• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Kamran Akmal: ಕ್ರಿಕೆಟ್​ಗೆ ವಿದಾಯ ಘೋಷಿಸಿದ ಪಾಕ್​ ಆಟಗಾರ, ಕಮ್ರಾನ್ ಅಕ್ಮಲ್​ಗೆ PCB ಹೊಸ ಜವಾಬ್ದಾರಿ

Kamran Akmal: ಕ್ರಿಕೆಟ್​ಗೆ ವಿದಾಯ ಘೋಷಿಸಿದ ಪಾಕ್​ ಆಟಗಾರ, ಕಮ್ರಾನ್ ಅಕ್ಮಲ್​ಗೆ PCB ಹೊಸ ಜವಾಬ್ದಾರಿ

ಕಮ್ರಾನ್ ಅಕ್ಮಲ್

ಕಮ್ರಾನ್ ಅಕ್ಮಲ್

Kamran Akmal: ಆರೋನ್ ಫಿಂಚ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸದ ಬೆನ್ನಲ್ಲೇ ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ ಕೂಡ ನಿವೃತ್ತಿ ಘೋಷಿಸಿದ್ದಾರೆ.

  • Share this:

ಒಂದೇ ದಿನದಲ್ಲಿ ಇಬ್ಬರು ಸ್ಟಾರ್​ ಪ್ಲೇಯರ್ಸ್​​ ಕ್ರಿಕೆಟ್​ ಲೋಕಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮೊದಲು ಆರೋನ್ ಫಿಂಚ್ (Aaron Finch) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇವರ ಬೆನ್ನಲ್ಲೇ ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ (Kamran Akmal) ಕೂಡ ನಿವೃತ್ತಿ ಘೋಷಿಸಿದ್ದಾರೆ. ಅವರು ಮಂಗಳವಾರ ಅಧಿಕೃತವಾಗಿ ನಿವೃತ್ತಿ ಘೋಷಿಸಿದರು. ಅವರು ಪಾಕಿಸ್ತಾನದ ರಾಷ್ಟ್ರೀಯ ತಂಡದಿಂದ ಅವರು ಬಹಳ ಸಮಯದಿಂದ ಹೊರಗುಳಿದಿದ್ದರು. ಹೀಗಾಗಿ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಧೋನಿ (MS Dhoni) ಮತ್ತು ರೈನಾ (Raina) ರೀತಿಯಲ್ಲಿಯೇ ಬೆಳಗ್ಗೆ ಆಸ್ಟ್ರೇಲಿಯ ತಂಡದ ನಾಯಕ ಆರೋನ್ ಫಿಂಚ್ ಎಲ್ಲಾ ಫಾರ್ಮ್ಯಾಟ್‌ಗಳಿಗೆ ನಿವೃತ್ತಿ ಘೋಷಿಸಿದರು. ಬಳಿಕ ಸಂಜೆಯ ವೇಳೆಗೆ ಪಾಕಿಸ್ತಾನ ತಂಡದ ಕಮ್ರಾನ್ ಅಕ್ಮಲ್ ವಿದಾಯ ಹೇಳಿದರು.


ಕಮ್ರಾನ್ ಅಕ್ಮಲ್ ನಿವೃತ್ತಿ:


ಇನ್ನು, ಪಾಖಿಸ್ತಾನ ಕ್ರಿಕೆಟ್​ ಕಂಡ ಓರ್ವ ಉತ್ತಮ ಕ್ರಿಕೆಟಿಗ, ವಿಕೇಟ್​ ಕೀಪರ್​ ಕಮ್ರಾನ್ ಅಕ್ಮಲ್ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಅವರು ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಆದರೆ ಕಮ್ರಾನ್ ಅಕ್ಮಲ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದು ದಿನದ ಹಿಂದೆ ಆಯ್ಕೆ ಸಮಿತಿಯಲ್ಲಿ ಸ್ಥಾನ ನೀಡಿತ್ತು. ಪಾಕಿಸ್ತಾನ ಕ್ರಿಕೆಟ್ ಲೀಗ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಅವರು ಬಾಬರ್ ಆಜಮ್ ಅವರ ಫ್ರಾಂಚೈಸಿ ಪೇಶಾವರ್ ಝಲ್ಮಿಗೆ ಮಾರ್ಗದರ್ಶಕರಾಗಿ ಸೇರಿಕೊಂಡಿದ್ದಾರೆ.


ಪಾಕಿಸ್ತಾನಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಸದ್ಯ ನಾನು ಯಾವುದೇ ಸ್ವರೂಪದಲ್ಲಿ ಆಡುವುದಿಲ್ಲ. ನಾನು ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿಲ್ಲ ಎಂದಾದಲ್ಲಿ ಲೀಗ್‌ ಕ್ರಿಕೆಟ್‌ನಲ್ಲೂ ಆಡಬಾರದು. ನಾನು ಆಡಿದರೆ ಅದು ಅರ್ಹ ಆಟಗಾರನ ಸ್ಥಾನವನ್ನು ಕೆಡಿಸುತ್ತದೆ. ಆದರೆ ನನ್ನ ನಿವೃತ್ತಿ ಬಳಿಕ ಈಗ ನಾನು ಆಯ್ಕೆಗಾರ ಹಾಗೂ ಮಾರ್ಗದರ್ಶಕನಾಗಿದ್ದೇನೆ‘ ಎಂದು ಹೇಳಿದ್ದಾರೆ.


ಇದನ್ನೂ ಓದಿ: Turkey Earthquake: ಟರ್ಕಿ ಭೂಕಂಪದಲ್ಲಿ ಸಾವನ್ನಪ್ಪಿದ ಖ್ಯಾತ ಫುಟ್​ಬಾಲ್ ಆಟಗಾರ, ಅವಶೇಷಗಳಡಿ ಸಿಕ್ತು ಮೃತದೇಹ


ಕಮ್ರಾನ್ ವೃತ್ತಿ ಜೀವನ:


ಕಮ್ರಾನ್ ಅಕ್ಮಲ್ 2017 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ODI ಸ್ವರೂಪದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಕಳೆದ ಆರು ವರ್ಷಗಳಿಂದ ಪಾಕಿಸ್ತಾನ ತಂಡದಿಂದ ಹೊರಗುಳಿದಿದ್ದರು. ಅಕ್ಮಲ್ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಮ್ರಾನ್ ಅಕ್ಮಲ್ ಪಾಕಿಸ್ತಾನದ ಪರ 53 ಟೆಸ್ಟ್, 157 ODI ಮತ್ತು 58 T20 ಪಂದ್ಯಗಳನ್ನು ಆಡಿದ್ದಾರೆ. ಅಭಿಮಾನಿಗಳು ಅವರನ್ನು ಅಗ್ರ ದರ್ಜೆಯ ವಿಕೆಟ್ ಕೀಪರ್ ಎಂದೂ ನೆನಪಿಸಿಕೊಳ್ಳುತ್ತಾರೆ.


2002ರಲ್ಲಿ ಅಕ್ಮಲ್ ಪಾಕಿಸ್ತಾನ ತಂಡಕ್ಕೆ ಪದಾರ್ಪಣೆ ಮಾಡಿದರು. ಅವರು ಟೆಸ್ಟ್​ ಮಾದರಿಯಲ್ಲಿ 2648 ರನ್, ಏಕದಿನ ಮಾದರಿಯಲ್ಲಿ 3236 ರನ್ ಮತ್ತು ಟಿ20 ಮಾದರಿಯಲ್ಲಿ 987 ರನ್​ ಗಳಿಸಿದ್ದಾರೆ. ಈ ವೇಳೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ಶತಕ ಹಾಗೂ 27 ಅರ್ಧಶತಕಗಳನ್ನು ಸಿಡಿಸಿದ್ದಾರೆ.




ಪಿಂಚ್​ ಸಹ ನಿವೃತ್ತಿ:


ಇನ್ನು, ಆಸೀಸ್​ ಆಟಗಾರ ಆರೋನ್ ಪೀಮಚ್​ ಸಹ ತಮ್ಮ ನಿವೃತ್ತಿಯ ನಿರ್ಧಾರದ ಕುರಿತು ಅಧಿಕೃತವಾಗಿ ತಿಳಿಸಿದ್ದು, ‘ನಾನು 2024ರ ಟಿ 20 ವಿಶ್ವಕಪ್ ವರೆಗೆ ಆಡುವುದಿಲ್ಲ ಎಂದು ಅರಿತುಕೊಂಡಿದ್ದೇನೆ, ಇದೀಗ ವಿಶ್ವಕಪ್​ಗಾಗಿ ತಂಡವನ್ನು ಸಿದ್ಧಪಡಿಸಲು ನಾನು ಈ ನಿರ್ಧಾರ ಕೈಗೊಳ್ಳಲು ಸರಿಯಾದ ಸಮಯವಾಗಿದೆ. ನನ್ನ ಅಂತರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲ ಅಭಿಮಾನಿಗಳಿಗೆ ನಾನು ದೊಡ್ಡ ಧನ್ಯವಾದ ಹೇಳಲು ಬಯಸುತ್ತೇನೆ‘ ಎಂದು ಅವರು ಹೇಳಿದ್ದಾರೆ. ಫಿಂಚ್ ನಿವೃತ್ತಿಯಿಂದ ಆಸ್ಟ್ರೇಲಿಯ ಟಿ20ಯಲ್ಲಿ ಹೊಸ ನಾಯಕನನ್ನು ಹುಡುಕಬೇಕಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು