• Home
  • »
  • News
  • »
  • sports
  • »
  • ENG vs PAK T20 World Cup 2022: ಇಂದು ಟಿ20 ವಿಶ್ವಕಪ್​ ಫೈನಲ್​, ಹೇಗಿದೆ ಇಂಗ್ಲೆಂಡ್​-ಪಾಕ್​ ಹೈವೋಲ್ಟೇಜ್ ಪಂದ್ಯದ ಪ್ಲೇಯಿಂಗ್ 11

ENG vs PAK T20 World Cup 2022: ಇಂದು ಟಿ20 ವಿಶ್ವಕಪ್​ ಫೈನಲ್​, ಹೇಗಿದೆ ಇಂಗ್ಲೆಂಡ್​-ಪಾಕ್​ ಹೈವೋಲ್ಟೇಜ್ ಪಂದ್ಯದ ಪ್ಲೇಯಿಂಗ್ 11

PAK vs ENG

PAK vs ENG

ENG vs PAK T20 World Cup 2022: ಇಂದು ಟಿ20 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್​ ತಂಡಗಳು ಸೆಣಸಾಡಲಿವೆ. ಈ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಮಧ್ಯಾಹ್ನ 1.30 ರಿಂದ ನೇರ ಪ್ರಸಾರವಾಗಲಿದ್ದು, 1 ಗಂಟೆಗೆ ಟಾಸ್ ಆಗಲಿದೆ.

  • Share this:

ಇಂದು ಟಿ20 ವಿಶ್ವಕಪ್‌ನ (T20 World Cup 2022) ಫೈನಲ್ ಪಂದ್ಯ ನಡೆಯಲಿದೆ. ಈ ನಿರ್ಣಾಯಕ ಪಂದ್ಯಕ್ಕಾಗಿ ಬಾಬರ್ ಅಜಮ್ (Babar Azam) ನಾಯಕತ್ವದ ಪಾಕಿಸ್ತಾನ ಮತ್ತು ಜೋಸ್ ಬಟ್ಲರ್ (Jos Buttler) ನೇತೃತ್ವದ ಇಂಗ್ಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಎರಡನೇ ಬಾರಿ ಟಿ20 ವಿಶ್ವಕಪ್ ಗೆದ್ದ ತಂಡ ಎನಿಸಿಕೊಳ್ಳಲಿದೆ. ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಏಕೈಕ ತಂಡ ವೆಸ್ಟ್ ಇಂಡೀಸ್. ಇದೀಗ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳ ಪೈಕಿ ಒಂದು ತಂಡ ಈ ಸಾಲಿಗೆ ಸೇರಲಿದೆ. ಆದರೆ ಇಂದಿನ ಪಂದ್ಯಕ್ಕೆ ಮಳೆಯ ಕಾಟ ಇದ್ದು, ಮಳೆಯಿಂದ ಪಂದ್ಯ ರದ್ದಾದಲ್ಲಿ ಮೀಸಲು ದಿನದಂದು ಪಂದ್ಯವನ್ನು ಅಂದರೆ ನಾಳೆ ನಡೆಸಲಾಗುತ್ತದೆ.


ಪಂದ್ಯದ ವಿವರ:


ಇಂದು ಟಿ20 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್​ ತಂಡಗಳು ಸೆಣಸಾಡಲಿವೆ. ಈ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಮಧ್ಯಾಹ್ನ 1.30 ರಿಂದ ನೇರ ಪ್ರಸಾರವಾಗಲಿದ್ದು, 1 ಗಂಟೆಗೆ ಟಾಸ್ ಆಗಲಿದೆ. ಪಂದ್ಯದ ನೇರ ಪ್ರಸಾರವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವೀಕ್ಷಿಸಬಹುದು. ಇದಲ್ಲದೇ ಐಸಿಸಿ ಇಂದಿನ ಪಂದ್ಯಕ್ಕೆ ಹೆಚ್ಚುವರಿಯಾಗಿ 90 ನಿಮಿಷವನ್ನು ನೀಡಿದೆ. ಹೌದು, ಮಳೆಯ ಕಾರಣ 90 ನಿಮಿಷವನ್ನು ಹೆಚ್ಚಿಸಿದ್ದು, ಅದರಂತೆ ಸಮಯದ ಪಟ್ಟಿ ಈ ಕೆಳಕಂಡಂತಿದೆ.ಪಂದ್ಯ ಆರಂಭ: ರಾತ್ರಿ 7.00 (ಇದು ಆಸ್ಟ್ರೇಲಿಯಾ ಕಾಲಮಾನ)
1ನೇ ಇನಿಂಗ್ಸ್: 7.00-8.28
ಇನಿಂಗ್ಸ್ ವಿರಾಮ: 8.28-8.48
2ನೇ ಇನಿಂಗ್ಸ್: 8:48-10:30 ಕ್ಕೆ
ಹೆಚ್ಚುವರಿ ಸಮಯ ಲಭ್ಯವಿದೆ: 10:30pm-12:00am


ಪಿಚ್ ರಿಪೋರ್ಟ್:


ಮೆಲ್ಬೋರ್ನ್‌ ಪಿಚ್‌ ಬೌನ್ಸ್ ಹಾಗೂ ಸ್ವಿಂಗ್‌ ಇದ್ದು, ವೇಗಿಗಳಿಗೆ ಅನುಕೂಲವಾಗಲಿದೆ. ಈ ಮೈದಾನದಲ್ಲಿ ಒಟ್ಟು 21 ಟಿ20 ಪಂದ್ಯಗಳು ನಡೆದಿದ್ದು 11 ಬಾರಿ ಚೇಸಿಂಗ್​ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಇಂದು ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ ಮಳೆ ಮುನ್ಸೂಚನೆ ಇರುವುದರಿಂದ ಮೊದಲು ಮಳೆ ಬಂದಲ್ಲಿ ಆಟಗಾರ ಆಗ ಬ್ಯಾಟಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ.


ಪಾಕಿಸ್ತಾನ vs ಇಂಗ್ಲೆಂಡ್


ಪಂದ್ಯಕ್ಕೆ ಮಳೆ ಅಡ್ಡಿ:


ಭಾನುವಾರ ಮೆಲ್ಬೋರ್ನ್‌ನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ಇಲ್ಲಿ ನಡೆದ ಮೂರು ವಿಶ್ವಕಪ್ ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಫೈನಲ್ ನಲ್ಲೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಭಿಮಾನಿಗಳಲ್ಲಿ ಅಸಮಾಧಾನದ ಭಾವನೆ ಮೂಡಿದೆ. ಎಂಸಿಜಿಯಲ್ಲಿ 90 ಸಾವಿರ ಪ್ರೇಕ್ಷಕರು ಫೈನಲ್‌ಗೆ ಹಾಜರಾಗಲಿದ್ದಾರೆ. ಆದರೆ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಭಾನುವಾರ ಶೇ.95ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಮಳೆಯಿಂದಾಗಿ ಭಾನುವಾರ ಪಂದ್ಯವನ್ನು ಆಡಲಾಗದಿದ್ದರೆ, ಸೋಮವಾರದಂದು ಮೀಸಲು ದಿನವನ್ನು ಇರಿಸಲಾಗಿದೆ.


ಇದನ್ನೂ ಓದಿ: ENG vs PAK T20 World Cup 2022: ಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಸೋಲು! ಇಂಗ್ಲೆಂಡಿಗೆ ಇದು ಗುಡ್ ನ್ಯೂಸ್ ಅಂತೆ


ಪಾಕಿಸ್ತಾನ-ಇಂಗ್ಲೆಂಡ್​ ಬಲಾಬಲ:


ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಇದುವರೆಗೆ 28 ​​ಟಿ20 ಪಂದ್ಯಗಳನ್ನು ಆಡಿವೆ. ಇಂಗ್ಲೆಂಡ್ 18 ಬಾರಿ ಗೆದ್ದಿದ್ದರೆ ಪಾಕಿಸ್ತಾನ 9 ಬಾರಿ ಗೆದ್ದಿದೆ. ಉಭಯ ತಂಡಗಳ ನಡುವಿನ ಒಂದು ಪಂದ್ಯ ಡ್ರಾ ಆಗಿದೆ. ಈ ಎರಡು ತಂಡಗಳು ವಿಶ್ವಕಪ್‌ನಲ್ಲಿ ಎರಡು ಬಾರಿ ಮುಖಾಮುಖಿಯಾಗಿವೆ. ಎರಡೂ ಬಾರಿ ಇಂಗ್ಲೆಂಡ್ ಗೆದ್ದಿತ್ತು.


ENG vs PAK ಸಂಭಾವ್ಯ ತಂಡ:


ಇಂಗ್ಲೆಂಡ್ ಸಂಭಾವ್ಯ ತಂಡ: ಜೋಸ್ ಬಟ್ಲರ್ (ನಾಯಕ), ಅಲೆಕ್ಸ್ ಹೇಲ್ಸ್, ಸ್ಟೋಕ್ಸ್, ಅಲಿ, ಲಿವಿಂಗ್‌ಸ್ಟೋನ್, ಬ್ರೂಕ್ಸ್, ಸಾಲ್ಟ್, ಕರಣ್, ವೋಕ್ಸ್, ವುಡ್, ಆದಿಲ್ ರಶೀದ್


ಪಾಕಿಸ್ತಾನ ಸಂಭಾವ್ಯ ತಂಡ: ಬಾಬರ್ ಅಜಮ್ (ನಾಯಕ), ರಿಜ್ವಾನ್, ಹ್ಯಾರಿಸ್, ಇಫ್ತಿಕರ್ ಅಹ್ಮದ್, ಶಾನ್ ಮಸೂದ್, ಶಾದಾಬ್ ಖಾನ್, ನವಾಜ್, ಇಮಾದ್ ವಾಸಿಂ, ಶಾಹೀನ್ ಅಫ್ರಿದಿ, ನಸೀಮ್ ಶಾ, ರೌಫ್.

Published by:shrikrishna bhat
First published: