• Home
  • »
  • News
  • »
  • sports
  • »
  • ENG vs PAK T20 World Cup 2022: ಇಂಗ್ಲೆಂಡ್-ಪಾಕಿಸ್ತಾನ ಫೈನಲ್ ಫೈಟ್​ಗೆ ಮಳೆ ಅಡ್ಡಿ? ಹೇಗಿದೆ ಮೆಲ್ಬೋರ್ನ್ ಹವಾಮಾನ?

ENG vs PAK T20 World Cup 2022: ಇಂಗ್ಲೆಂಡ್-ಪಾಕಿಸ್ತಾನ ಫೈನಲ್ ಫೈಟ್​ಗೆ ಮಳೆ ಅಡ್ಡಿ? ಹೇಗಿದೆ ಮೆಲ್ಬೋರ್ನ್ ಹವಾಮಾನ?

PAK vs ENG

PAK vs ENG

ENG vs PAK T20 World Cup 2022: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮಳೆಯಿಂದಾಗಿ ಈ ಪಂದ್ಯಾವಳಿಯ ಮೂರು ಪಂದ್ಯಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಅಂತಿಮ ಪಂದ್ಯದಲ್ಲೂ ಮಳೆಯ ಸಾಧ್ಯತೆ ಬಲವಾಗಿಯೇ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದು.

ಮುಂದೆ ಓದಿ ...
  • Share this:

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCJ) ಮಳೆಯಿಂದಾಗಿ ಟಿ20 ವಿಶ್ವಕಪ್‌ನ (T20 World Cup 2022) 3 ಪಂದ್ಯಗಳು ಈಗಾಗಲೇ ರದ್ದಾಗಿದ್ದು, ಅಂತಿಮ ಪಂದ್ಯದಲ್ಲೂ ಮಳೆಯಾಗುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಫೈನಲ್‌ಗೆ ಮಳೆ ಅಡ್ಡಿಯಾಗಬಹುದು. 2022 ರ ಟಿ 20 ವಿಶ್ವಕಪ್ 2022 ರ ಅಂತಿಮ ಪಂದ್ಯವು ಪಾಕಿಸ್ತಾನ ಮತ್ತು ಇಂಗ್ಲೆಂಡ್ (ENG vs PAK) ನಡುವೆ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (Melbourne Cricket Ground) ನಡೆಯಲಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಲಕ್ಷಣಗಳಿದೆ. ಆದಾಗ್ಯೂ,  ಮೆಲ್ಬೋರ್ನ್ ಹವಾಮಾನ ಇಲಾಖೆಯಿಂದ ನಿರಂತರ ಮಳೆಯ ಸೂಚನೆಗಳಿವೆ. ಮೆಲ್ಬೋರ್ನ್‌ನಲ್ಲಿ ತಾಪಮಾನದಲ್ಲಿ ಭಾರಿ ಇಳಿಕೆಯಾಗಿದ್ದು, ಪಂದ್ಯದ ದಿನ ಅಂದರೆ ಇಂದು ಮಳೆಯಾಗುವ ಎಲ್ಲಾ ಸಾಧ್ಯತೆಗಳಿವೆ.


ಮಳೆ ಮುಂದುವರಿದರೆ ಕಪ್​ಗೆ ಯಾರಿಗೆ:


ಅಂತಿಮ ಪಂದ್ಯದ ಮೊದಲು, ಮೆಲ್ಬೋರ್ನ್‌ನಿಂದ ಕ್ರಿಕೆಟ್ ಅಭಿಮಾನಿಗಳಿಗೆ ಯಾವುದೇ ಶುಭ ಸುದ್ದಿ ಇಲ್ಲ, ಏಕೆಂದರೆ ಮಳೆ ಬರುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಪ್ರಕಾರ ಭಾನುವಾರ ಮತ್ತು ಸೋಮವಾರ ಎರಡೂ ದಿನ ಭಾರೀ ಮಳೆಯಾಗುವ ಸಾಧ್ಯತೆ ವ್ಯಕ್ತವಾಗಿದೆ. ಭಾನುವಾರ ಫೈನಲ್ ಪಂದ್ಯ ನಡೆಯಬೇಕಿದ್ದರೂ ಮಳೆಯಿಂದಾಗಿ ಪಂದ್ಯವನ್ನು ಆಡಲಾಗದು, ನಂತರ ಸೋಮವಾರವನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ. ಸೋಮವಾರವೂ ಪಂದ್ಯಕ್ಕೆ ಮಳೆ ಅವಕಾಶ ನೀಡದಿದ್ದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.ಅಲ್ಲದೇ  ಪಂದ್ಯದ ದಿನ 95 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಗುಡುಗು ಸಹಿತ 25 ಮಿಮೀ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ವರದಿ ಮಾಡಿದೆ. ಅಲ್ಲದೇ ಮೀಸಲು ದಿನವಾದ ನಾಳೆ ಸೋಮವಾರವೂ ಸಹ 5ರಿಂದ 10 ಮಿಲಿಮೀಟರ್‌ ಮಳೆಯಾಗುವ ಸಾಧ್ಯತೆ ಇದೆ.


ಮಳೆ ಬಂದಲ್ಲಿ ಏನು ಮಾಡಲಾಗುವುದು?:


ಏತನ್ಮಧ್ಯೆ, ಮೀಸಲು ದಿನದಂದು ಮೆಲ್ಬೋರ್ನ್‌ನಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಪಂದ್ಯದ ವಿಜೇತರನ್ನು ನಿರ್ಧರಿಸಲು ಕನಿಷ್ಠ 10-10 ಓವರ್‌ಗಳ ಅಗತ್ಯವಿದೆ. ಆದರೆ ಸೋಮವಾರದ ಮೀಸಲು ದಿನವೂ ಪಂದ್ಯ ನಡೆಯದಿದ್ದರೆ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಜಂಟಿ ವಿಜೇತರಾಗಲಿವೆ. ಆದರೆ ಕ್ರಿಕೆಟ್​ ಅಭಿಮಾನಿಗಳು ಈ ರೀತಿ ಆಗುವ ಬದಲಿಗೆ ವಿಶ್ವಕಪ್ ಪಂದ್ಯಾವಳಿ ಆಗಿರುವುದರಿಂದ ಸಂಪೂರ್ಣ ಪಂದ್ಯ ನಡೆಯಬೇಕೆಂದು ಆಶಿಸುತ್ತಿದ್ದಾರೆ. ಆದರೆ ಮಳೆಯಿಂದ ಮುಂದೆ ಏನಾಗಲಿದೆ ಎಂದು ಕಾದುನೋಡಬೇಕಿದೆ.


ಇದನ್ನೂ ಓದಿ: Team India: ಟೀಂ ಇಂಡಿಯಾ ಮುಂದಿನ ಸರಣಿ ಯಾರ ವಿರುದ್ಧ? ಯಾವಾಗ ಆರಂಭ?; ಇಲ್ಲಿದೆ ಸಂಪೂರ್ಣ ಮಾಹಿತಿ


MCG ಯ ಪಿಚ್ ಏನು ಹೇಳುತ್ತದೆ:


ಮೆಲ್ಬೋರ್ನ್ ಕ್ರಿಕೆಟ್ ಮೈದಾನವು ವಿಶ್ವದ ಅತ್ಯುತ್ತಮ ಮತ್ತು ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿದೆ. ಇಲ್ಲಿನ ಪಿಚ್ ವೇಗದ ಬೌಲರ್‌ಗಳಿಗೆ ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ ಮತ್ತು ಅವರು ಉತ್ತಮ ಬೌನ್ಸ್ ಪಡೆಯುತ್ತಾರೆ. ಸದ್ಯ ಅಲ್ಲಿ ಮಳೆ ವಾತಾವರಣ ನಿರ್ಮಾಣವಾಗಿರುವುದರಿಂದ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆ ಇದೆ. ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಯಾವುದೇ ತಂಡ 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ.


2016 ರಲ್ಲಿ, ಭಾರತವು ಆಸ್ಟ್ರೇಲಿಯಾ ವಿರುದ್ಧ 184 ರನ್ ಗಳಿಸಿತು, ಇದು ಈ ಮೈದಾನದಲ್ಲಿ ಯಾವುದೇ ತಂಡ ಮಾಡಿದ ಗರಿಷ್ಠ ಸ್ಕೋರ್ ಆಗಿದೆ. MCG ನಲ್ಲಿ ಸ್ಕೋರ್ ಬೆನ್ನಟ್ಟಿದ ತಂಡವು 20 ಪಂದ್ಯಗಳಲ್ಲಿ 11 ಪಂದ್ಯಗಳನ್ನು ಗೆದ್ದಿದೆ, ಆದ್ದರಿಂದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಬಹುದು.


ENG vs PAK ಸಂಭಾವ್ಯ ತಂಡ:


ಇಂಗ್ಲೆಂಡ್ ಸಂಭಾವ್ಯ ತಂಡ: ಜೋಸ್ ಬಟ್ಲರ್ (ನಾಯಕ), ಅಲೆಕ್ಸ್ ಹೇಲ್ಸ್, ಸ್ಟೋಕ್ಸ್, ಅಲಿ, ಲಿವಿಂಗ್‌ಸ್ಟೋನ್, ಬ್ರೂಕ್ಸ್, ಸಾಲ್ಟ್, ಕರಣ್, ವೋಕ್ಸ್, ವುಡ್, ಆದಿಲ್ ರಶೀದ್


ಪಾಕಿಸ್ತಾನ ಸಂಭಾವ್ಯ ತಂಡ: ಬಾಬರ್ ಅಜಮ್ (ನಾಯಕ), ರಿಜ್ವಾನ್, ಹ್ಯಾರಿಸ್, ಇಫ್ತಿಕರ್ ಅಹ್ಮದ್, ಶಾನ್ ಮಸೂದ್, ಶಾದಾಬ್ ಖಾನ್, ನವಾಜ್, ಇಮಾದ್ ವಾಸಿಂ, ಶಾಹೀನ್ ಅಫ್ರಿದಿ, ನಸೀಮ್ ಶಾ, ರೌಫ್.

Published by:shrikrishna bhat
First published: