ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳ ನಡುವಿನ ಕ್ರಿಕೆಟ್ ಪಂದ್ಯಗಳು ಎಂದರೆ ಇಡಿ ವಿಶ್ವವೇ ಕಾದುಕುಳಿತಿರುತ್ತದೆ. ಟಿ20 ವಿಶ್ವಕಪ್ (T20 World Cup) ಬಳಿಕ ಎರಡೂ ದೇಶಗಳ ತಂಡಗಳು ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಿಲ್ಲ. ಇದರ ಹೊರತಾಗಿಯೂ, ಭಾರತ ಮತ್ತು ಪಾಕ್ ನಡುವಿನ ಪಂದ್ಯದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಮಸ್ಯೆಯೆಂದರೆ ಏಕದಿನ ವಿಶ್ವಕಪ್ 2023 (ODI World Cup 2023) ಮತ್ತು ಏಷ್ಯಾ ಕಪ್‌ನಂತಹ (Asia Cup 2023) ಪಂದ್ಯಾವಳಿಗಳ ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ಆದರೆ ಈಗ ಈ ಚರ್ಚೆ ಹೊಸ ತಿರುವು ಪಡೆದುಕೊಂಡಿದೆ. ಹೌದು, ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್ ಆಡುವುದಿಲ್ಲ ಎಂಬ ಹೇಳಿಕೆಯೊಂದು ಕೇಳಿಬಂದಿದೆ.
ಏಷ್ಯಾಕಪ್ vs ವಿಶ್ವಕಪ್:
ಈ ವರ್ಷ ಏಷ್ಯಾಕಪ್‌ಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಇದಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಪಾಕಿಸ್ತಾನಕ್ಕೆ ತೆರಳಲು ಟೀಂ ಇಂಡಿಯಾವನ್ನು ಸಾರಾಸಗಟಾಗಿ ನಿರಾಕರಿಸಿತ್ತು. ಅದೇ ಸಮಯದಲ್ಲಿ, ಏಷ್ಯಾ ಕಪ್‌ನಲ್ಲಿ ಭಾರತ ಬರದಿದ್ದರೆ, ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಅಧಿಕೃತವಾಗಿ ಈ ವಿಷಯ ಇನ್ನೂ ಅಂತಿಮವಾಗಿಲ್ಲ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ವಿಶ್ವಕಪ್‌ನಲ್ಲಿ ಪಾಕ್ ಆಡುವುದಿಲ್ಲ:
ವಿಶ್ವಕಪ್‌ಗೆ ಸಂಬಂಧಿಸಿದಂತೆ ಡ್ಯಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, 'ಮುಂಬರುವ ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಮಾಡುವುದಿಲ್ಲ. ಇನ್ನೆರಡು ಮೂರು ದಿನಗಳಲ್ಲಿ ಇದು ಖಚಿತವಾಗಲಿದೆ. ದುಬೈ ಅಥವಾ ಕತಾರ್‌ನಲ್ಲಿ ಏಷ್ಯಾಕಪ್ ಆತಿಥ್ಯ ವಹಿಸಲು ಪಾಕಿಸ್ತಾನ ತಯಾರಾದರೆ, ಅದು ದೊಡ್ಡ ವಿಷಯ ‘ ಎಂದು ಹೇಳಿದ್ದಾರೆ.
ಇದನ್ನೂ ಓದಿ: WPL Auction 2023: ಆರ್ಸಿಬಿಗೆ ಎಂಟ್ರಿಕೊಟ್ಟ ಸ್ಮೃತಿ ಮಂದಾನ! ಮೆನ್ಸ್ ತಂಡಕ್ಕೂ ಮೊದಲೇ ಕಪ್ ಗೆಲ್ತಾರಂತೆ ವುಮೆನ್ಸ್ ಟೀಂ!
ಏಷ್ಯಾಕಪ್ ನಡೆಯುವ ಸ್ಥಳಕ್ಕೆ ಸಂಬಂಧಿಸಿದಂತೆ ಏಷ್ಯನ್ ಕ್ರಿಕೆಟ್ ಮಂಡಳಿಯ ಸಭೆ ಈಗಾಗಲೇ ನಡೆದಿದೆ. ಇದರಲ್ಲಿ ಸಂಪೂರ್ಣ ನಿರ್ಧಾರ ಕೈಗೊಳ್ಳಲಾಗಲಿಲ್ಲ. ನಿರ್ಧಾರವನ್ನು ಎಸಿಸಿ ಮಾರ್ಚ್‌ಗೆ ಮುಂದೂಡಿದೆ. ಆದಾಗ್ಯೂ, ಏಷ್ಯಾಕಪ್ ನಡೆಯುವ ಸ್ಥಳದಲ್ಲಿ ಯುಎಇ ಹೆಸರು ಅಗ್ರಸ್ಥಾನದಲ್ಲಿದೆ. ಮಾರ್ಚ್‌ನಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಬಿಸಿಸಿಐ vs ಪಿಸಿಬಿ:
ಇನ್ನು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವೆ ನಡೆಯುತ್ತಿರುವ ಜಟಾಪಟಿ ಮುಂದುವರೆದಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ICC ODI ವಿಶ್ವಕಪ್ 2023 ಪಂದ್ಯವು ಬಿಕ್ಕಟ್ಟಿನಿಂದ ಕೂಡಿದೆ. ಪಾಕಿಸ್ತಾನದಲ್ಲಿ ಯಾವುದೇ ಟೂರ್ನಿ ಆಡುವುದಿಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ. ಬಿಸಿಸಿಐ ಕಾರ್ಯದರ್ಶಿ ಜೈ ಶಾ ಆಕ್ಷೇಪದ ನಂತರ ಏಷ್ಯಾ ಕಪ್ ಅನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಏಷ್ಯಾಕಪ್ ಕುರಿತು ನೋಡುವುದಾದರೆ, ಪಂದ್ಯಗಳು ಸೆಪ್ಟೆಂಬರ್‌ನಲ್ಲಿ ನಡೆಯಲಿವೆ. ಇದನ್ನು ಪಾಕಿಸ್ತಾನ ಆಯೋಜಿಸಲಿದೆ. ಆದರೆ ಭಾರತವು ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಬಹುದು ಎನ್ನಲಾಗುತ್ತಿದೆ.
ಅಮೇರಿಕಾದಲ್ಲಿ ಇಂಡೋ-ಪಾಕ್ ಪಂದ್ಯ:
ಇದರ ನಡುವೆ 2024ರ ಟಿ20 ವಿಶ್ವಕಪ್‌ನಲ್ಲಿ ಅಮೆರಿಕದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನಡೆಸುವ ಸಾಧ್ಯತೆ ಹೆಚ್ಚಿದೆ. ICC ಟೂರ್ನಮೆಂಟ್‌ನ ಅತಿದೊಡ್ಡ ಪಂದ್ಯ ಎಂದರೆ ಅದು ಭಾರತ vs ಪಾಕಿಸ್ತಾನ ಪಂದ್ಯವಾಗಿದೆ. ಎರಡೂ ತಂಡಗಳ ವೀಕ್ಷಕರನ್ನು ಪರಿಗಣಿಸಿ ವೆಸ್ಟ್ ಇಂಡೀಸ್ ಬದಲಿಗೆ ಅಮೇರಿಕಾದಲ್ಲಿ ಪಂದ್ಯ ನಡೆಯಬಹುದು ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ