• Home
  • »
  • News
  • »
  • sports
  • »
  • Pakistan: ಪಾಕ್​ ತಂಡದ ಕೋಚ್​ ಆಗಿ ಅಮೆರಿಕಾ ನೀಲಿ ತಾರೆ ಡ್ಯಾನಿ ಡೇನಿಯಲ್ಸ್! 'ನೀವು ಭಾರೀ ರಸಿಕರು ಕಣ್ರೋ' ಅಂತ ಕಾಲೆಳೆದ ನೆಟ್ಟಿಗರು!

Pakistan: ಪಾಕ್​ ತಂಡದ ಕೋಚ್​ ಆಗಿ ಅಮೆರಿಕಾ ನೀಲಿ ತಾರೆ ಡ್ಯಾನಿ ಡೇನಿಯಲ್ಸ್! 'ನೀವು ಭಾರೀ ರಸಿಕರು ಕಣ್ರೋ' ಅಂತ ಕಾಲೆಳೆದ ನೆಟ್ಟಿಗರು!

ಪಾಕಿಸ್ತಾನ ಕ್ರಿಕೆಟ್​​​ ತಂಡ

ಪಾಕಿಸ್ತಾನ ಕ್ರಿಕೆಟ್​​​ ತಂಡ

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೂರನೇ ದಿನದಾಟದ ವೇಳೆ ತಪ್ಪೊಂದು ನಡೆದಿದ್ದು, ವೀಕ್ಷಕ ವಿಶ್ಲೇಷಣೆ ನೀಡುತ್ತಿದ್ದ ಬಾಜಿದ್​ ಖಾನ್​ ಟ್ರೋಲ್​​ಗೆ ಕಾರಣರಾಗಿದ್ದಾರೆ.

  • Share this:

ಪಾಕಿಸ್ತಾನ ಕ್ರಿಕೆಟ್​​​ ಸದ್ಯ ಪಿಚ್​​​ಗೆ ಸಂಬಂಧಿಸಿದ ಟೀಕೆಗಳನ್ನು ಎದುರಿಸುತ್ತಿದೆ. ಇದರ ನಡುವೆಯೇ ಮತ್ತೊಂದು ವಿಚಾರ ಭಾರೀ ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ಪಾಕ್​ ತಂಡವನ್ನು ಸಖತ್ ಟ್ರೋಲ್ ಮಾಡ್ತಿದ್ದಾರೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೂರನೇ ದಿನದಾಟದ ವೇಳೆ ತಪ್ಪೊಂದು ನಡೆದಿದ್ದು, ವೀಕ್ಷಕ ವಿಶ್ಲೇಷಣೆ ನೀಡುತ್ತಿದ್ದ ಬಾಜಿದ್​ ಖಾನ್​ ಟ್ರೋಲ್​​ಗೆ ಕಾರಣರಾಗಿದ್ದಾರೆ. ಬಾಜಿದ್ ಖಾನ್​ ಟ್ರೋಲ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ನ್ಯೂಜಿಲೆಂಡ್​ ಮಾಜಿ ಆಟಗಾರರನ ಹೆಸರನ್ನು ಮರೆತು ಹೋಗಿದ್ದರು. ಅಲ್ಲದೇ ಆಟಗಾರ ಹೆಸರಿನ ಬದಲು ಅಮೆರಿಕಾ ನೀಲಿ ಚಿತ್ರಗಳ ತಾರೆ ಹೆಸರನ್ನು ಹೇಳಿದ್ದರು. ಬಾಜಿದ್ ಖಾನ್​, ಡ್ಯಾನಿ ಮಾರಿಸನ್ ಎಂದು ಹೇಳುವ ಬದಲು ಡ್ಯಾನಿ ಡೇನಿಯಲ್ಸ್ ಎಂದು ಲೈವ್​ ಕಾಮೆಂಟ್ರಿಯಲ್ಲಿ ಹೇಳಿದ್ದರು.


ಅಂದಹಾಗೇ, ಡ್ಯಾನಿ ಡೇನಿಯಲ್ಸ್ ಅಮೆರಿಕಾ ನೀಲಿ ಚಿತ್ರಗಳ ತಾರೆಯಾಗಿದ್ದು, ಪಾಕಿಸ್ತಾನ ಮಾಜಿ ಆಟಗಾರ ಆಕೆಯ ಹೆಸರನ್ನು ಹೇಳುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ಆಕೆ ಕೂಡ ವಿಡಿಯೋಗೆ ಕಾಮೆಂಟ್​ ಮಾಡಿ ಫನ್ನಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪಾಕ್​ ತಂಡದಕ್ಕೆ ತನ್ನನ್ನು ಸೇರಿಸಿಕೊಳ್ಳುವಂತೆ ಡಿಮ್ಯಾಂಡ್ ಮಾಡಿರೋ ನಟಿ, ನನ್ನನ್ನು ತಂಡ ಕೋಚ್​​ ಆಗಿ ನೇಮಕ ಮಾಡಿ ಎಂದು ಹೇಳಿದ್ದಾರೆ.


ಬಾಜಿದ್ ಖಾನ್/ಡ್ಯಾನಿ ಡೇನಿಯಲ್ಸ್


ಇದನ್ನೂ ಓದಿ: IND vs PAK 2023: ಈ ವರ್ಷ 3 ಬಾರಿ ಮುಖಾಮುಖಿ ಆಗಲಿದೆ ಭಾರತ-ಪಾಕಿಸ್ತಾನ, ಬದ್ಧವೈರಿಗಳ ಸೆಣಸಾಟಕ್ಕೆ ಡೇಟ್​ ಫಿಕ್ಸ್!


ಬಾಜಿದ್ ಖಾನ್​ ಯಾರು?


ಬಾಜಿದ್ ಖಾನ್​​ ಪಾಕಿಸ್ತಾನ ಮಾಜಿ ಕ್ರಿಕೆಟರ್​ ಆಗಿದ್ದು, ಸದ್ಯ ವೀಕ್ಷಕ ವಿವರಣೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನ ಪರ ಒಂದು ಟೆಸ್ಟ್​, ಐದು ಏಕದಿನ ಪಂದ್ಯಗಳನ್ನು ಆಡಿರುವ ಬಾಜಿದ್​​, ಕೇವಲ 6 ಅಂತರಾಷ್ಟ್ರೀಯ ಪಂದ್ಯಗಳೊಂದಿಗೆ ವೃತ್ತಿ ಜೀವನ ಅಂತ್ಯವಾಗಿತ್ತು. ಆದರೆ ಪಾಕ್​​ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ 151 ಫಸ್ಟ್ ಕ್ಲಾಸ್​ ಕ್ರಿಕೆಟ್​ ಪಂದ್ಯಗಳನ್ನು ಆಡಿದ್ದು, 112 ಲಿಸ್ಟ್​ ಎ ಪಂದ್ಯ, 17 ಟಿ20 ಪಂದ್ಯಗಳನ್ನು ಆಡಿದ್ದಾರೆ.



ಬಾಯಿ ತಪ್ಪಿ ನೀಲಿ ತಾರೆ ಹೆಸರು ಹೇಳಿದ ಮಾಜಿ ಕ್ರಿಕೆಟಿಗ


ಇನ್ನು, ಬಾಜಿದ್​ ಬೇಕು ಅಂತ ನೀಲಿ ತಾರೆ ನಟಿಯ ಹೆಸರನ್ನು ಹೇಳಲಿಲ್ಲ. ಬಾಯಿ ತಪ್ಪಿ ಡ್ಯಾನಿ ಮಾರಿಸನ್​ ಬದಲು ಡ್ಯಾನಿ ಡೇನಿಯಲ್ಸ್ ಎಂದು ಹೇಳಿದ್ದರು. ಆದರೆ ಈ ವಿಡಿಯೋ ವೈರಲ್​ ಆದ ಕಾರಣ ಪಾಕಿಸ್ತಾನ ತಂಡವನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ.


ಇದನ್ನೂ ಓದಿ: AUS vs SA Test: ಬ್ಯಾಟಿಂಗ್​ ನಡುವೆ ಸಿಗರೇಟ್​ ಲೈಟರ್​ ಕೇಳಿದ ಅಚ್ಚರಿ ಮೂಡಿಸಿದ ಆಸೀಸ್​ ಆಟಗಾರ


ಕರಾಚಿ ಟೆಸ್ಟ್​ ಪಂದ್ಯದಲ್ಲಿ ಕಳಪೆ ಪಿಚ್​​ ಕಾರಣದಿಂದ ಪಿಸಿಬಿ, ಪಾಕಿಸ್ತಾನ ತಂಡದ ವಿರುದ್ಧ ವಿಮರ್ಶೆಗಳು ಕೇಳಿ ಬರುತ್ತಿದೆ. ಮೊದಲ ಟೆಸ್ಟ್​ ಡ್ರಾ ಆಗುತ್ತಿದ್ದಂತೆ ಕರಾಚಿಯಲ್ಲಿ ಮತ್ತೊಂದು ಪಿಚ್​ ಸಿದ್ಧಪಡಿಸಿದ್ದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್​ ಮಾಜಿ ಕ್ರಿಕೆಟಿಗ ಸೈಮನ್ ಡೌಲ್​, ಬಾಬರ್​ ಆಜಂಗಾಗಿ ಇಂತಹ ಕಳಪೆ ಪಿಚ್​​ ಸಿದ್ಧಪಡಿಸಿದ್ದೀರಾ ಎಂದು ಟೀಕೆ ಮಾಡಿದ್ದರು.



ಮೊದಲ ಇನ್ನಿಂಗ್ಸ್​ನಲ್ಲಿ 449 ರನ್​​ಗಳಿ ನ್ಯೂಜಿಲೆಂಡ್ ತಂಡ ಆಲೌಟ್​ ಆದ್ರೆ, ಎರಡನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 277 ರನ್​ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ 408 ರನ್​​ಗಳಿಗೆ ಆಲೌಟ್​ ಆಗಿತ್ತು. 319 ರನ್​ಗಳ ಬೃಹತ್ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಪಾಕಿಸ್ತಾನ ತಂಡ ರನ್ ಗಳಿಸದೆ ಎರಡು ವಿಕೆಟ್​ ಕಳೆದುಕೊಂದು ಸಂಕಷ್ಟಕ್ಕೆ ಸಿಲುಕಿದೆ. ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆಲ್ಲಲು ಶೇ.42 ರಷ್ಟು ಅವಕಾಶವಿದ್ದು, ಪಾಕ್​​ಗೆ ಗೆಲುವಿಗೆ ಶೇ.11 ರಷ್ಟು ಮಾತ್ರ ಅವಕಾಶವಿದೆ. ಉಳಿದಂತೆ ಶೇ. 48 ರಷ್ಟು ಪಂದ್ಯ ಡ್ರಾದಲ್ಲಿ ಅಂತ್ಯವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

Published by:Sumanth SN
First published: