Pooja Gehlot: ಭಾರತದಲ್ಲಿ ಕ್ರೀಡಾಪಟುಗಳಿಗೆ ಭಾರೀ ಪ್ರೋತ್ಸಾಹ, ತನ್ನ ದೇಶದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪಾಕ್ ಪತ್ರಕರ್ತ!

ಭಾರತದ ಕುಸ್ತಿಪಟು ಪೂಜಾ ಗೆಹ್ಲೋಟ್ ಅವರು ಮಹಿಳೆಯರ 50 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ 2022 ರ ಕಾಮನ್‌ವೆಲ್ತ್ ಗೇಮ್ಸ್ ಎಂದರೆ ಸಿಡಬ್ಲ್ಯುಜಿ ಯಲ್ಲಿ ಭಾರತಕ್ಕೆ ಮತ್ತೊಂದು ಪದಕವನ್ನು ತಂದು ಕೊಟ್ಟರು. ಪೋಡಿಯಂ ಫಿನಿಶ್ ಪಡೆದ ನಂತರ, ಪೂಜಾ ಅವರು ಸ್ವಲ್ಪ ಭಾವುಕರಾದರು ಮತ್ತು ತಾವು ಇಲ್ಲಿ ಚಿನ್ನದ ಪದಕವನ್ನು ಗೆಲ್ಲಬಹುದಿತ್ತು ಎಂದು ಹತಾಶರಾದಾಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪೂಜಾ ಅವರಿಗೆ ಟ್ವೀಟ್ ಮಾಡುವ ಮೂಲಕ  ಸಮಾಧಾನಪಡಿಸಿದರು.

ಪೂಜಾ ಗೆಹ್ಲೋಟ್ ಮತ್ತು ಪ್ರಧಾನಿ ನರೇಂದ್ರ ಮೋದಿ

ಪೂಜಾ ಗೆಹ್ಲೋಟ್ ಮತ್ತು ಪ್ರಧಾನಿ ನರೇಂದ್ರ ಮೋದಿ

  • Share this:
ಭಾರತದ ಕುಸ್ತಿಪಟು (Indian wrestler)  ಪೂಜಾ ಗೆಹ್ಲೋಟ್ (Pooja Gehlot) ಅವರು ಮಹಿಳೆಯರ 50 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ 2022 ರ ಕಾಮನ್‌ವೆಲ್ತ್ ಗೇಮ್ಸ್ (Commonwealth Games) ಎಂದರೆ ಸಿಡಬ್ಲ್ಯುಜಿ ಯಲ್ಲಿ ಭಾರತಕ್ಕೆ ಮತ್ತೊಂದು ಪದಕವನ್ನು (Medal) ತಂದು ಕೊಟ್ಟರು. ಪೋಡಿಯಂ ಫಿನಿಶ್ ಪಡೆದ ನಂತರ, ಪೂಜಾ ಅವರು ಸ್ವಲ್ಪ ಭಾವುಕರಾದರು (Emotional) ಮತ್ತು ತಾವು ಇಲ್ಲಿ ಚಿನ್ನದ ಪದಕವನ್ನು ಗೆಲ್ಲಬಹುದಿತ್ತು ಎಂದು ಹತಾಶರಾದಾಗ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪೂಜಾ ಅವರಿಗೆ ಟ್ವೀಟ್ ಮಾಡುವ ಮೂಲಕ  ಸಮಾಧಾನಪಡಿಸಿದರು.

ಈ ಬಗ್ಗೆ ಕುಸ್ತಿ ಪಟು ಪೂಜಾ ಗೆಹ್ಲೋಟ್ ಏನು ಹೇಳಿದ್ದಾರೆ 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೂಜಾ ಅವರು "ನಾನು ನನ್ನ ದೇಶಬಾಂಧವರ ಬಳಿ ಕ್ಷಮೆಯಾಚಿಸುತ್ತೇನೆ. ಇಲ್ಲಿ ನಮ್ಮ ರಾಷ್ಟ್ರಗೀತೆಯನ್ನು ನುಡಿಸುವುದನ್ನು ನಾನು ಕೇಳಿಸಿಕೊಳ್ಳಬೇಕು ಎಂದು ಕೊಂಡಿದ್ದೆ. ಆದರೆ, ನನ್ನ ಕೆಲವು ತಪ್ಪುಗಳಿಂದ ಅದು ತಪ್ಪಿತು, ಆ ತಪ್ಪುಗಳಿಂದ ನಾನು ಪಾಠ ಕಲಿಯುತ್ತೇನೆ ಮತ್ತು ಅವುಗಳ ಮೇಲೆ ಕೆಲಸ ಮಾಡುತ್ತೇನೆ" ಎಂದು ಹೇಳಿದರು.

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಅಥ್ಲೀಟ್ ಪೂಜಾ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ಮೂಲಕ ಹೇಳಿದ ಆ ಮಾತುಗಳು ಮತ್ತು ನೀಡಿದ ಆ ಸಂದೇಶ ಕ್ರೀಡಾಪಟುವಿಗೆ ತುಂಬಾನೇ ಹುರಿದುಂಬಿಸುವ ಹಾಗೆ ಇತ್ತು. ಇದನ್ನು ನೋಡಿದ ನಂತರ ಪಾಕಿಸ್ತಾನದ ಪತ್ರಕರ್ತರೊಬ್ಬರು ತಮ್ಮದೇ ಸರ್ಕಾರ ಮತ್ತು ಅದರ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯ ಸೆಮಿಫೈನಲ್ ನಲ್ಲಿ ಪೂಜಾ ಗೆಹ್ಲೋಟ್ ಅವರು ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿದ್ದರು ಆದರೆ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ನಂತರ ಕಣ್ಣೀರು ಸುರಿಸಿದ ಗೆಹ್ಲೋಟ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಸ್ಪರ್ಧೆಯಲ್ಲಿ ತನ್ನ ವಿಜಯದ ನಂತರ ಭಾರತೀಯ ರಾಷ್ಟ್ರಗೀತೆಯನ್ನು ನುಡಿಸುವುದನ್ನು ನಾನು ಕೇಳಬೇಕೆಂದು ಬಯಸಿದ್ದೆ ಆದರೆ ಬರೀ ಕಂಚಿನ ಪದಕವನ್ನು ಮಾತ್ರ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.

ಪ್ರಧಾನಿಯವರ ಮರು ಟ್ವೀಟ್ ಹೀಗಿತ್ತು
ಈ ವಿಡಿಯೋದಿಂದ ಕ್ರೀಡಾಪಟುವಿನ ನಿರಾಶೆಯನ್ನು ಗಮನಿಸಿದ ಪ್ರಧಾನಿ ಮೋದಿ ಅವರು ತಕ್ಷಣವೇ ಟ್ವೀಟ್ ಮಾಡಿ ಪೂಜಾ ಅವರನ್ನು ಸಂತೈಸಿ ಮತ್ತು ಒಳ್ಳೆಯ ಮಾತುಗಳೊಂದಿಗೆ ಅವರನ್ನು ಪ್ರೋತ್ಸಾಹಿಸಿದರು.

ಇದನ್ನೂ ಓದಿ:  Rishabh Pant: ನನ್ನ ಹೆಸರು ಬಳಸಿ ಫೇಮಸ್​ ಆಗ್ತಿದ್ದಾರೆ! ಬಾಲಿವುಡ್​ ಖ್ಯಾತ ನಟಿ ಹೆಸರು ಹೇಳದೇ ಟಾಂಗ್​ ಕೊಟ್ಟ ಪಂತ್​!

"ಪೂಜಾ, ನಿಮ್ಮ ಪದಕವು ದೇಶಕ್ಕೆ ಒಂದು ಆಚರಣೆ ಮಾಡುವ ಅವಕಾಶ ನೀಡಿದೆ, ನಿಮ್ಮ ಜೀವನ ಪ್ರಯಾಣವು ನಮ್ಮನ್ನು ಪ್ರೇರೇಪಿಸುತ್ತದೆ, ನಿಮ್ಮ ಯಶಸ್ಸು ನಮ್ಮನ್ನು ಸಂತೋಷಪಡಿಸಿದೆ. ನೀವು ಮುಂದೆ ಇನ್ನೂ ದೊಡ್ಡ ದೊಡ್ಡ ಗುರಿಗಳನ್ನು ಸಾಧಿಸಿ ಎಂದು ಹಾರೈಸುವೆ" ಎಂದು ಪ್ರಧಾನಿ ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಭಾವನಾತ್ಮಕವಾಗಿ ಹತಾಶರಾದ ಕ್ರೀಡಾಪಟುವಿಗೆ ಪ್ರೋತ್ಸಾಹದಾಯಕ ಪದಗಳನ್ನು ಪೋಸ್ಟ್ ಮಾಡಿದ ಕಾರಣ ಟ್ವೀಟ್ ಶೀಘ್ರದಲ್ಲಿಯೇ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಯಿತು. ಆದಾಗ್ಯೂ, ಇನ್ನೂ ಅನೇಕರು ಮೋದಿಯವರ ಈ ಬೆಂಬಲದ ಮಾತುಗಳನ್ನು ತುಂಬಾನೇ ಶ್ಲಾಘಿಸಿದರು.

ಇದನ್ನು ನೋಡಿ ತಮ್ಮ ದೇಶದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪಾಕ್ ಪತ್ರಕರ್ತ 
ಪಾಕಿಸ್ತಾನದ ಪತ್ರಕರ್ತ ಶಿರಾಜ್ ಹಸನ್ ಅವರು ಮೋದಿ ಅವರ ಈ ಶೈಲಿಯನ್ನು ನೆರೆಯ ದೇಶದ ನಾಯಕರ ಮನೋಭಾವಕ್ಕೆ ಹೋಲಿಸಿದ್ದಾರೆ.ಇದನ್ನೂ ಓದಿ:  PV Sindhu: ಎಲ್ಲಾ ಓಕೆ, ಪಿವಿ ಸಿಂಧು ಫೋಟೋ ವಾರ್ನರ್​ ಹಾಕಿದ್ಯಾಕೆ?

"ಭಾರತವು ತಮ್ಮ ಕ್ರೀಡಾಪಟುಗಳನ್ನು ಈ ರೀತಿಯಾಗಿ ಬಿಂಬಿಸುತ್ತದೆ. ಪೂಜಾ ಗೆಹ್ಲೋಟ್ ಅವರು ಕಂಚಿನ ಪದಕವನ್ನು ಗೆದ್ದರು ಮತ್ತು ಚಿನ್ನದ ಪದಕವನ್ನು ಗೆಲ್ಲಲು ಸಾಧ್ಯವಾಗದ ಕಾರಣ ದುಃಖವನ್ನು ವ್ಯಕ್ತಪಡಿಸಿದರು, ಮತ್ತು ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಿದರು. ಪಾಕಿಸ್ತಾನದ ಪ್ರಧಾನಿ ಅಥವಾ ಅಧ್ಯಕ್ಷರಿಂದ ಅಂತಹ ಯಾವುದೇ ಸಂದೇಶವನ್ನು ಎಂದಾದರೂ ನೋಡಿದ್ದೀರಾ? ಪಾಕಿಸ್ತಾನದ ಕ್ರೀಡಾಪಟುಗಳು ಪದಕಗಳನ್ನು ಗೆಲ್ಲುತ್ತಿದ್ದಾರೆ ಎಂದು ಸಹ ಅವರಿಗೆ ತಿಳಿದಿದೆಯೇ" ಎಂದು ಹಸನ್ ಟ್ವೀಟ್ ಮಾಡಿದ್ದಾರೆ.
Published by:Ashwini Prabhu
First published: