• Home
  • »
  • News
  • »
  • sports
  • »
  • ENG vs PAK T20 World Cup 2022: ಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಸೋಲು! ಇಂಗ್ಲೆಂಡಿಗೆ ಇದು ಗುಡ್ ನ್ಯೂಸ್ ಅಂತೆ

ENG vs PAK T20 World Cup 2022: ಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಸೋಲು! ಇಂಗ್ಲೆಂಡಿಗೆ ಇದು ಗುಡ್ ನ್ಯೂಸ್ ಅಂತೆ

PAK vs ENG

PAK vs ENG

ENG vs PAK: ಶ್ರೀಲಂಕಾದ ಅನುಭವಿ ಅಂಪೈರ್ ಕುಮಾರ್ ಧರ್ಮಸೇನಾ ಮತ್ತು ದಕ್ಷಿಣ ಆಫ್ರಿಕಾದ ಮಾರಿಸ್ ಎರಾಸ್ಮಸ್ ಅವರು ಎಂಸಿಜಿಯಲ್ಲಿ ಅಂತಿಮ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

  • Share this:

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ (T20 World Cup 2022) ಅಂತಿಮ ಪಂದ್ಯ ನಾಳೆ ನಡೆಯಲಿದೆ. ಈ ನಿರ್ಣಾಯಕ ಪಂದ್ಯಕ್ಕಾಗಿ ಬಾಬರ್ ಅಜಮ್ (Babar Azam) ನೇತೃತ್ವದ ಪಾಕಿಸ್ತಾನ ಮತ್ತು ಜೋಸ್ ಬಟ್ಲರ್ (Jos Buttler) ನೇತೃತ್ವದ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಟಿ20 ವಿಶ್ವಕಪ್ ಗೆದ್ದು ದಶಕ ಕಳೆದಿದೆ. 2009ರಲ್ಲಿ ಪಾಕಿಸ್ತಾನ ಪ್ರಶಸ್ತಿ ಗೆದ್ದಿತ್ತು. ಮರುವರ್ಷವೇ ಇಂಗ್ಲೆಂಡ್ (ENG vs PAK )ವಿಶ್ವ ಚಾಂಪಿಯನ್ ಆಯಿತು. ಹೀಗಾಗಿ ಉಭಯ ತಂಡಗಳು ಸುದೀರ್ಘ ಕಾಯುವಿಕೆಯನ್ನು ಅಂತ್ಯಗೊಳಿಸಲು ಪ್ರಯತ್ನಿಸಲಿವೆ. ಆದರೆ ಈ ನಡುವೆ ಇಂಗ್ಲೆಂಡ್ ಗೆಲುವಿನ ಸಾಧ್ಯತೆ ಹೆಚ್ಚಿದೆ. ಇದು 2019 ರ ODI ವಿಶ್ವಕಪ್‌ನೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ.


ಪಾಕಿಸ್ತಾನ ಸೋತು ಇಂಗ್ಲೆಂಡ್ ಗೆಲ್ಲುತ್ತದೆಯೇ?:


ಪಾಕಿಸ್ತಾನ ಮತ್ತು ಇಂಗ್ಲೆಂಡ್ ಎರಡೂ ಸಮಬಲದ ತಂಡಗಳಾಗಿವೆ. ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಪಾಕಿಸ್ತಾನ ಫೈನಲ್‌ಗೆ ಪ್ರವೇಶ ಪಡೆದಿದೆ. ಇಂಗ್ಲೆಂಡ್ ತಂಡ ಟೀಂ ಇಂಡಿಯಾವನ್ನು ಸೋಲಿಸಿ ಫೈನಲ್ ತಲುಪಿದೆ. ಹಾಗಾಗಿ ನವೆಂಬರ್ 13 ರಂದು ಮೆಲ್ಬೋರ್ನ್‌ನಲ್ಲಿ ಈ ಎರಡು ತಂಡಗಳು ವಿಶ್ವಕಪ್ ಗೆಲ್ಲಲು ಪರಸ್ಪರ ಹೋರಾಡಲಿವೆ. ಐಸಿಸಿ ಈ ಪಂದ್ಯದ ಹಿನ್ನಲೆಯಲ್ಲಿ ಪಂದ್ಯದ ಅಂಪೈರ್​ಗಳ ಹೆಸರನ್ನು ಪ್ರಕಟಿಸಿದೆ. ಈ ಹೆಸರುಗಳನ್ನು ನೋಡಿಯೇ ಇಂಗ್ಲೆಂಡಿನವರು ಸಂತಸಗೊಂಡಿದ್ದಾರೆ. ಏಕೆಂದರೆ 2019ರಲ್ಲಿ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡಕ್ಕೆ ಅದೃಷ್ಟದ ಬೆಂಬಲ ಸಿಕ್ಕಿತ್ತು. ಅಂದು ಮೈದಾನದಲ್ಲಿ ಅಂಪೈರಿಂಗ್ ಕೆಲಸ ಮಾಡುತ್ತಿದ್ದ ಈ ಜೋಡಿ ಈ ಬಾರಿಯ ವಿಶ್ವಕಪ್ ಫೈನಲ್ ನಲ್ಲಿ ಮತ್ತೊಮ್ಮೆ ಕಣಕ್ಕಿಳಿಯಲಿದೆ.



ಧರ್ಮಸೇನ, ಎರಾಸ್ಮಸ್ ಫೈನಲ್‌ಗೆ ಅಂಪೈರ್:


ಶ್ರೀಲಂಕಾದ ಅನುಭವಿ ಅಂಪೈರ್ ಕುಮಾರ್ ಧರ್ಮಸೇನಾ ಮತ್ತು ದಕ್ಷಿಣ ಆಫ್ರಿಕಾದ ಮಾರಿಸ್ ಎರಾಸ್ಮಸ್ ಅವರು ಎಂಸಿಜಿಯಲ್ಲಿ ಅಂತಿಮ ಪಂದ್ಯವನ್ನು ನಿರ್ವಹಿಸಲಿದ್ದಾರೆ. ಈ ಮಹತ್ವದ ಪಂದ್ಯಕ್ಕಾಗಿ ಐಸಿಸಿ ಈ ಜವಾಬ್ದಾರಿಯನ್ನು ಅವರಿಗೆ ವಹಿಸಿದೆ. ಮುಖ್ಯವಾಗಿ, ಲಾರ್ಡ್ಸ್‌ನಲ್ಲಿ 2019 ರ ODI ವಿಶ್ವಕಪ್ ಫೈನಲ್‌ನಲ್ಲಿ ಇಬ್ಬರೂ ಆನ್-ಫೀಲ್ಡ್ ಅಂಪೈರ್ ಪಾತ್ರವನ್ನು ನಿರ್ವಹಿಸಿದ್ದರು. ಇಂಗ್ಲೆಂಡ್ ಅಂತಿಮವಾಗಿ ಪಂದ್ಯವನ್ನು ಗೆದ್ದು ನಂತರ ಸೂಪರ್ ಓವರ್ ಟೈ ಆಯಿತು. ಹಾಗಾದರೆ ಮತ್ತೊಮ್ಮೆ ಈ ಅಂಪೈರ್ ಇಂಗ್ಲೆಂಡ್ ಗೆ ಅದೃಷ್ಟ ಖುಲಾಯಿಸಲಿದೆಯೇ? ಇದನ್ನು ಕಾದು ನೋಡಬೇಕಿದೆ.


ಫೈನಲ್​ ಪಂದ್ಯದ ಅಂಪೈರ್​ಗಳು


ಇಲ್ಲಿದೆ ಅಂಪೈರ್ ಲಿಸ್ಟ್:


ಕುಮಾರ್ ಧರ್ಮಸೇನಾ , ಶ್ರೀಲಂಕಾ - ಆನ್ ಫೀಲ್ಡ್ ಅಂಪೈರ್
ಮಾರಿಸ್ ಎರಾಸ್ಮಸ್ , ದಕ್ಷಿಣ ಆಫ್ರಿಕಾ - ಆನ್ ಫೀಲ್ಡ್ ಅಂಪೈರ್
ಕ್ರಿಸ್ ಗ್ರಾಫ್ನಿ , ನ್ಯೂಜಿಲೆಂಡ್ - ಟಿವಿ ಅಂಪೈರ್
ಪಾಲ್ ರೈಫೆಲ್ , ಆಸ್ಟ್ರೇಲಿಯಾ - ನಾಲ್ಕನೇ ಅಂಪೈರ್
ರಂಜನ್ ಮದುಗಲೆ , ಶ್ರೀಲಂಕಾ - ಪಂದ್ಯದ ರೆಫರಿ


ಇದನ್ನೂ ಓದಿ: ENG vs PAK T20 World Cup 2022: ವಿಶ್ವಕಪ್ ಫೈನಲ್ ನಾಳೆಯಲ್ಲ ನಾಡಿದ್ದು? ಮಳೆಯಿಂದ ರದ್ದಾದ್ರೆ ಯಾರಾಗ್ತಾರೆ ವಿನ್ನರ್?


ಎರಡನೇ ಬಾರಿಗೆ ವಿಶ್ವಕಪ್ ಗೆಲ್ಲುವವರು ಯಾರು?


ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಏಕೈಕ ತಂಡ ವೆಸ್ಟ್ ಇಂಡೀಸ್. ವೆಸ್ಟ್ ಇಂಡೀಸ್ 2012 ಮತ್ತು 2016ರಲ್ಲಿ ವಿಶ್ವಕಪ್ ಗೆದ್ದಿತ್ತು. ಆದರೆ ಈಗ ಆ ಅವಕಾಶ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಮುಂದೆ ಬಂದಿದೆ. ಈ ಎರಡೂ ತಂಡಗಳು ಈ ಹಿಂದೆ ವಿಶ್ವಕಪ್ ಗೆದ್ದಿವೆ. ಹೀಗಾಗಿ ಮೆಲ್ಬೋರ್ನ್ ನಲ್ಲಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವವರು ಯಾರು ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿದೆ.

Published by:shrikrishna bhat
First published: