• Home
  • »
  • News
  • »
  • sports
  • »
  • ENG vs PAK T20 World Cup 2022: ನಾಳೆ ಪಾಕ್​-ಇಂಗ್ಲೆಂಡ್​ ಫೈನಲ್ ಫೈಟ್​, ಹೇಗಿದೆ ಉಭಯ ತಂಡಗಳ ಬಲಾಬಲ?

ENG vs PAK T20 World Cup 2022: ನಾಳೆ ಪಾಕ್​-ಇಂಗ್ಲೆಂಡ್​ ಫೈನಲ್ ಫೈಟ್​, ಹೇಗಿದೆ ಉಭಯ ತಂಡಗಳ ಬಲಾಬಲ?

PAK vs ENG

PAK vs ENG

ENG vs PAK T20 World Cup 2022: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ (T20 World Cup 2022) ಅಂತಿಮ ಪಂದ್ಯ ನಾಳೆ ನಡೆಯಲಿದೆ. ಈ ನಿರ್ಣಾಯಕ ಪಂದ್ಯಕ್ಕಾಗಿ ಬಾಬರ್ ಅಜಮ್ (Babar Azam) ನೇತೃತ್ವದ ಪಾಕಿಸ್ತಾನ ಮತ್ತು ಜೋಸ್ ಬಟ್ಲರ್ (Jos Buttler) ನೇತೃತ್ವದ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. 

ಮುಂದೆ ಓದಿ ...
  • Share this:

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ (T20 World Cup 2022) ಅಂತಿಮ ಪಂದ್ಯ ನಾಳೆ ನಡೆಯಲಿದೆ. ಈ ನಿರ್ಣಾಯಕ ಪಂದ್ಯಕ್ಕಾಗಿ ಬಾಬರ್ ಅಜಮ್ (Babar Azam) ನೇತೃತ್ವದ ಪಾಕಿಸ್ತಾನ ಮತ್ತು ಜೋಸ್ ಬಟ್ಲರ್ (Jos Buttler) ನೇತೃತ್ವದ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಎರಡನೇ ಬಾರಿ ಟಿ20 ವಿಶ್ವಕಪ್ ಗೆದ್ದ ತಂಡ ಎನಿಸಿಕೊಳ್ಳಲಿದೆ. ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಏಕೈಕ ತಂಡ ವೆಸ್ಟ್ ಇಂಡೀಸ್. ಇದೀಗ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳ ಪೈಕಿ ಒಂದು ತಂಡ ಈ ಸಾಲಿಗೆ ಸೇರಲಿದೆ.


ಪಂದ್ಯದ ವಿವರ:


ನಾಳೆ ಟಿ20 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್​ ತಂಡಗಳು ಸೆಣಸಾಡಲಿವೆ. ಈ ಈ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಮಧ್ಯಾಹ್ನ 1.30 ರಿಂದ ನೇರ ಪ್ರಸಾರವಾಗಲಿದ್ದು, 1 ಗಂಟೆಗೆ ಟಾಸ್ ಆಗಲಿದೆ.ಪಂದ್ಯದ ನೇರ ಪ್ರಸಾರವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವೀಕ್ಷಿಸಬಹುದು.



ಪಿಚ್ ವರದಿ:





ಈ ಸ್ಥಳದಲ್ಲಿನ ಪಿಚ್ ವೇಗಿಗಳಿಗೆ ಸಂತೋಷವನ್ನು ನೀಡುತ್ತದೆ, ಅತ್ಯುತ್ತಮವಾದ ವೇಗ ಮತ್ತು ಬೌನ್ಸ್ ಮತ್ತು ಮೋಡ ಕವಿದ ವಾತಾವರಣವು ಹೊಸ ಚೆಂಡಿನೊಂದಿಗೆ ಸ್ವಿಂಗ್ ಅನ್ನು ನೀಡುತ್ತದೆ. ಆದಾಗ್ಯೂ, ಬ್ಯಾಟರ್‌ಗಳು ಆರಂಭಿಕ ಹಂತದಲ್ಲಿ ವಿಕೆಟ್ ಉಳಿಸಿಕೊಂಡಲ್ಲಿ ತಮ್ಮ ತಂಡಗಳಿಗೆ ದೊಡ್ಡ ಮೊತ್ತವನ್ನು ದಾಖಲಿಸಬಹುದು.


ಉಭಯ ತಂಡಗಳ ಹೆಡ್​ ಟು ಹೆಡ್​:


ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಇದುವರೆಗೆ 28 ​​ಟಿ20 ಪಂದ್ಯಗಳನ್ನು ಆಡಿವೆ. ಇಂಗ್ಲೆಂಡ್ 18 ಬಾರಿ ಗೆದ್ದಿದ್ದರೆ ಪಾಕಿಸ್ತಾನ 9 ಬಾರಿ ಗೆದ್ದಿದೆ. ಉಭಯ ತಂಡಗಳ ನಡುವಿನ ಒಂದು ಪಂದ್ಯ ಡ್ರಾ ಆಗಿದೆ. ಈ ಎರಡು ತಂಡಗಳು ವಿಶ್ವಕಪ್‌ನಲ್ಲಿ ಎರಡು ಬಾರಿ ಮುಖಾಮುಖಿಯಾಗಿವೆ. ಎರಡೂ ಬಾರಿ ಇಂಗ್ಲೆಂಡ್ ಗೆದ್ದಿತ್ತು. ಕಳೆದ ಮೂರು ವರ್ಷಗಳ ದಾಖಲೆಯನ್ನು ಗಮನಿಸಿದರೆ, ಇಂಗ್ಲೆಂಡ್ 14 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 5 ಪಂದ್ಯಗಳನ್ನು ಗೆದ್ದಿದೆ. ಒಟ್ಟಾರೆ ಅಂಕಿಅಂಶಗಳನ್ನು ನೋಡಿದರೆ ಇಂಗ್ಲೆಂಡ್‌ನ ಪಾಕಿಸ್ತಾನಕ್ಕಿಂತ ಹಲವು ಮುಂದಿದೆ.


ಪಂದ್ಯಕ್ಕೆ ಮಳೆ ಅಡ್ಡಿ:


ಭಾನುವಾರ ಮೆಲ್ಬೋರ್ನ್‌ನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ಇಲ್ಲಿ ನಡೆದ ಮೂರು ವಿಶ್ವಕಪ್ ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಫೈನಲ್ ನಲ್ಲೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಭಿಮಾನಿಗಳಲ್ಲಿ ಅಸಮಾಧಾನದ ಭಾವನೆ ಮೂಡಿದೆ. ಎಂಸಿಜಿಯಲ್ಲಿ 90 ಸಾವಿರ ಪ್ರೇಕ್ಷಕರು ಫೈನಲ್‌ಗೆ ಹಾಜರಾಗಲಿದ್ದಾರೆ. ಆದರೆ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಭಾನುವಾರ ಶೇ.95ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಮಳೆಯಿಂದಾಗಿ ಭಾನುವಾರ ಪಂದ್ಯವನ್ನು ಆಡಲಾಗದಿದ್ದರೆ, ಸೋಮವಾರದಂದು ಮೀಸಲು ದಿನವನ್ನು ಇರಿಸಲಾಗಿದೆ.


ಇದನ್ನೂ ಓದಿ: ENG vs PAK T20 World Cup 2022: ವಿಶ್ವಕಪ್ ಫೈನಲ್ ನಾಳೆಯಲ್ಲ ನಾಡಿದ್ದು? ಮಳೆಯಿಂದ ರದ್ದಾದ್ರೆ ಯಾರಾಗ್ತಾರೆ ವಿನ್ನರ್?


ENG vs PAKಸಂಭಾವ್ಯ ತಂಡ:


ಇಂಗ್ಲೆಂಡ್ ಸಂಭಾವ್ಯ ತಂಡ: ಜೋಸ್ ಬಟ್ಲರ್ (ನಾಯಕ), ಅಲೆಕ್ಸ್ ಹೇಲ್ಸ್, ಸ್ಟೋಕ್ಸ್, ಅಲಿ, ಲಿವಿಂಗ್‌ಸ್ಟೋನ್, ಬ್ರೂಕ್ಸ್, ಸಾಲ್ಟ್, ಕರಣ್, ವೋಕ್ಸ್, ವುಡ್, ಆದಿಲ್ ರಶೀದ್


ಪಾಕಿಸ್ತಾನ ಸಂಭಾವ್ಯ ತಂಡ: ಬಾಬರ್ ಅಜಮ್ (ನಾಯಕ), ರಿಜ್ವಾನ್, ಹ್ಯಾರಿಸ್, ಇಫ್ತಿಕರ್ ಅಹ್ಮದ್, ಶಾನ್ ಮಸೂದ್, ಶಾದಾಬ್ ಖಾನ್, ನವಾಜ್, ಇಮಾದ್ ವಾಸಿಂ, ಶಾಹೀನ್ ಅಫ್ರಿದಿ, ನಸೀಮ್ ಶಾ, ರೌಫ್.



Published by:shrikrishna bhat
First published: