ಚತುಷ್ಕೋನ ಸರಣಿ: ಮಿಂಚಿದ ಭಾರತ ಬಿ ಬ್ಯಾಟ್ಸ್​ಮನ್​​ಗಳು; ಫೈನಲ್​​​​ನಲ್ಲಿ ಆಸೀಸ್ 'ಎ'ಗೆ ಹೀನಾಯ ಸೋಲು

news18
Updated:August 29, 2018, 4:14 PM IST
ಚತುಷ್ಕೋನ ಸರಣಿ: ಮಿಂಚಿದ ಭಾರತ ಬಿ ಬ್ಯಾಟ್ಸ್​ಮನ್​​ಗಳು; ಫೈನಲ್​​​​ನಲ್ಲಿ ಆಸೀಸ್ 'ಎ'ಗೆ ಹೀನಾಯ ಸೋಲು
news18
Updated: August 29, 2018, 4:14 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ. 29): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚತುಷ್ಕೋನ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಬಿ ತಂಡ ಆಸ್ಟ್ರೇಲಿಯಾ ಎ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಆಸೀಸ್ ನೀಡಿದ್ದ 226 ರನ್​​ಗಳ ಟಾರ್ಗೆಟ್ ಅನ್ನು ಅಗರ್ವಾಲ್, ಶುಭ್ಮನ್ ಗಿಲ್, ನಾಯಕ ಮನೀಶ್ ಪಾಂಡೆ ಅವರ ಅರ್ಧಶತಕದ ನೆರವಿನಿಂದ ಸುಲಭರೀತಿಯಲ್ಲಿ 9 ವಿಕೆಟ್​ಗಳಿಂದ ಗೆದ್ದು ಬೀಗಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಎ ತಂಡ ಉತ್ತಮ ಆರಂಭವೇನೊ ಪಡೆಯಿತು. ಆದರೆ ಮೊದಲನೇ ವಿಕೆಟ್​​ಗೆ ಅರ್ಧಶತಕದ ಜೊತೆಯಾಟ ನೀಡಿ ಉಸ್ಮನ್ ಖವಜಾ(23) ಔಟ್ ಆದರು. ಬಳಿಕ ಬಂದ ನಾಯಕ ಟ್ರಾವಿಸ್ ಹೆಡ್ ಶೂನ್ಯಕ್ಕೆ ನಿರ್ಗಮಿಸಿದರೆ, ಲಬುಸ್​​ಚೆಂಜ್ 17 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ಆರಂಭಿಕ ಆಟಗಾರ ಡಾರ್ಸಿ ಶಾರ್ಟ್​ ಕ್ರೀಸ್ ಕಚ್ಚಿ ನಿಂತಿದ್ದು ಹಾಗೂ ಅಲೆಕ್ಸ್ ಕೆರೆ ಆಟ ತಂಡಕ್ಕೆ ಕೊಂಚ ಚೇತರಿಕೆ ನೀಡಿತು. ಆದರೆ 72 ರನ್ ಗಳಿಸಿರುವಾಗ ಶಾರ್ಟ್​ ಔಟ್ ಆದರೆ, ಅಲೆಕ್ಸ್ 53 ರನ್​ಗೆ ಸುಸ್ತಾದರು. ಬಳಿಕ ಬಂದ ಬ್ಯಾಟ್ಸ್​ಮನ್​​ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೆ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಮುಖಮಾಡಿದರು. ಪರಿಣಾಮ 47.5 ಓವರ್​​ಗೆ 225 ರನ್​​ಗಳಿಸಿ ಆಲೌಟ್ ಆಯಿತು. ಭಾರತ ಬಿ ಪರ ಶ್ರೇಯಸ್ ಗೋಪಾಲ್ 3 ವಿಕೆಟ್ ಕಿತ್ತರೆ, ಸಿದ್ಧಾರ್ಥ್​​ ಕೌಲ್, ನವದೀಪ್ ಸೈನಿ ಹಾಗೂ ದೀಪಕ್ ಹೂಡ ತಲಾ 2 ವಿಕೆಟ್ ಪಡೆದರು.

ಇತ್ತ 226 ರನ್​​ಗಳ ಗುರಿ ಬೆನ್ನಟ್ಟಿದ ಭಾರತ ಎ ತಂಡಕ್ಕೆ 13 ರನ್​ ಗಳಿಸಿದ್ದಾಗ ಇಶಾನ್ ಕಿಶನ್ ನೋವಿನ ಕಾರಣ ಪೆವಿಲಿಯನ್ ಸೇರಬೇಕಾಯಿತು. ಬಳಿಕ ಮಯಾಂಕ್ ಅಗರ್ವಾಲ್ ಹಾಗೂ ಶುಭ್ಮನ್ ಗಿಲ್ ಜೋಡಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಆಸೀಸ್ ಬೌಲರ್​ಗಳನ್ನು ಕಾಡಿದ ಈ ಜೋಡಿ ಅರ್ಧಶತಕದ ಸಂಭ್ರಮ ಹಂಚಿಕೊಂಡರು. ಆದರೆ ಅಗರ್ವಾಲ್ 69 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ನಾಯಕ ಮನೀಶ್ ಪಾಂಡೆ ಸ್ಪೋಟಕ ಬ್ಯಾಟಿಂಗ್​​ಗೆ ಮುಂದಾದರು. ಗಿಲ್ ಜೊತೆಯಾದ ಪಾಂಡೆ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದರು. ಪರಿಣಾಮ 36.3 ಎಸೆತಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 230 ರನ್ ಬಾರಿಸುವ ಮೂಲಕ ಭಾರತ ಬಿ ತಂಡ ಗೆಲುವಿನ ನಗೆ ಬೀರಿತು. ಮನೀಶ್ ಪಾಂಡೆ 54 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸ್​ನೊಂದಿಗೆ ಅಜೇಯ 73 ರನ್ ಸಿಡಿಸಿದರೆ ಗಿಲ್ ಅಜೇಯ 66 ರನ್ ಬಾರಿಸಿದರು.

ಈ ಮೂಲಕ ಚತುಷ್ಕೋನ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಭಾರತ ಬಿ 9 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ.

ಪಂದ್ಯ ಶ್ರೇಷ್ಠ: ಮನೀಶ್ ಪಾಂಡೆ
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626