Urvashi Rautela: ಊರ್ವಶಿ ರೌಟೇಲಾ ಕುರಿತು ಕೊನೆಗೂ ಮೌನ ಮುರಿದ ಪಾಕ್​ ಆಟಗಾರ, ಇವರಿಬ್ಬರ ನಡುವಿನ ಸಂಬಂಧ ನಿಜಾನಾ?

Urvashi Rautela: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಕಳೆದ ಹಲವು ದಿನಗಳಿಂದ ನಟಿ ಪಾಕ್​ ಕ್ರಿಕೆಟಿಗನ ವಿಡಿಯೋ ಹಂಚಿಕೊಂಡು ಸಖತ್​ ಸೌಂಡ್​ ಮಾಡಿದ್ದರು. ಆದರೆ ಇದೀಗ ಪಾಕ್​ ಆಟಗಾರ ಊರ್ವಶಿ ಬಗ್ಗೆ ಮಾತನಾಡಿದ್ದು, ಸಖತ್ ವೈರಲ್ ಆಗುತ್ತಿದೆ.

ಊರ್ವಶಿ ರೌಟೇಲಾ-ನಸೀಮ್ ಶಾ

ಊರ್ವಶಿ ರೌಟೇಲಾ-ನಸೀಮ್ ಶಾ

  • Share this:
ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಕಳೆದ ಹಲವು ದಿನಗಳಿಂದ ನಟಿ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಜೊತೆಗಿನ ವಿವಾದಗಳಿಂದ ಸುದ್ದಿಯಲ್ಲಿದ್ದರು. ಇದೀಗ ಆಕೆ ಪಾಕಿಸ್ತಾನದ ಕ್ರಿಕೆಟಿಗ ನಸೀಮ್ ಶಾ (Naseem Shah) ಜೊತೆಗಿನ ವಿಡಿಯೋ ಮೂಲಕ ಗಮನ ಸೆಳೆದಿದ್ದಾರೆ. ಹೌದು, ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನ ಕ್ರಿಕೆಟ್ ಪಂದ್ಯಗಳಿಗೆ ಊರ್ವಶಿ ಸ್ಟೇಡಿಯಂನಲ್ಲಿ ಹಾಜರಾಗಿದ್ದಾರೆ. ಇಲ್ಲಿಯವರೆಗೂ ಊರ್ವಶಿ ಹೆಸರು ಭಾರತದ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಜೊತೆಗೆ ತಳುಕು ಹಾಕಿಕೊಂಡಿತ್ತು. ಆದರೆ ಇದೀಗ ಊರ್ವಶಿ ಪಾಕಿಸ್ತಾನಿ ಕ್ರಿಕೆಟಿಗನ ನಸೀಮ್ ಶಾ ಜೊತೆ ಕೇಳಿಬರುತ್ತಿದೆ. ಅದಕ್ಕೆ ಮೂಲಕ ಕಾರಣ ಊರ್ವಶಿ ಹಂಚಿಕೊಂಡ ನಸೀಮ್ ಶಾ ವಿಡಿಯೋ. ಆದರೆ ಈ ವಿಚಾರ ವೈರಲ್ ಆಗುತ್ತಿದ್ದಂತೆ ಸ್ವತಃ ನಸೀಮ್ ಶಾ ಈ ಕುರಿತು ಮಾತನಾಡಿದ್ದಾರೆ.

ಕೊನೆಗೂ ಮೌನ ಮುರಿದ ಪಾಕ್​ ಆಟಗಾರ:

ಈ ಎಲ್ಲಾ ವಿಷಯಗಳ ಬಗ್ಗೆ ಪಾಕಿಸ್ತಾನ ಕ್ರಿಕೆಟಿಗ ನಸೀಮ್ ಶಾ ಕೊನೆಗೂ ಮೌನಮುರಿದಿದ್ದಾರೆ.  ಅವರ ಪ್ರತಿಕ್ರಿಯೆ ಅಚ್ಚರಿ ಮೂಡಿಸಿದರೂ ಇದು ಸತ್ಯ ಎಂದಿದ್ದಾರೆ. ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಮ್ ಷಾ ಪ್ರಸ್ತುತ ಭಾರತೀಯ ನಟಿ ಊರ್ವಶಿ ರೌಟೇಲಾ ಅವರ ಗಮನ ಸೆಳೆದಿದ್ದಾರೆ. ಊರ್ವಶಿ ಕೆಲವು ದಿನಗಳ ಹಿಂದೆ ರೊಮ್ಯಾಂಟಿಕ್ ರೀಲ್ ಅನ್ನು ಹಂಚಿಕೊಂಡಿದ್ದರು, ನಂತರ ಊರ್ವಶಿ ಮತ್ತು ನಸೀಮ್ ಸಂಬಂಧದ ಬಗ್ಗೆ ಅನೇಕ ವಿಷಯಗಳು ಹೊರಹೊಮ್ಮಲು ಪ್ರಾರಂಭಿಸಿದವು.


View this post on Instagram


A post shared by DBTV Sports (@dbtvsports)


ಇದೀಗ ಪಾಕಿಸ್ತಾನದ ವೇಗದ ಬೌಲರ್ ನಸೀಮ್ ಶಾ ಅವರು ಊರ್ವಶಿ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದು ಎಲ್ಲಡೆ ವೈರಲ್ ಆಗುತ್ತಿದೆ. ಅದರಂತೆ, ಊರ್ವಶಿ ಯಾರೆಂದು ನನಗೆ ಗೊತ್ತಿಲ್ಲ ಎಂದಿದ್ದಾರೆ ನಸೀಮ್. ಜನರು ಈ ರೀತಿಯ ವೀಡಿಯೊಗಳನ್ನು ಏಕೆ ಮಾಡುತ್ತಾರೆಂದು ನನಗೆ ತಿಳಿದಿಲ್ಲ. ಯಾರಾದರೂ ನನ್ನ ನಗುವನ್ನು ಇಷ್ಟಪಟ್ಟರೆ, ಅದು ನನಗೆ ಸಂತಸ. ಸದ್ಯ ನನ್ನ ಗಮನ ಕ್ರಿಕೆಟ್‌ ಮೇಲಿದೆ. ನಾನು ಆಡಲು ಬಯಸುತ್ತೇನೆ‘ ಎಂದು ಅವರು ಹೇಳಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೆ ಹೇಗಿದೆ ನೋಡಿ ಆಶಿಶ್ ನೆಹ್ರಾ, ಪ್ರಮುಖ ಆಟಗಾರನಿಗಿಲ್ಲ ಅವಕಾಶವಿಲ್ಲ

ಸಖತ್​ ಟ್ರೋಲ್​ ಆಗಿದ್ದ ಬಾಲಿವುಡ್​ ನಟಿ:

ನಸೀಮ್​ ಶಾ ಮತ್ತು ಊರ್ವಶಿ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಊರ್ವಶಿ ಸಾಕಷ್ಟು ಟ್ರೋಲ್ ಆಗಿದ್ದಾರೆ. ಊರ್ವಶಿ ಈಗ ಈ ಕಥೆಯನ್ನು ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಅಳಿಸಿದ್ದಾರೆ. ಇಷ್ಟೇ ಅಲ್ಲ ಊರ್ವಶಿ ಹಾಗೂ ನಸೀಮ್ ಶಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಮ್ಸ್ ಸುರಿಮಳೆಯಾಗುಗಿತ್ತು. ಇಬ್ಬರ ಫೋಟೋಗಳು ಮತ್ತು ವಿಡಿಯೋಗಳನ್ನು ಎಡಿಟ್ ಮಾಡಿ ಹಲವು ಫನ್ನಿ ಮೀಮ್‌ಗಳನ್ನು ಮಾಡಲಾಗಿತ್ತು. ಅಲ್ಲದೇ, ಊರ್ವಶಿ ರೌಟೇಲಾ ಮತ್ತು ನಸೀಮ್ ಶಾ ಇಬ್ಬರ ಜೊತೆಗೆ ಕ್ರಿಕೆಟಿಗ ರಿಷಭ್ ಪಂತ್ ಅವರನ್ನು ಸೇರಿಸಲಾಗಿತ್ತು.

ಇದನ್ನೂ ಓದಿ: Shubman Gill: ಶುಭ್​ಮನ್ ಗಿಲ್-ಸಾರಾ ಅಲಿ ಖಾನ್ ಡೇಟಿಂಗ್, ವೈರಲ್ ಆಯ್ತು ಇನ್ಸ್ಟಾಗ್ರಾಂ ಪೋಸ್ಟ್

ಪದೇ ಪದೇ ಸುದ್ದಿಯಾಗುತ್ತಿದ್ದ ಊರ್ವಶಿ-ಪಂತ್​:

ಇನ್ನು, ಊರ್ವಶಿ ಮತ್ತು ರಿಷಭ್ ಪಂತ್ ಕಳೆದ ಕೆಲ ದಿನಗಳಿಂದ ಸಖತ್ ಸುದ್ದಿಯಲ್ಲಿದ್ದರು. ಇದಕ್ಕಾಗಿ ಇವರಿಬ್ಬರೂ ಪರೋಕ್ಷವಾಗಿ ಸಹ ಸಮಾಜಿಕ ಜಾಲತಾಣದಲ್ಲಿ ಪ್ರತಿಕ್ರಯೆಗಳನ್ನು ನೀಡುತ್ತಿದ್ದರು. ಅದೇ ರೀತಿ ಹಾಂಗ್​ ಕಾಂಗ್​ ಪಂದ್ಯದ ಬಳಿಕ  ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಚಹಾಲ್ ಮತ್ತು ರಿಷಭ್ ಪಂತ್​ ಮೈದಾನದಲ್ಲಿ ಕೆಲ ಕಾಲ ಸಮಯ ಕಳೆದರು. ಈ ವೇಳೆ  ರೋಹಿತ್​ ಮತ್ತು ಚಹಾಲ್​ ರಿಷಭ್​ ಬಳಿ ಊರ್ವಶಿ ಅವರನ್ನು ಹುಡುಕುತ್ತಿದ್ದೀಯಾ ಎಂದು ಕೇಳುವ ಮೂಲಕ ತಮಾಷೆ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಒಂದು ವಿಡಿಯೋ ತುಣುಕನ್ನು ವೈರಲ್ ಮಾಡುತ್ತಿದ್ದಾರೆ.
Published by:shrikrishna bhat
First published: