• Home
  • »
  • News
  • »
  • sports
  • »
  • ENG vs PAK T20 World Cup 2022: ವಿಶ್ವಕಪ್ ಫೈನಲ್ ನಾಳೆಯಲ್ಲ ನಾಡಿದ್ದು? ಮಳೆಯಿಂದ ರದ್ದಾದ್ರೆ ಯಾರಾಗ್ತಾರೆ ವಿನ್ನರ್?

ENG vs PAK T20 World Cup 2022: ವಿಶ್ವಕಪ್ ಫೈನಲ್ ನಾಳೆಯಲ್ಲ ನಾಡಿದ್ದು? ಮಳೆಯಿಂದ ರದ್ದಾದ್ರೆ ಯಾರಾಗ್ತಾರೆ ವಿನ್ನರ್?

PAK vs ENG

PAK vs ENG

ENG vs PAK T20 World Cup 2022: ಭಾನುವಾರ ಮೆಲ್ಬೋರ್ನ್‌ನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ಇಲ್ಲಿ ನಡೆದ ಮೂರು ವಿಶ್ವಕಪ್ ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಫೈನಲ್ ನಲ್ಲೂ ಮಳೆಯಾಗುವ ಸಾಧ್ಯತೆ ಇದೆ.

  • Share this:

ಪಾಕಿಸ್ತಾನ ಮತ್ತು ಇಂಗ್ಲೆಂಡ್ (ENG vs PAK) ತಂಡಗಳು ಮೆಲ್ಬೋರ್ನ್ (Melbourne) ಮೈದಾನ ಈ ಬಾರಿಯ ಟಿ20 ವಿಶ್ವಕಪ್‌ನ (T20 World Cup 2022) ಫೈನಲ್‌ಗೆ ಸಜ್ಜಾಗಿವೆ. ಐಸಿಸಿ (ICC) ಟಿ20 ವಿಶ್ವಕಪ್‌ನ ಮೆಗಾ ಫೈನಲ್ ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ನವೆಂಬರ್ 13ರ ಭಾನುವಾರದ ಬದಲಿಗೆ ನವೆಂಬರ್ 14ರ ಸೋಮವಾರದಂದು ಪಂದ್ಯ ನಡೆಯುವ ಸಾಧ್ಯತೆ ಹೆಚ್ಚು. ಇದಕ್ಕೆ ಕಾರಣ ಮೆಲ್ಬೋರ್ನ್‌ನಲ್ಲಿನ ಪ್ರಸ್ತುತ ಹವಾಮಾನ ಎಂದು ತಿಳಿದುಬಂದಿದೆ.


ಅಂತಿಮ ದಿನ ಮಳೆ ಸಾಧ್ಯತೆ:


ಭಾನುವಾರ ಮೆಲ್ಬೋರ್ನ್‌ನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ಇಲ್ಲಿ ನಡೆದ ಮೂರು ವಿಶ್ವಕಪ್ ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಫೈನಲ್ ನಲ್ಲೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಭಿಮಾನಿಗಳಲ್ಲಿ ಅಸಮಾಧಾನದ ಭಾವನೆ ಮೂಡಿದೆ. ಎಂಸಿಜಿಯಲ್ಲಿ 90 ಸಾವಿರ ಪ್ರೇಕ್ಷಕರು ಫೈನಲ್‌ಗೆ ಹಾಜರಾಗಲಿದ್ದಾರೆ. ಆದರೆ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಭಾನುವಾರ ಶೇ.95ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಮಳೆಯಿಂದಾಗಿ ಭಾನುವಾರ ಪಂದ್ಯವನ್ನು ಆಡಲಾಗದಿದ್ದರೆ, ಸೋಮವಾರದಂದು ಮೀಸಲು ದಿನವನ್ನು ಇರಿಸಲಾಗಿದೆ.ಸೋಮವಾರ ಮಳೆ ಬಂದರೆ ಯಾರು ಗೆಲ್ಲುತ್ತಾರೆ?:


ಏತನ್ಮಧ್ಯೆ, ಮೀಸಲು ದಿನದಂದು ಮೆಲ್ಬೋರ್ನ್‌ನಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಪಂದ್ಯದ ವಿಜೇತರನ್ನು ನಿರ್ಧರಿಸಲು ಕನಿಷ್ಠ 10-10 ಓವರ್‌ಗಳ ಅಗತ್ಯವಿದೆ. ಆದರೆ ಸೋಮವಾರದ ಮೀಸಲು ದಿನವೂ ಪಂದ್ಯ ನಡೆಯದಿದ್ದರೆ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಜಂಟಿ ವಿಜೇತರಾಗಲಿವೆ. ಆದರೆ ಕ್ರಿಕೆಟ್​ ಅಭಿಮಾನಿಗಳು ಈ ರೀತಿ ಆಗುವ ಬದಲಿಗೆ ವಿಶ್ವಕಪ್ ಪಂದ್ಯಾವಳಿ ಆಗಿರುವುದರಿಂದ ಸಂಪೂರ್ಣ ಪಂದ್ಯ ನಡೆಯಬೇಕೆಂದು ಆಶಿಸುತ್ತಿದ್ದಾರೆ. ಆದರೆ ಮಳೆಯಿಂದ ಮುಂದೆ ಏನಾಗಲಿದೆ ಎಂದು ಕಾದುನೋಡಬೇಕಿದೆ.


ಇದನ್ನೂ ಓದಿ: T20 World Cup: ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಈ ಬದಲಾವಣೆಗಳು ಆಗಲೇಬೇಕಂತೆ, ಇಲ್ಲಾ ಅಂದ್ರೆ ಕಷ್ಟ ಅಂದ್ರು ನೆಟ್ಟಿಗರು


2019 ರ ವಿಶ್ವಕಪ್ ಸೆಮಿಫೈನಲ್​ನಲ್ಲಿ ಮಳೆ:


ಇಂಗ್ಲೆಂಡ್‌ನಲ್ಲಿ ನಡೆದ 2019ರ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಎರಡು ದಿನಗಳ ಕಾಲ ನಡೆಯಿತು. ಇದು ಟೀಂ ಇಂಡಿಯಾಗೆ ಚೆನ್ನಾಗಿಯೇ ಪರಿಣಾಮಬೀರಿತು. ಆ ಪಂದ್ಯದಲ್ಲಿ ಭಾರತ ಸೋತಿತ್ತು. ಆದರೆ 2002 ರಲ್ಲಿ, ICC ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವನ್ನು ಎರಡೂ ದಿನಗಳಲ್ಲಿ ಮಳೆಯಿಂದಾಗಿ ರದ್ದುಗೊಳಿಸಲಾಯಿತು ಮತ್ತು ಜಂಟಿ ವಿಜೇತರನ್ನು ಘೋಷಿಸಲಾಯಿತು.


ಇದನ್ನೂ ಓದಿ: Team India: ಟೀಂ ಇಂಡಿಯಾ ಸೋಲುತ್ತಿದ್ದಂತೆ ಬಾಲಬಿಚ್ಚಿದ ಪಾಕ್​ ಮಾಜಿ ಆಟಗಾರರು, ಫೈನಲ್​ ಗೆದ್ದು ಮಾತಾಡಿ ಎಂದ ಫ್ಯಾನ್ಸ್


ಎರಡನೇ ಬಾರಿಗೆ ವಿಶ್ವಕಪ್ ಗೆಲ್ಲುವವರು ಯಾರು?:


ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಏಕೈಕ ತಂಡ ವೆಸ್ಟ್ ಇಂಡೀಸ್. ವೆಸ್ಟ್ ಇಂಡೀಸ್ 2012 ಮತ್ತು 2016ರಲ್ಲಿ ವಿಶ್ವಕಪ್ ಗೆದ್ದಿತ್ತು. ಆದರೆ ಈಗ ಆ ಅವಕಾಶ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಮುಂದೆ ಬಂದಿದೆ. ಈ ಎರಡೂ ತಂಡಗಳು ಈ ಹಿಂದೆ ವಿಶ್ವಕಪ್ ಗೆದ್ದಿವೆ. ಹೀಗಾಗಿ ಮೆಲ್ಬೋರ್ನ್ ನಲ್ಲಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವವರು ಯಾರು ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿದೆ.

Published by:shrikrishna bhat
First published: