Pakistan Cricket: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡದ ಹೊಸ ಜೆರ್ಸಿ, ಇದು ಕಲ್ಲಂಗಡಿ ಹಣ್ಣು ಎಂದ ಪಾಕ್​ ಮಾಜಿ ಆಟಗಾರ

Pakistan Cricket: ಮುಂಬರುವ T20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತಮ್ಮ ಹೊಸ ತಂಡದ ಜರ್ಸಿ ಮತ್ತು ಕಿಟ್ ಅನ್ನು ಬಿಡುಗಡೆ ಮಾಡಿದೆ. ಈ ಜೆರ್ಸಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಟ್ರೋಲ್​ ಮಾಡಲಾಗುತ್ತಿದೆ.

ಪಾಕಿಸ್ತಾನ ತಂಡ

ಪಾಕಿಸ್ತಾನ ತಂಡ

  • Share this:
ಮುಂಬರುವ ಟಿ20 ವಿಶ್ವಕಪ್ (T20 World Cup 2022) ಕ್ರಿಕೆಟ್ ಟೂರ್ನಿಗಾಗಿ ಪಾಕಿಸ್ತಾನ ಕ್ರಿಕೆಟ್ (Pakistan Cricket) ಮಂಡಳಿ ತನ್ನ ತಂಡದ ಹೊಸ ಜೆರ್ಸಿ  (Jersey) ಮತ್ತು ಕಿಟ್ ಅನ್ನು ಬಿಡುಗಡೆ ಮಾಡಿದೆ. ಈ ಜೆರ್ಸಿಯನ್ನು ನೋಡಿದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪಾಕಿಸ್ತಾನ (Pakistan )ತಂಡದ ಈ ಹೊಸ ಜೆರ್ಸಿಯನ್ನು ಲೇವಡಿ ಮಾಡುತ್ತಿದ್ದಾರೆ. ಇದರಲ್ಲಿ ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಕೂಡ ಈ ಜೆರ್ಸಿಯನ್ನು ಲೇವಡಿ ಮಾಡಿದ್ದಾರೆ. ಅವರು ಹೊಸ ಜೆರ್ಸಿಯನ್ನು ಕಲ್ಲಂಗಡಿ  ಹಣ್ಣಿಗೆ ಹೋಲಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಪಾಕ್​ ಜೆರ್ಸಿ ಕುರಿತು ಸಾಕಷ್ಟು ಟ್ರೋಲ್​ಗಳು ಆಗುತ್ತಿವೆ.

ಟಿ20 ವಿಶ್ವಕಪ್​ಗಾಗಿ ಪಾಕ್​ ಹೊಸ ಜೆರ್ಸಿ ಅನಾವರಣ:

ಟಿ20 ವಿಶ್ವಕಪ್‌ಗಾಗಿ ಪಿಸಿಬಿ ಎರಡು ಹೊಸ ಜೆರ್ಸಿಗಳನ್ನು ಬಿಡುಗಡೆ ಮಾಡಿದೆ. ಎರಡೂ ಒಂದೇ ರೀತಿಯ ವಿನ್ಯಾಸಗಳನ್ನು ಹೊಂದಿದ್ದರೂ, ಬಣ್ಣಗಳು ವಿಭಿನ್ನವಾಗಿವೆ. ಆದಾಗ್ಯೂ, ಡ್ಯಾನಿಶ್ ಕನೇರಿಯಾ ಈ ಜೆರ್ಸಿಯ ವಿನ್ಯಾಸದ ಬಗ್ಗೆ ಪಿಸಿಬಿಯನ್ನು ಟ್ರೋಲ್ ಮಾಡಿದ್ದಾರೆ. ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ, 'ಜೆರ್ಸಿ ಕಡು ಹಸಿರು ಬಣ್ಣದ್ದಾಗಿರಬೇಕಿತ್ತು. ಈ ಜರ್ಸಿಯು ಕಲ್ಲಂಗಡಿ ಹಣ್ಣಿನಂತೆ ಕಾಣುತ್ತದೆ. ‘ಫ್ರೂಟ್ ನಿಂಜಾ’ ಎಂಬ ಆಟವಿದೆ, ಅದರಲ್ಲಿ ನೀವು ಕಲ್ಲಂಗಡಿಗಳನ್ನು ಕತ್ತರಿಸಬೇಕು. ಇದೇ ಬಣ್ಣ. ಪಿಸಿಬಿ ಜೆರ್ಸಿಗೆ ಕಡು ಹಸಿರು ಬಣ್ಣವನ್ನು ಬಳಸಿರಬೇಕು. ಈ ಜೆರ್ಸಿ ಧರಿಸಿದ ನಂತರ ಆಟಗಾರನು ಹಣ್ಣಿನ ಅಂಗಡಿಯಲ್ಲಿ ನಿಂತಿರುವಂತೆ ಕಾಣಿಸುತ್ತಾರೆ’ ಎಂದು ಹೇಳಿದ್ದಾರೆ.





ಭಾರತದ ಜೆರ್ಸಿ ಕುರಿತು ಕಾಮೆಂಟ್​:

41 ವರ್ಷದ ಡ್ಯಾನಿಶ್ ಕನೇರಿಯಾ ಕೂಡ ಭಾರತ ತಂಡದ ಜೆರ್ಸಿ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಟೀಂ ಇಂಡಿಯಾದ ಜೆರ್ಸಿಯ ಬಣ್ಣ ಕಡು ನೀಲಿಯಾಗಿರಬೇಕಿತ್ತು ಎಂದು ಕನೇರಿಯಾ ಹೇಳಿದ್ದಾರೆ. ಕನೇರಿಯಾ ಪಾಕಿಸ್ತಾನದ ಪರ 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 261 ಮತ್ತು ಏಕದಿನದಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅಕ್ಟೋಬರ್ 23 ರಂದು ಗ್ರ್ಯಾಂಡ್ ಮ್ಯಾಚ್

ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಪಾಕಿಸ್ತಾನ ತಂಡದ ಮೊದಲ ಪಂದ್ಯ ಅಕ್ಟೋಬರ್ 23 ರಂದು ಭಾರತದ ವಿರುದ್ಧ ಆಡಲಿದೆ. ಪ್ರಪಂಚದಾದ್ಯಂತದ ಕ್ರಿಕೆಟ್ ಪ್ರೇಮಿಗಳು ಈ ಒಂದು ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: IPL 2023: ಐಪಿಎಲ್ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, RCB ಫ್ಯಾನ್ಸ್​ಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ

ಇದೇ ವೇಳೆ ಟಿ20 ವಿಶ್ವಕಪ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಟೂರ್ನಿಗಾಗಿ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡಕ್ಕೆ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿತು. ಈ ಜೆರ್ಸಿಯನ್ನು ನೋಡಿದ ಭಾರತೀಯ ಅಭಿಮಾನಿಗಳೆಲ್ಲ ತುಂಬಾ ಖುಷಿಪಟ್ಟಿದ್ದಾರೆ. ಹಲವರು ಜೆರ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾರತ ತಂಡಕ್ಕೆ ವಿಶ್ವಕಪ್‌ಗೆ ಶುಭ ಹಾರೈಸಿದ್ದಾರೆ. ಭಾರತದ ನಂತರ ಈಗ ಪಿಸಿಬಿ ಕೂಡ ತಮ್ಮ ಜರ್ಸಿಯನ್ನು ಬಿಡುಗಡೆ ಮಾಡಿದೆ. ಆದಾಗ್ಯೂ, ಈ ಜೆರ್ಸಿಯನ್ನು ಪಾಕಿಸ್ತಾನದ ಮಾಜಿ ಆಟಗಾರರು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಅಪಹಾಸ್ಯ ಮಾಡಲಾಗುತ್ತಿದೆ.
Published by:shrikrishna bhat
First published: