• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ICC ODI World Cup 2023: ನಾವು ಭಾರತದಲ್ಲಿ ವಿಶ್ವಕಪ್ ಆಡಲು ರೆಡಿ, ಬಾಬರ್​ ಅಜಮ್​ ಶಾಕಿಂಗ್​ ಹೇಳಿಕೆ

ICC ODI World Cup 2023: ನಾವು ಭಾರತದಲ್ಲಿ ವಿಶ್ವಕಪ್ ಆಡಲು ರೆಡಿ, ಬಾಬರ್​ ಅಜಮ್​ ಶಾಕಿಂಗ್​ ಹೇಳಿಕೆ

ಬಾಬರ್-ಕೊಹ್ಲಿ

ಬಾಬರ್-ಕೊಹ್ಲಿ

IND vs PAK: ಏಷ್ಯಾಕಪ್ ಸ್ಥಳ ವಿವಾದದ ಮಧ್ಯೆ, ಬಾಬರ್ ಅಜಮ್ ಭಾರತದಲ್ಲಿ ನಡೆಯಲಿರುವ ODI ವಿಶ್ವಕಪ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಅವರ ಹೇಳಿಕೆ ಇದಿಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

  • Share this:

ಪಾಕಿಸ್ತಾನ ಕ್ರಿಕೆಟ್ ತಂಡ ಸದ್ಯ ಪಿಎಸ್​ಎಲ್ (PSL) ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ನಿರತವಾಗಿದೆ. ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (ICC ODI World Cup 2023) ಬಗ್ಗೆ ನಾಯಕ ಬಾಬರ್ ಅಜಮ್ (Babar Azam) ದೊಡ್ಡ ಹೇಳಿಕೆ ನೀಡಿದ್ದಾರೆ. ಮುಂಬರುವ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಸಂಪೂರ್ಣ ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಏಷ್ಯಾಕಪ್ 2023 (Asia Cup 2023) ಸ್ಥಳದ ವಿವಾದದ ನಡುವೆ ಬಾಬರ್ ಅಜಮ್ ಅವರ ಈ ಹೇಳಿಕೆ ಸ್ವಲ್ಪ ಆಶ್ಚರ್ಯಕರವಾಗಿದೆ. ಇದಕ್ಕೂ ಮುನ್ನ ಪಾಕ್​ ಮಂಡಳಿಯ ಮತ್ತು ಹಿರಿಯ ಆಟಗಾರರು ಭಾರತ ಏಷ್ಯಾಕಪ್​ಗೆ ಭಾರತ ಪಾಕ್​ಗೆ ಬರದಿದ್ದರೆ ನಾವೂ ಸಹ ಭಾರತಕ್ಕೆ ವಿಶ್ವಕಪ್​ ಆಡಲು ಬರುವುದಿಲ್ಲ ಎಂದಿದ್ದರು.


ಭಾರತಕ್ಕೆ ನಾವು ಬರುತ್ತೇವೆ:


ಇನ್ನು ಬಾಬರ್ ಅಜಮ್​, ನಾನು ಮತ್ತು ಮೊಹಮ್ಮದ್ ರಿಜ್ವಾನ್ ವಿಶ್ವಕಪ್‌ನಲ್ಲಿ ರನ್ ಗಳಿಸಲು ಪ್ರಯತ್ನಿಸುತ್ತೇವೆ. ಆದರೆ ಪ್ರತಿ ಇನ್ನಿಂಗ್ಸ್‌ನಲ್ಲಿ ಸ್ಕೋರ್ ಮಾಡುವುದು ನಮಗೆ ಸುಲಭವಲ್ಲ. ಆದ್ದರಿಂದ ಪಂದ್ಯಾವಳಿಯಲ್ಲಿ ನಮ್ಮನ್ನು ಹೊರತುಪಡಿಸಿ ಎಲ್ಲಾ ಆಟಗಾರರು ರನ್ ಗಳಿಸುವುದು ಅವಶ್ಯಕವಿದೆ ಎಂದು ಹೇಳಿದ್ದಾರೆ. ಜೊತೆಗೆ ಟೀಕೆ ಇರುತ್ತದೆ. ಏಕೆಂದರೆ ನಿಮ್ಮ ಪರವಾಗಿ ಯಾರಾದರೂ ಮಾತನಾಡುವ ಸಾಧ್ಯತೆಯಿಲ್ಲ. ನಾನು ಯಾವಾಗಲೂ ಧನಾತ್ಮಕವಾಗಿರಲು ಪ್ರಯತ್ನಿಸುತ್ತೇನೆ. ಏಕೆಂದರೆ ಅದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹೀಗಾಗಿ ನಾವು ಮುಂಬರಲಿರುವ ಏಕದಿನ ವಿಶ್ವಕಪ್​ಗಾಗಿ ತಯಾರಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.


ಏಷ್ಯಾಕಪ್‌ಗೆ ಭಾರತ ಪಾಕಿಸ್ತಾನಕ್ಕೆ ಬರದಿದ್ದರೆ ನಾವೂ ಏಕದಿನ ವಿಶ್ವಕಪ್‌ಗೆ ಭಾರತಕ್ಕೆ ಹೋಗುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಹಿಂದೆ ಹೇಳಿತ್ತು. ಪಿಸಿಬಿಯ ಈ ವಿಷಯವನ್ನು ಪಾಕಿಸ್ತಾನದ ಹಲವು ಕ್ರಿಕೆಟಿಗರು ಸಹ ಬೆಂಬಲಿಸಿದ್ದರು. ಇದೀಗ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ನಾವು ತಯಾರಿ ನಡೆಸುತ್ತಿದ್ದೇವೆ ಎಂದು ಜಿಯೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಬಾಬರ್ ಹೇಳಿದ್ದಾರೆ.


ಇದನ್ನೂ ಓದಿ: IND vs PAK: ಟೀಂ ಇಂಡಿಯಾ​ ಆಹ್ವಾನದ ಹಿಂದಿದ್ಯಾ ಈ ದುರುದ್ದೇಶ? ಇಷ್ಟು ಕೀಳುಮಟ್ಟಕ್ಕೀಳಿತಾ ಪಾಕಿಸ್ತಾನ!


ವಿಶ್ವಕಪ್‌ನಲ್ಲಿ ಪಾಕ್​ ಆಡುವುದಿಲ್ಲ:


ವಿಶ್ವಕಪ್‌ಗೆ ಸಂಬಂಧಿಸಿದಂತೆ ಡ್ಯಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, 'ಮುಂಬರುವ ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಮಾಡುವುದಿಲ್ಲ. ಇನ್ನೆರಡು ಮೂರು ದಿನಗಳಲ್ಲಿ ಇದು ಖಚಿತವಾಗಲಿದೆ. ದುಬೈ ಅಥವಾ ಕತಾರ್‌ನಲ್ಲಿ ಏಷ್ಯಾಕಪ್ ಆತಿಥ್ಯ ವಹಿಸಲು ಪಾಕಿಸ್ತಾನ ತಯಾರಾದರೆ, ಅದು ದೊಡ್ಡ ವಿಷಯ ‘ ಎಂದು ಹೇಳಿದ್ದಾರೆ.
ಏಷ್ಯಾಕಪ್​ vs ವಿಶ್ವಕಪ್:


ಈ ವರ್ಷ ಏಷ್ಯಾಕಪ್‌ಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಇದಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಪಾಕಿಸ್ತಾನಕ್ಕೆ ತೆರಳಲು ಟೀಂ ಇಂಡಿಯಾವನ್ನು ಸಾರಾಸಗಟಾಗಿ ನಿರಾಕರಿಸಿತ್ತು. ಅದೇ ಸಮಯದಲ್ಲಿ, ಏಷ್ಯಾ ಕಪ್‌ನಲ್ಲಿ ಭಾರತ ಬರದಿದ್ದರೆ, ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಅಧಿಕೃತವಾಗಿ ಈ ವಿಷಯ ಇನ್ನೂ ಅಂತಿಮವಾಗಿಲ್ಲ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಆಘಾತಕಾರಿ ಹೇಳಿಕೆ ನೀಡಿದ್ದಾರೆ.


ಏಷ್ಯಾಕಪ್​​ ಹಿಂದೆ ಪಾಕ್​ ಷಡ್ಯಂತ್ರ:


ಏಷ್ಯಾಕಪ್‌ನ ಆತಿಥ್ಯವು ಪಾಕಿಸ್ತಾನದ ಕೈಯಲ್ಲಿದೆ. ಆದರೆ ಭಾರತದ ಎಲ್ಲಾ ಪಂದ್ಯಗಳು ಯುಎಇಯಲ್ಲಿ ನಡೆಯಬೇಕು ಎಂದು ಭಾರತ ಭೇಡಿಕೆ ಇಟ್ಟಿದೆ. ಒಂದು ವೇಳೆ ಟೀಂ ಇಂಡಿಯಾ ಫೈನಲ್‌ವರೆಗೆ ಪ್ರಯಾಣಿಸಿದರೂ ಅದು ಯುಎಇಯಲ್ಲಿಯೇ ನಡೆಬೇಕು ಎಂದಿದೆ. ಪಾಕಿಸ್ತಾನವು ಪ್ರಸ್ತುತ ಆರ್ಥಿಕ ಪರಿಸ್ಥಿತಿಯೊಂದಿಗೆ ಹೋರಾಡುತ್ತಿದೆ. ಭಾರತ ಆಗಮನದಿಂದ ಪಾಕಿಸ್ತಾನಕ್ಕೆ ದೊಡ್ಡ ಲಾಭ ಸಿಗಬಹುದು. ಅಲ್ಲಿನ ಆರ್ಥಿಕತೆಯನ್ನು ಏನಾದರೂ ಉಳಿಸಲು ಸಾಧ್ಯವಾದರೆ, ಅದು ಕ್ರಿಕೆಟ್​ನಿಂದ ಮಾತ್ರ ಎಂಬ ಮಾತುಗಳು ಕೇಳಿಬರುತ್ತಿದೆ.

Published by:shrikrishna bhat
First published: