಟ್ನಾ ಪಾಟ್ನಾ ರೈಡರ್​ ಸಚಿನ್ ಒಂದು ಅಂಕ ಪಡೆದು 35-34ರಲ್ಲಿ ಮುನ್ನಡೆ ಹೆಚ್ಚಿಸಿದ್ರು.

  ಇದನ್ನೂ ಓದಿ: ಶತಕವೀರ ಯಜುವೇಂದ್ರ ಚಹಾಲ್.. ಒನ್​ ಡೇ ಪಂದ್ಯಗಳಲ್ಲಿ 104 ವಿಕೆಟ್​ ಕಬಳಿಸಿದ ಸ್ಪಿನ್​ ಮಾಂತ್ರಿಕ!

  ಇನ್ನು ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡ ಸಂಘಟಿತ ಆಟದ ಪ್ರದರ್ಶನ ನೀಡಿ ಗಮನ ಸೆಳೆಯಿತು. ಸ್ಟಾರ್ ರೈಡರ್ ಮನು ಗೋಯತ್ 9, ರೈಟ್ ಕಾರ್ನರ್ ಡಿಫೆಂಡರ್ ಸುನಿಲ್ ಹಾಗೂ ಮೊಹಮ್ಮದ್ರೇಜಾ ತಲಾ ಆರು ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ಪರಾಜಿತ ತಂಡದ ಪರ ಪವನ್ ಸೆಹ್ರಾವತ್ 7, ಭರತ್ ಹಾಗೂ ಸೌರಭ್ ನಡಾಲ್ ತಲಾ 4 ಅಂಕ ಸೇರಿಸಿದರು.

  ಕೊನೆಯ ನಿಮಿಷದಲ್ಲಿ ಪಂದ್ಯ ಕೈಚೆಲ್ಲಿದ ಬೆಂಗಳೂರು

  ಒಟ್ಟಾರೆ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು. ಒಟ್ಟಾರೆ ಪಂದ್ಯದಲ್ಲಿ ಪಾಟ್ನಾ 40 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ 14 ರೈಡ್ ಪಾಯಿಂಟ್ ಗಳಿಸಿದರೆ, ಇಷ್ಟೇ ದಾಳಿಯಲ್ಲಿ ಬೆಂಗಳೂರು 12 ಅಂಕ ಕಲೆ ಹಾಕಿತು. ಅಲ್ಲದೆ ಇದರಲ್ಲಿ ಒಂದು ಸೂಪರ್ ರೈಡ್ ಸಹ ಸೇರಿದೆ. ಇನ್ನು ಎದುರಾಳಿ ಆಟಗಾರರನ್ನು ಹಿಡಿಯುವ 31 ಪ್ರಯತ್ನದಲ್ಲಿ ಪಾಟ್ನಾ 16 ರಲ್ಲಿ ಯಶ ಕಂಡಿತು. ಇನ್ನು ಬೆಂಗಳೂರು 11 ಬಾರಿ ಎದುರಾಳಿ ಆಟಗಾರರನ್ನು ಕಟ್ಟಿಹಾಕಲುವಲ್ಲಿ ಸಫಲವಾಯಿತು

  ಇನ್ನು ಕೊನೆಯ ರೈಡಿಂಗ್​ ಬುಲ್ಸ್​ಗೆ ಸಿಕ್ಕಿತ್ತು, ಕೇವಲ ಒಂದು ಅಂಕ ಪಡೆದು ಟೈ ಸಾಧಿಸುವ ಅವಕಾಶ ಕೂಡ ಇತ್ತು. ಆದರೆ, ಪವನ್​ ಅವರನ್ನು ​ಪಾಟ್ನಾ ಡಿಫೆಂಡರ್​ಗಳು ತಮ್ಮ ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

  ಕಬಡ್ಡಿ ಲೀಗ್ ನ 120ನೇ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ ಆಡಿದ 20 ಪಂದ್ಯಗಳಲ್ಲಿ 14 ಜಯ, 4 ಸೋಲು, 1 ಡ್ರಾ ಸಾಧಿಸಿದ್ದು 80 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಪಾಟ್ನಾ ಪೈರೇಟ್ಸ್ ಗಟ್ಟಿಗೊಳಿಸಿದೆ.

  ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಆಡಿದ 21 ಪಂದ್ಯಗಳಲ್ಲಿ 10 ಜಯ, ಸೋಲು 9 , 1 ಡ್ರಾ ಸಾಧಿಸಿದ್ದು 61 ಅಂಕಗಳಿಸಿದೆ. ಇನ್ನು ಬೆಂಗಳೂರು ಫೈನಲ್ ಪ್ರವೇಶಿಸಬೇಕಾದರೆ ಮುಂದೆ ಹರಿಯಾಣ ಸ್ಟೀಲರ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಗೆದ್ದು ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ.

  ಯು- ಮುಂಬಾಗೆ ಸೋಲು

  ಇನ್ನು ದಿನದ ಮೊದಲ ಪಂದ್ಯದಲ್ಲಿ ಜೈಪುರ ತಂಡ ಯು ಮುಂಬಾ ವಿರುದ್ಧ 44-28 ಅಂತರದಿಂದ ಗೆಲುವು ಸಾಧಿಸಿತು. ಜೈಪುರ ಪರ ರೈಡರ್‌ ಅರ್ಜುನ್‌ ದೇಸ್ವಾಲ್‌ 17 ಅಂಕ ಗಳಿಸಿದರು. ಮುಂಬಾ ಪರ ವಿ. ಅಜೀತ್‌ 11 ಅಂಕ ಸಂಪಾದಿಸಿದರು.

  ಇದನ್ನೂ ಓದಿ: ಸರಿಯಾದ ಊಟ ಕೊಡ್ತಿಲ್ಲ, ಮೂಳೆ ಎಲ್ಲ ಸವೆದು ಹೋಗ್ತಿದೆ.. ರಷ್ಯಾ ಆಟಗಾರ್ತಿಯಿಂದ ಒಲಂಪಿಕ್ಸ್ ವಿರುದ್ಧ ಆರೋಪ!

  ಪುಣೇರಿ ಪಲ್ಟಾನ್ ಗೆ ಗೆಲುವು

  ಇನ್ನು ಪುಣೇರಿ ಪಲ್ಟಾನ್ ತಂಡವು ತಮಿಳ್ ತಲೈವಾಸ್ ವಿರುದ್ಧ 43-31 ಅಂತರದಲ್ಲಿ ಜಯಗಳಿಸುವ ಮೂಲಕ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿತು. ಯುವ ರೈಡರ್‌ಗಳಾದ ಅಸ್ಲಾಮ್ ಇನಾಮದಾರ್ ಮತ್ತು ಮೋಹಿತ್ ಗೋಯತ್ ಪುಣೆಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಒಟ್ಟು 19 ಅಂಕಗಳನ್ನು ಗಳಿಸಿದರು. ಡಿಫೆಂಡರ್ ಅಭಿನೇಶ್ ನಡರಾಜನ್ ಆಟದಲ್ಲಿ ಐದು ಅಂಕ ಗಳಿಸಿದರು.

  ತಲೈವಾಸ್ ಪರ ಹಿಮಾಂಶು ಮತ್ತು ಭವಾನಿ ರಜಪೂತ್ 15 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು. ಆದಾಗ್ಯೂ, ಅನುಭವಿ ತಾರೆಯರ ಕಳಪೆ ಪ್ರದರ್ಶನದಿಂದಾಗಿ ಅವರ ಪ್ರಯತ್ನಗಳು ವ್ಯರ್ಥವಾಯಿತು.
  Published by:ranjumbkgowda1 ranjumbkgowda1
  First published: