Pro Kabaddi: ಗುಜರಾತ್‌ ಜೈಂಟ್ಸ್‌ ವಿರುದ್ಧ ಸೋತ ಬೆಂಗಳೂರು ಬುಲ್ಸ್ ; ಅಂತಿಮ ಘಳಿಗೆಯಲ್ಲಿ ಕೈ ಜಾರಿದ ಪಂದ್ಯ

Bengaluru Bulls: ಗುಜರಾತ್‌ ಜೈಂಟ್ಸ್‌ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಉದ್ದೇಶ ಹೊಂದಿದ್ದ ಪವನ್‌ ಸೆಹ್ರಾವತ್‌ ನಾಯಕತ್ವದ ಬೆಂಗಳೂರು ತಂಡ ಇಂದು ಸೋಲು ಅನುಭವಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ

ಬೆಂಗಳೂರು ಬುಲ್ಸ್-ಗುಜರಾತ್‌ ಜೈಂಟ್ಸ್‌

ಬೆಂಗಳೂರು ಬುಲ್ಸ್-ಗುಜರಾತ್‌ ಜೈಂಟ್ಸ್‌

  • Share this:
    ಬಹುನಿರೀಕ್ಷಿತ ಪ್ರೊ ಕಬಡ್ಡಿ(Pro Kabaddi) ಲೀಗ್ ನ ಸೂಪರ್ ಸಂಡೇಯ(Super Sunday) 99ನೇ ಪಂದ್ಯದಲ್ಲಿ ಬೆಂಗಳೂರು(Bengaluru ) ತಂಡವನ್ನು ಬಗ್ಗು ಬಡಿಯುವ ಮೂಲಕ ಗುಜರಾತ್‌ ಜೈಂಟ್ಸ್‌(Gujarat Giants) ಕೊನೆಗೂ ಗೆಲುವಿನ ನಗೆ ಬೀರಿದೆ. ಕೊನೆಯ ಸೆಕೆಂಡ್‌ವರೆಗೆ(Second) ಗೆಲುವಿಗಾಗಿ ಹೋರಾಡಿದ ಬೆಂಗಳೂರು ಬುಲ್ಸ್ (Bengaluru Bulls) ಮತ್ತು ಗುಜರಾತ್‌ ಜೈಂಟ್ಸ್‌ ನಡುವಿನ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಆದ್ರೆ ಎರಡು ತಂಡದ ಆಟಗಾರರ ನಡುವೆ ಜಿದ್ದಾಜಿದ್ದಿನ ಕಾಳಗದಲ್ಲಿ ಬೆಂಗಳೂರು ಬುಲ್ಸ್ ಎದುರು ಗುಜರಾತ್‌ ಜೈಂಟ್ಸ್‌ ತಂಡ 40-36 ಅಂಕಗಳಿಂದ ಗೆಲುವು ಸಾಧಿಸಿತು.

    ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಬೆಂಗಳೂರು ಕನಸು ನುಚ್ಚು ನೂರು

    ಇನ್ನು ಗುಜರಾತ್‌ ಜೈಂಟ್ಸ್‌ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಉದ್ದೇಶ ಹೊಂದಿದ್ದ ಪವನ್‌ ಸೆಹ್ರಾವತ್‌ ನಾಯಕತ್ವದ ಬೆಂಗಳೂರು ತಂಡ ಇಂದು ಸೋಲು ಅನುಭವಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.ಲೀಗ್‌ನಲ್ಲಿ ಈವರೆಗೆ ಒಟ್ಟು 19 ಪಂದ್ಯಗಳನ್ನು ಆಡಿರುವ ಬೆಂಗಳೂರು ಬುಲ್ಸ್‌ 9 ಗೆಲುವು, 8 ಸೋಲು ಮತ್ತೆರಡು ಡ್ರಾ ಫಲಿತಾಂಶಗಳೊಂದಿಗೆ ಒಟ್ಟು 55 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದುಕೊಂಡಿದೆ.

    ಇದನ್ನೂ ಓದಿ: ಈ ಸೀಸನ್​ ಸಖತ್​ ಡಲ್​ ಹೊಡೆದ ರೆಕಾರ್ಡ್ ಬ್ರೇಕರ್​ ಪರ್ದೀಪ್​.. ಇವ್ರ ದಾಖಲೆ ಮುರಿಯೋಕೆ ಕಾಯ್ತಿದ್ದಾರೆ 3 ಪ್ಲೇಯರ್ಸ್​!

    ಅಂತಿಮ ಗಳಿಗೆಯಲ್ಲಿ ಬೆಂಗಳೂರು ಕೈ ಜಾರಿದ ಪಂದ್ಯ

    ಇನ್ನು ಪಂದ್ಯದ ಮೊದಲಾರ್ಧದಲ್ಲಿ ಪವನ್‌ ಕುಮಾರ್‌ ಭರ್ಜರಿ ದಾಳಿ ಸಂಘಟಿಸಿ ಬುಲ್ಸ್‌ಗೆ ಮೇಲುಗೈ ತಂದುಕೊಟದ್ಟರೂ 20 ನಿಮಿಷಗಳ ಮುಕ್ತಾಯಕ್ಕೆ ಇತ್ತಂಡಗಳು ಬಹುತೇಕ ಸಮಬಲ ಸಾಧಿಸಿದ್ದವು. ಒಂದು ಹಂತದಲ್ಲಿ ಈ ಪಂದ್ಯ ಡ್ರಾ ಫಲಿತಾಂಶ ಕಾಣುವುದು ಖಚಿತ ಎಂದೇ ಅಂದಾಜಿಸಲಾಗಿತ್ತು.

    ಆದರೆ ಅಂತಿಮ ಗಳಿಗೆಯಲ್ಲಿ ಎದುರಾಳಿ ತಂಡದ ಪ್ರಮುಖ ರೇಡರ್‌ ಪರ್ದಿಪ್ ತಮ್ಮ ಕೊನೇ ರೇಡ್‌ನಲ್ಲಿ 4 ಅಂಕಗಳನ್ನು ತಂದುಕೊಡುವ ಮೂಲಕ ಜಯಂಟ್ಸ್‌ ಜಯದ ರೂವಾರಿಸಿ ಎನಿಸಿದರು.

    ಜಯ ಕಸಿದುಕೊಂಡ ಗುಜರಾತ್ ಜಯಂಟ್ಸ್‌

    ಪಂದ್ಯದ ಮೊದಲನೇ ಇಪ್ಪತ್ತು ನಿಮಿಷಗಳಲ್ಲಿ ಬೆಂಗಳೂರು 14, ಗುಜರಾತ್‌ 15 ಅಂಕ ಗಳಿಸಿದ್ದವು. ಪಂದ್ಯದ ಆರಂಭದಲ್ಲಿ ಬೆಂಗಳೂರು ನಾಯಕ ಪವನ್ ಕುಮಾರ್ ಶರಾವತ್ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಆದರೆ ಎರಡನೇ ಇಪ್ಪತ್ತು ನಿಮಿಷಗಳಲ್ಲಿ ಬೆಂಗಳೂರಿನ ಹಿನ್ನಡೆ ಇನ್ನೂ ಹೆಚ್ಚಾಯಿತು.

    ಬೆಂಗಳೂರು 22, ಗುಜರಾತ್‌ 25 ಅಂಕ ಗಳಿಸಿತು. ಬೆಂಗಳೂರು ಪರ ನಾಯಕ ಪವನ್‌ ಎಂದಿನಂತೆ ಉತ್ತಮ ದಾಳಿಯನ್ನೇ ನಡೆಸಿದರು. ಆದರೆ ಅವರಿಗಿಂತ ಅಬ್ಬರಿಸಿದ್ದು ಭರತ್‌. ಇವರು ಕೇವಲ 14 ದಾಳಿಗಳಲ್ಲಿ 11 ಅಂಕ ಗಳಿಸಿದರು.

    ಇನ್ನು ಸೆಹ್ರಾವತ್‌ 18 ದಾಳಿಗಳಲ್ಲಿ 12 ಅಂಕ ಕಲೆ ಹಾಕಿದರು. ರಕ್ಷಣೆಯಲ್ಲಿ ಮಿನುಗಿದ ಅಮನ್‌ 3 ಅಂಕ ಪಡೆದರು. ಗುಜರಾತ್‌ನ ಪ್ರದೀಪ್‌ ಕುಮಾರ್‌ ಅಜಯ್‌ ಕುಮಾರ್‌ ಉತ್ತಮ ದಾಳಿ ನಡೆಸಿದರು.

    ಅಂಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದ ಗುಜರಾತ್‌ ಜಯಂಟ್ಸ್‌

    ಇನ್ನು ಇಂದು ಬೆಂಗಳೂರು ವಿರುದ್ಧ ಗೆಲುವಿನ ನಗೆ ಬೀರುವ ಮೂಲಕ ಗುಜರಾತ್ ತಂಡ ಪ್ರೊ ಕಬಡ್ಡಿ ಲೀಗ್ ನಲ್ಲಿ ತನ್ನ ಆರನೇ ಗೆಲುವು ಸಾಧಿಸಿದೆ.. ಆಡಿರುವ 16 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದರೆ ಏಳು ಪದ್ಯಗಳನ್ನು ಗುಜರಾತ್ ಸೋತಿದೆ..

    ಇನ್ನುಳಿದ ಮೂರು ಪಂದ್ಯಗಳು ಟೈ ಆಗಿವೆ. ಹೀಗಾಗಿ ಗುಜರಾತ್‌ ಜಯಂಟ್ಸ್‌ ಒಟ್ಟು 43 ಅಂಕಗಳನ್ನು ಗಳಿಕೆ ಮಾಡುವ ಮೂಲಕ ಪ್ರೊ ಕಬಡ್ಡಿ ಲೀಗ್ ನ ನಾಕ್‌ಔಟ್‌ ರೇಸ್‌ನಲ್ಲಿ ಜೀವಂತವಾಗಿ ಉಳಿದಿದೆ

    ಇದನ್ನೂ ಓದಿ: 2008ರ IPL ಹರಾಜಿನ ಕಥೆ ಬಿಚ್ಚಿಟ್ಟ ವಿರಾಟ್ ಕೊಹ್ಲಿ

    ಇಂದಿನ ಪಂದ್ಯಗಳು

    ಇನ್ನು ಬೆಂಗಳೂರು ಬುಲ್ಸ್ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಗುಜರಾತ್‌ ಜಯಂಟ್ಸ್‌ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಇರುವ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಸೆಣಸಾಟ ನಡೆಸಲಿದೆ.. ಮತ್ತೊಂದು ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿ ಇರುವ ಬೆಂಗಾಲ್‌ ವಾರಿಯರ್ಸ್‌ - ತೆಲುಗು ಟೈಟನ್ಸ್‌ ಇಂದಿನ ಪಂದ್ಯದಲ್ಲಿ ಕಾದಾಡಲಿದೆ.
    Published by:ranjumbkgowda1 ranjumbkgowda1
    First published: