ಅಮಾನತು ರದ್ದು: ನ್ಯೂಜಿಲೆಂಡ್ ಸರಣಿಗೆ ಹಾರ್ದಿಕ್, ಭಾರತ ಎ ತಂಡಕ್ಕೆ ರಾಹುಲ್ ಆಯ್ಕೆ

ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಅಲ್ಲಿ ನಡೆಯುತ್ತಿರುವ ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯ ಸೇರಿಕೊಂಡರೆ, ಇತ್ತ ರಾಹುಲ್ ಭಾರತ ಎ ತಂಡದಲ್ಲಿ ಇಂಗ್ಲೆಂಡ್ ಲಯನ್ಸ್​ ವಿರುದ್ಧ ಆಡಲಿದ್ದಾರೆ.

Vinay Bhat | news18
Updated:January 25, 2019, 10:55 AM IST
ಅಮಾನತು ರದ್ದು: ನ್ಯೂಜಿಲೆಂಡ್ ಸರಣಿಗೆ ಹಾರ್ದಿಕ್, ಭಾರತ ಎ ತಂಡಕ್ಕೆ ರಾಹುಲ್ ಆಯ್ಕೆ
ಫೈಲ್​ ಫೋಟೊ: ಹಾರ್ದಿಕ್​ ಪಾಂಡ್ಯ, ಕೆ.ಎಲ್​. ರಾಹುಲ್​
  • News18
  • Last Updated: January 25, 2019, 10:55 AM IST
  • Share this:
ನವ ದೆಹಲಿ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್ ಮಾತನಾಡುವಾಗ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಇವರ ಮೇಲೆ ಹೇರಿದ್ದ ಅಮಾನತ್ತಿನ ಶಿಕ್ಷೆಯನ್ನು ಬಿಸಿಸಿಐ ಈಗಾಗಲೇ ಹಿಂಪಡೆದಿದೆ.

ಹೀಗಾಗಿ ಇಬ್ಬರೂ ಮತ್ತೆ ಮೈದಾನಕ್ಕಿಳಿಯಲು ಸಿದ್ದರಾಗಿದ್ದಾರೆ. ಸದ್ಯ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಅಲ್ಲಿ ನಡೆಯುತ್ತಿರುವ ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯ ಸೇರಿಕೊಂಡರೆ, ಇತ್ತ ರಾಹುಲ್ ಭಾರತ ಎ ತಂಡದಲ್ಲಿ ಇಂಗ್ಲೆಂಡ್ ಲಯನ್ಸ್​ ವಿರುದ್ಧ ಆಡಲಿದ್ದಾರೆ.

ಬಿಸಿಸಿಐನ ನಿರ್ವಾಹಕ ಸಮಿತಿ ಪಾಂಡ್ಯ-ರಾಹುಲ್ ಮೇಲಿದ್ದ ಮಧ್ಯಂತರ ಅಮಾನತ್ತು ಆದೇಶವನ್ನು ತಕ್ಷಣಕ್ಕೆ ಆಚರಣೆಗೆ ಬರುವಂತೆ ಹಿಂಪಡೆದಿದೆ. ಬಿಸಿಸಿಐನ ಅಮಿಕಾಸ್​ ಕ್ಯೂರಿ ಪಿ.ಎಸ್​. ನರಸಿಂಹ ಅವರ ಸಲಹೆ ಪಡೆದು ಈ ನಿರ್ಧಾರಕ್ಕೆ ನಿರ್ವಾಹಕ ಸಮಿತಿ ಬಂದಿದೆ.

ಇದನ್ನೂ ಓದಿ: ರಣಜಿ ಸೆಮಿ ಫೈನಲ್: ಶರತ್ 83, ಗೋಪಾಲ್ 87: ಮೊದಲ ಇನ್ನಿಂಗ್ಸ್​ನಲ್ಲಿ ಕರ್ನಾಟಕ 275 ಆಲೌಟ್

ಬಿಸಿಸಿಐ ಸಾರ್ವಜನಿಕ ತನಿಖಾಧಿಕಾರಿಯ ನೇಮಕವನ್ನು ಸುಪ್ರೀಂ ಕೋರ್ಟ್​ ಫೆಬ್ರವರಿ 5ಕ್ಕೆ ಮುಂದೂಡಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ಮುಂದಿನ ಕ್ರಮಕ್ಕೆ ಮುಂದಾಗದಂತೆ ಸಮಿತಿ ನಿರ್ಧರಿಸಿದೆ. ಜನವರಿ 11ರಂದು ಪಾಂಡ್ಯ ಮತ್ತು ರಾಹುಲ್​ರನ್ನು ಮಧ್ಯಂತರ ಅಮಾನತ್ತಿನಲ್ಲಿಟ್ಟು ಬಿಸಿಸಿಐ ಆದೇಶ ಹೊರಡಿಸಿತ್ತು.

First published:January 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading