• Home
  • »
  • News
  • »
  • sports
  • »
  • PAK vs ENG: ಟಾಸ್​ ಗೆದ್ದ ಇಂಗ್ಲೆಂಡ್, ಇಲ್ಲಿದೆ ಉಭಯ ತಂಡಗಳ ಅಂತಿಮ ಪ್ಲೇಯಿಂಗ್​ 11

PAK vs ENG: ಟಾಸ್​ ಗೆದ್ದ ಇಂಗ್ಲೆಂಡ್, ಇಲ್ಲಿದೆ ಉಭಯ ತಂಡಗಳ ಅಂತಿಮ ಪ್ಲೇಯಿಂಗ್​ 11

PAK vs ENG

PAK vs ENG

PAK vs ENG: ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ (T20 World Cup) 8ನೇ ಋತುವಿನಲ್ಲಿ ಇಂಗ್ಲೆಂಡ್ ​(PAK vs ENG)  ತಂಡದ ಜೊತೆ ಫೈನಲ್‌ನಲ್ಲಿ ಸೆಣಸಲಿದೆ . ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.

  • Share this:

ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ (T20 World Cup) 8ನೇ ಋತುವಿನಲ್ಲಿ ಇಂಗ್ಲೆಂಡ್ ​(PAK vs ENG)  ತಂಡದ ಜೊತೆ ಫೈನಲ್‌ನಲ್ಲಿ ಸೆಣಸಲಿದೆ . ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿದರೆ, ಇಂಗ್ಲೆಂಡ್ 10 ವಿಕೆಟ್‌ಗಳಿಂದ ಭಾರತವನ್ನು (Team India) ಸೋಲಿಸಿ ಫೈನಲ್​ ಪ್ರವೇಶಿಸಿದೆ. ಉಭಯ ತಂಡಗಳಿಗೆ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಇನ್ನು, ಪಂದ್ಯಕ್ಕೆ ಮಳೆ ಅಡ್ಡಿಪಡಿಸಬಹುದು. ಆದರೆ, ಪಂದ್ಯಕ್ಕೆ ಮೀಸಲು ದಿನವನ್ನೂ ಇಡಲಾಗಿದೆ.


ಪಂದ್ಯದ ವಿವರ:


ಇಂದು ಟಿ20 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್​ ತಂಡಗಳು ಸೆಣಸಾಡಲಿವೆ. ಪಂದ್ಯದ ನೇರ ಪ್ರಸಾರವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವೀಕ್ಷಿಸಬಹುದು. ಇದಲ್ಲದೇ ಐಸಿಸಿ ಇಂದಿನ ಪಂದ್ಯಕ್ಕೆ ಹೆಚ್ಚುವರಿಯಾಗಿ 90 ನಿಮಿಷವನ್ನು ನೀಡಿದೆ. ಹೌದು, ಮಳೆಯ ಕಾರಣ 90 ನಿಮಿಷವನ್ನು ಹೆಚ್ಚಿಸಿದೆ.



ಫೈನಲ್ ಪಂದ್ಯದ ಒಂದು ದಿನ ಮುಂಚಿತವಾಗಿ, ಐಸಿಸಿಯ ತಾಂತ್ರಿಕ ಸಮಿತಿಯು ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಫೈನಲ್‌ಗಾಗಿ, ಪಂದ್ಯದ ನಿಗದಿತ ಸಮಯಕ್ಕೆ ಇನ್ನೂ 2 ಗಂಟೆಗಳನ್ನು ಸೇರಿಸಲು ನಿರ್ಧರಿಸಲಾಗಿದೆ. ಮಳೆಯಿಂದಾಗಿ ಪಂದ್ಯವನ್ನು ನಡೆಸಲಾಗದಿದ್ದರೆ ಅಥವಾ ನಿಲ್ಲಿಸಬೇಕಾದರೆ, ಅದನ್ನು ಮೀಸಲು ದಿನದಂದು ಅಂದರೆ ಮರುದಿನ ನಿಗದಿತ ಸಮಯಕ್ಕಿಂತ ಮೊದಲು ಪ್ರಾರಂಭಿಸಬಹುದು. ಪಂದ್ಯವನ್ನು ಮಧ್ಯದಲ್ಲಿ ನಿಲ್ಲಿಸಿದರೆ, ಅದನ್ನು ನಿಲ್ಲಿಸಿದ ಪಾಯಿಂಟ್​ನಿಂದ ಅದನ್ನು ಪ್ರಾರಂಭಿಸಲಾಗುತ್ತದೆ.


ಪಂದ್ಯಕ್ಕೆ ಹೆಚ್ಚುವರಿ ಸಮಯ ನಿಗದಿ:


ಪಂದ್ಯ ಆರಂಭ: ರಾತ್ರಿ 7.00 (ಇದು ಆಸ್ಟ್ರೇಲಿಯಾ ಕಾಲಮಾನ)
1ನೇ ಇನಿಂಗ್ಸ್: 7.00-8.28
ಇನಿಂಗ್ಸ್ ವಿರಾಮ: 8.28-8.48
2ನೇ ಇನಿಂಗ್ಸ್: 8:48-10:30 ಕ್ಕೆ
ಹೆಚ್ಚುವರಿ ಸಮಯ ಲಭ್ಯವಿದೆ: 10:30pm-12:00am


ಪಾಕಿಸ್ತಾನ vs ಇಂಗ್ಲೆಂಡ್ ಹೆಡ್ ಟು ಹೆಡ್:


ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಒಟ್ಟು 28 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ, ಇದರಲ್ಲಿ ಇಂಗ್ಲಿಷ್ ತಂಡ 18 ಗೆದ್ದಿದ್ದರೆ, ಪಾಕಿಸ್ತಾನ 9 ಗೆದ್ದಿದೆ. ಎರಡೂ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಬಾರಿ ಇಂಗ್ಲೆಂಡ್ ಗೆದ್ದಿದೆ. ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಇತ್ತೀಚೆಗೆ 7 ಪಂದ್ಯಗಳ ಟಿ20 ಸರಣಿಯನ್ನು ಆಡಿದ್ದು, ಇಂಗ್ಲೆಂಡ್ 4-3 ರಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಒಟ್ಟಾರೆಯಾಗಿ ಪಾಕ್​ಗಿಂತ ಇಂಗ್ಲೆಂಡ್​ ಬಲಿಷ್ಠವಾಗಿ ಕಾಣುತ್ತಿದೆ.


ಇದನ್ನೂ ಓದಿ: Glenn Maxwell: ಬರ್ತಡೇ ಪಾರ್ಟಿಯಲ್ಲಿ ಬಿದ್ದು ಕಾಲು ಮುರಿದುಕೊಂಡ RCB ಸ್ಟಾರ್​ ಆಲ್​ರೌಂಡರ್


ಪಾಕಿಸ್ತಾನ-ಇಂಗ್ಲೆಂಡ್​ ಪ್ಲೇಯಿಂಗ್ 11:


 ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್.


ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ ಮತ್ತು ಹ್ಯಾರಿಸ್ ರೌಫ್.

Published by:shrikrishna bhat
First published: