ಏಷ್ಯಾ ಕಪ್ 2018: ಪಾಕ್ ಮಾರಕ ಬೌಲಿಂಗ್​​: ಹಾಂಗ್ ಕಾಂಗ್​​​ಗೆ ಮೊದಲ ಪಂದ್ಯದಲ್ಲೇ ಸೋಲು

news18
Updated:September 16, 2018, 10:44 PM IST
ಏಷ್ಯಾ ಕಪ್ 2018: ಪಾಕ್ ಮಾರಕ ಬೌಲಿಂಗ್​​: ಹಾಂಗ್ ಕಾಂಗ್​​​ಗೆ ಮೊದಲ ಪಂದ್ಯದಲ್ಲೇ ಸೋಲು
  • Advertorial
  • Last Updated: September 16, 2018, 10:44 PM IST
  • Share this:
ನ್ಯೂಸ್ 18 ಕನ್ನಡ

ದುಬೈ (ಸೆ. 16): 14ನೇ ಏಷ್ಯಾ ಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಬಲಿಷ್ಠ ಪಾಕಿಸ್ತಾನ ತಂಡ 8 ವಿಕೆಟ್​ಗಳ ಸುಲಭ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹಾಂಗ್ ಕಾಂಗ್ ತಂಡ ಪಾಕ್​ನ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಹಾಂಗ್ ಲಾಂಗ್ ಪರ ಅಝಾಝ್ ಖಾನ್ 27 ಹಾಗೂ ಕಿಂಚಿತ್ ಷಾ 26 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 20ರ ಗಡಿ ದಾಟಲಿಲ್ಲ. ಪರಿಣಾಮ ಹಾಂಗ್ ಕಾಂಗ್ 37.1 ಓವರ್​​​ನಲ್ಲಿ 116 ರನ್​ಗೆ ಆಲೌಟ್ ಆಯಿತು. ಪಾಕ್ ಪರ ಉಸ್ಮಾನ್ ಖಾನ್ 3 ವಿಕೆಟ್ ಕಿತ್ತು ಮಿಂಚಿದರೆ, ಹಸನ್ ಅಲಿ ಹಾಗೂ ಶದಾಬ್ ಖಾನ್ 2 ಮತ್ತು ಅಶ್ರಫ್ 1 ವಿಕೆಟ್ ಪಡೆದರು.

117 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು, 2ನೇ ವಿಕೆಟ್​ಗೆ ಇಮಾಮ್ ಉಲ್ ಹಖ್ ಹಾಗೂ ಬಾಬರ್ ಅಝಾಮ್ ಉತ್ತಮ ಜೊತೆಯಾಟ ನೀಡಿದರು. ಈ ಮೂಲಕ 23.4 ಓವರ್​​ನಲ್ಲೇ ಪಾಕಿಸ್ತಾನ 2 ವಿಕೆಟ್ ಕಳೆದುಕೊಂಡು 120 ರನ್ ಬಾರಿಸುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಪಾಕ್ ಪರ ಇಮಾಮ್ ಉಲ್ ಹಖ್ ಅಜೇಯ 50 ರನ್ ಸಿಡಿಸಿದರೆ, ಅಝಾಮ್ 33 ರನ್ ಬಾರಿಸಿದರು.
First published:September 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ