• Home
  • »
  • News
  • »
  • sports
  • »
  • ENG vs PAK T20 WC 2022: ಆಂಗ್ಲರ ದಾಳಿಗೆ ತತ್ತರಿಸಿದ ಪಾಕ್, ಸಾಧಾರಣ ಮೊತ್ತಕ್ಕೆ ಕುಸಿದ ಬಾಬರ್ ಪಡೆ

ENG vs PAK T20 WC 2022: ಆಂಗ್ಲರ ದಾಳಿಗೆ ತತ್ತರಿಸಿದ ಪಾಕ್, ಸಾಧಾರಣ ಮೊತ್ತಕ್ಕೆ ಕುಸಿದ ಬಾಬರ್ ಪಡೆ

PAK vs ENG

PAK vs ENG

ENG vs PAK T20 WC 2022: ಮೆಲ್ಬೋರ್ನ್​ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.

  • Share this:

ಟಿ20 ವಿಶ್ವಕಪ್​ 2022ರ (T20 WC 2022) ಫೈನಲ್ ಕದನದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ (ENG vs PAK )ತಂಡಗಳು ಪ್ರಶಸ್ತಿಗಾಗಿ ಕಾದಾಡುತ್ತಿವೆ. ಈಗಾಗಲೇ  ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರಿಂದ ಮೆಲ್ಬೋರ್ನ್​ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಬರ್ ಅಜಮ್ (Babar Azam) ನಾಯಕತ್ವದ ಪಾಕಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸುವ ಮೂಲಕ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 138 ರನ್​ಗಳ ಸಾಧಾರಣ ಮೊತ್ತದ ಟಾರ್ಗೆಟ್ ನೀಡಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದು ಬಾರಿ ಟಿ20 ವಿಶ್ವಕಪ್​ ಗೆದ್ದಿದೆ. ಹೀಗಾಗಿ ಇಂದು ಗೆಲ್ಲುವ ತಂಡವು 2ನೇ ಬಾರಿ ವಿಶ್ವಕಪ್​ಗೆ ಮುತ್ತಿಕ್ಕಲಿದೆ. 


ಬ್ಯಾಟಿಂಗ್​ನಲ್ಲಿ ಅಬ್ಬರಿಸದ ಪಾಕ್:


ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ  ಪಾಕಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಇನ್ನು, ಪಾಕಿಸ್ತಾನ ಪರ ಮಹತ್ವದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಬೇಗ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರೆ, ಆಂಗ್ಲರ ದಾಳಿಗೆ ಪಾಕ್​ ತತ್ತರಿಸಿ ಹೋಯಿತು. ಪಾಖ್ ಪರ ಮೊಹಮ್ಮದ್ ರಿಜ್ವಾನ್ 15 ರನ್, ಬಾಬರ್ ಅಜಮ್ 32 ರನ್, ಮೊಹಮ್ಮದ್ ಹ್ಯಾರಿಸ್ 8 ರನ್, ಶಾನ್ ಮಸೂದ್ 38 ರನ್, ಇಫ್ತಿಕರ್ ಅಹ್ಮದ್ ಶೂನ್ಯ, ಶಾದಾಬ್ ಖಾನ್ 20 ರನ್, ಮೊಹಮ್ಮದ್ ನವಾಜ್ 5 ರನ್, ಮೊಹಮ್ಮದ್ ವಾಸಿಂ 4 ರನ್, ಶಾಹೀನ್ ಶಾ ಆಫ್ರಿದಿ 5 ರನ್ ಮತ್ತು ಹ್ಯಾರಿಸ್ ರೌಫ್ 1 ರನ್ ಗಳಿಸಿ ಔಟಾಗದೇ ಉಳಿದರು.ಭರ್ಜರಿ ಬೌಲಿಂಗ್ ದಾಳಿ ಮಾಡಿದ ಆಂಗ್ಲರು:


ಟಾಸ್​ ಗೆದ್ದು ಮೊದಲು ಬೌಲಿಂಗ್ ಮಾಡಿದ ಇಂಗ್ಲೆಂಡ್ ತಂಡವು ಉತ್ತಮವಾಗಿ ಪಾಕ್​ ಮೇಲೆ ಹಿಡಿತ ಸಾಧಿಸಿತು. ಮೊದಲಿನಿಂದಲೂ ಪಾಕ್​ ಬ್ಯಾಟರ್​ಗಳಿಗೆ ಕಾಡಿದ ಆಂಗ್ಲ ಬೌಲರ್​ಗಳು ಪಾಕಿಸ್ತಾದ ಬೃಹತ್ ಮೊತ್ತ ಕಲೆಹಾಕಲು ಬಿಡದೇ ಕಾಡಿದರು. ಇಂಗ್ಲೆಂಡ್ ಪರ, ಸ್ಯಾಮ್ ಕರನ್ ಮತ್ತೊಮ್ಮೆ ಮಿಂಚಿದರು. ಅವರು 4 ಓವರ್​ ಮಾಡಿ 12 ರನ್​ಗೆ 3 ವಿಕೆಟ್ ಪಡೆದರು. ಉಳಿದಂತೆ ಆದಿಲ್ ರಶೀದ್ ಮತ್ತು ಕ್ರಸ್ ಜೋರ್ಡನ್ ತಲಾ 2 ವಿಕೆಟ್ ಮತ್ತು ಬೆನ್ ಸ್ಟೋಕ್ಸ್ 1 ವಿಕೆಟ್ ಪಡೆದು ಮಿಂಚಿದರು.


ಇದನ್ನೂ ಓದಿ: IPL 2023: ಆರ್​ಸಿಬಿ ಯಾವೆಲ್ಲಾ ಆಟಗಾರರನ್ನು ಕೈಬಿಟ್ಟಿದೆ? ಯಾವ ಪ್ಲೇಯರ್ಸ್​ಗಳನ್ನು ಉಳಿಸಿಕೊಂಡಿದೆ? ಇಲ್ಲಿದೆ ಸಂಪೂರ್ಣ ಪಟ್ಟಿ


ಪಾಕಿಸ್ತಾನ-ಇಂಗ್ಲೆಂಡ್​ ಪ್ಲೇಯಿಂಗ್ 11:


ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್.


ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ ಮತ್ತು ಹ್ಯಾರಿಸ್ ರೌಫ್.

Published by:shrikrishna bhat
First published: