• Home
  • »
  • News
  • »
  • sports
  • »
  • Babar Azam: ಪಾಕ್​ ಕ್ರಿಕೆಟರ್ ಬಾಬರ್ ಖಾಸಗಿ ವಿಡಿಯೋ ಲೀಕ್, ಸಹ ಆಟಗಾರನ ಪತ್ನಿ ಜೊತೆ ನಡೆಸಿದ್ರಾ ಲವ್ವಿಡವ್ವಿ?

Babar Azam: ಪಾಕ್​ ಕ್ರಿಕೆಟರ್ ಬಾಬರ್ ಖಾಸಗಿ ವಿಡಿಯೋ ಲೀಕ್, ಸಹ ಆಟಗಾರನ ಪತ್ನಿ ಜೊತೆ ನಡೆಸಿದ್ರಾ ಲವ್ವಿಡವ್ವಿ?

ಬಾಬರ್ ಅಜಮ್

ಬಾಬರ್ ಅಜಮ್

ಬಾಬರ್​ ವೈಯಕ್ತಿಕ ಫೋಟೋ ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಆದರೆ ಈ ಬಗ್ಗೆ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿವೆ. ಕೆಲವರು ಸೋರಿಕೆಯಾದ ವಿಡಿಯೋ ತುಣುಕುಗಳು ಹಾಗೂ ಫೋಟೋಗಳನ್ನು ಚಿತ್ರಗಳನ್ನು ನೋಡಿ ಬಾಬರ್ ವಿರುದ್ಧ ಕಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ಅದನ್ನು ಸ್ಟಾರ್ ಬ್ಯಾಟರ್​ ಮಾನಹಾನಿ ಮಾಡಲು ಉದ್ದೇಶಪೂರ್ವಕವಾಗಿ ಮಾಡಲಾಗಿರುವ ಷಡ್ಯಂತ್ರ ಎಂದು ಬಾಬರ್ ಪರ ನಿಂತಿದ್ದಾರೆ

ಮುಂದೆ ಓದಿ ...
  • Share this:

ಪಾಕಿಸ್ತಾನ ಕ್ರಿಕೆಟ್​ ತಂಡದ (Pakistan cricket team) ಆಟಗಾರರು ಮೈದಾನದಲ್ಲಿ ಸದ್ದು ಮಾಡಿದಷ್ಟೆ ಮೈದಾನವರೆಗೂ ಬೇರೆ ಬೇರೆ ವಿಚಾರಕ್ಕೆ ಸುದ್ದಿಯಾಗುತ್ತಿರುವತ್ತಾರೆ. ಸಾಧನೆಗಳ ಜೊತೆಗೆ ವಿವಾದಗಳನ್ನು (Controversy) ಮೈಮೇಲೆ ಎಳೆದುಕೊಂಡಿರುವ ಸಾಕಷ್ಟು ಕ್ರಿಕೆಟಿಗರ ಬಗ್ಗೆ ಕ್ರಿಕೆಟ್​ ಜಗತ್ತು ಕಂಡಿದೆ. ಪಾಕಿಸ್ತಾನದ ಎಲ್ಲಾ ಸ್ವರೂಪದ ತಂಡ ನಾಯಕ ಬಾಬರ್ ಅಜಮ್ (Babar Azam) ತಂಡದ ಸಹ ಆಟಗಾರನ ಪತ್ನಿ ಜೊತೆಗೆ ಸೆಕ್ಸ್ಟಿಂಗ್ (Sexting) ಮಾಡಿರುವ ಆರೋಪ ಕೇಳಿಬಂದಿದೆ.  ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನನ್ನ ಹೋಲುವ ವ್ಯಕ್ತಿಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲಾತಾಣದಲ್ಲಿ(Social Media) ವೈರಲ್ ಆಗುತ್ತಿವೆ.  ಪಾಕಿಸ್ತಾನ ತಂಡ ತವರಿನಲ್ಲೆ ಟೆಸ್ಟ್​ ಕ್ರಿಕೆಟ್​ನಲ್ಲಿ ನೀರಸ ಪ್ರದರ್ಶನ ತೋರಿದ ನಂತರ  ಬಾಬರ್​ ಅಜಮ್ ಭಾರಿ ಟೀಕೆಗೆ ಗುರಿಯಾಗಿದ್ದರು. ಇದೀಗ ಈ ವಿವಾದ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.


ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಬಾಬರ್ ತನ್ನ ಅದ್ಭುತ ಪ್ರದರ್ಶನ ತೋರಿದ್ದರು, ಆದರೂ ಅವರ ಆಟ ಸರಣಿಯ ಫಲಿತಾಂಶವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಪಾಕ್ ತಂಡ ಟಿ20ಯಲ್ಲಿ3-4 ಹಾಗೂ ಟೆಸ್ಟ್​ ಸರಣಿಯನ್ನ 0-3ರಲ್ಲಿ ಸೋಲು ಕಂಡಿತ್ತು. ಇನ್ನೂ ನ್ಯೂಜಿಲೆಂಡ್ ವಿರುದ್ಧವೂ ಏಕದಿನ ಸರಣಿ ಸೋಲು ಕಂಡಿತ್ತು. ಸತತ ಸರಣಿ ಸೋಲುಗಳ ನಂತರ ಬಾಬರ್​ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು.


ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗುತ್ತಿರುವ ಬಾಬರ್


ಆದರೆ ಈಗ ಕ್ರಿಕೆಟ್ ವಿಷಯದ ಬದಲಾಗಿ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಸುದ್ದಿಯಾಗುತ್ತಿದ್ದಾರೆ. ಬಾಬರ್​ ವೈಯಕ್ತಿಕ ಫೋಟೋ ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಆದರೆ ಈ ಬಗ್ಗೆ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿವೆ. ಕೆಲವರು ಸೋರಿಕೆಯಾದ ವಿಡಿಯೋ ತುಣುಕುಗಳು ಹಾಗೂ ಫೋಟೋಗಳನ್ನು ಚಿತ್ರಗಳನ್ನು ನೋಡಿ ಬಾಬರ್ ವಿರುದ್ಧ ಕಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ಅದನ್ನು ಸ್ಟಾರ್ ಬ್ಯಾಟರ್​ ಮಾನಹಾನಿ ಮಾಡಲು ಉದ್ದೇಶಪೂರ್ವಕವಾಗಿ ಮಾಡಲಾಗಿರುವ ಷಡ್ಯಂತ್ರ ಎಂದು ಬಾಬರ್ ಪರ ನಿಂತಿದ್ದಾರೆ


ಇದನ್ನೂ ಓದಿ: Babar Azam: 2048ರಲ್ಲಿ ಪಾಕ್ ಪ್ರಧಾನಿಯಾಗ್ತರಂತೆ ಬಾಬರ್ ಅಜಮ್! ಭವಿಷ್ಯ ನುಡಿದ ಗವಾಸ್ಕರ್!


ಬಾಬರ್ ಹೋಲಿಕೆ


ಪ್ರಸ್ತುತ ಈ ವೈರಲ್ ಆಗುತ್ತಿರುವ ವೀಡಿಯೊಗಳ ಸತ್ಯವೋ -ಸುಳ್ಳೋ ಎಂದು ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದರೆ ದುರದೃಷ್ಟವಶಾತ್, ವಿಡಿಯೋಗಳಲ್ಲಿ ಕಾಣಿಸುತ್ತಿರುವ ವ್ಯಕ್ತಿಯು ಪಾಕ್ ನಾಯಕನ ಹೋಲಿಕೆಯನ್ನು ಹೊಂದಿದ್ದಾನೆ. ಈ ಕಾರಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವು ಅಭಿಮಾನಿಗಳು ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಮತ್ತು ಇತರರು ವಿಶ್ಲೇಷಿಸುವಲ್ಲಿ ನಿರತರಾಗಿದ್ದಾರೆ.ರೆಕಾರ್ಡ್ ವಿಡಿಯೋದಲ್ಲೇನಿದೆ?


ಸಾಮಾಜಿಕ ಜಾಲಾರಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ತುಣುಕನ್ನು ಡಾ. ನಿಮೋ ಯಾದವ್​ ಎಂಬುವವರು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಬಾಬರ್​ ಅಜಮ್ ಪಾಕಿಸ್ತಾನ ತಂಡದ ಸಹ ಆಟಗಾರನ ಪತ್ನಿಯ ಜೊತೆಗೆ ಸೆಕ್ಸ್ಟಿಂಗ್ ಮಾಡುತ್ತಿದ್ದು, ಆಕೆ ಎಲ್ಲಿಯವರೆಗ ತನ್ನ ಜೊತೆಗೆ ಸೆಕ್ಸ್ಟಿಂಗ್ ಮಾಡುವುದನ್ನೋ ಮುಂದುವರಿಸುತ್ತಾಳೋ ಅಲ್ಲಿಯವರೆಗೆ ಆಕೆ ಪತಿ ಪಾಕಿಸ್ತಾನ ತಂಡದಲ್ಲಿ ಮುಂದುವರಿಯಲಿದ್ದಾನೆ ಎಂದು ಬಾಬರ್​ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.ಇನ್​ಸ್ಟಾಗ್ರಾಮ್​ನಲ್ಲೂ ಕೆಲವು ಪೋಸ್ಟ್ ವೈರಲ್


ಬಾಬರ್​ ಅಜಮ್​ ಎಂದು ಹೇಳಲಾಗುತ್ತಿರುವ ಫೋಟೋ, ಆಡಿಯೋ ಮತ್ತು ವೀಡಿಯೊವನ್ನು eish.arajpoot1 Instagram ಖಾತೆಯಿಂದ ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಡಲಾಗಿದೆ. ಆದರೆ, ಇದು ಕ್ರಿಕೆಟಿಗನ ಪ್ರತಿಷ್ಠೆಗೆ ಧಕ್ಕೆ ತರಲು ರಚಿಸಲಾದ ಮಾರ್ಫ್ ಮಾಡಿದ ಚಿತ್ರಗಳು, ವೀಡಿಯೊಗಳು ಎಂದು ಬಾಬರ್ ಅಜಮ್ ಬೆಂಬಲಿಗರು ಹೇಳುತ್ತಿದ್ದಾರೆ. ಶೇರ್​ ಮಾಡುತ್ತಿರುವ ಕೆಲವು ಖಾತೆಗಳಲ್ಲಿ ಬೆರಳೆಣಿಕೆಯಷ್ಟು ಫಾಲೋವರ್ಸ್​​ಗಳಿರುವುದು ಕೂಡ ಇದು ಬಾಬರ್ ಅಜಮ್ ಹೆಸರು ಕೆಡಿಸಲು ಮಾಡುತ್ತಿರುವ ಷಡ್ಯಂತ್ರ ಎನ್ನುವುದನ್ನು ಸೂಚಿಸುತ್ತಿದೆ ಎಂದು ಬಾಬರ್ ಅಭಿಮಾನಿಗಳ ವಾದವಾಗಿದೆ.


 Pakistan captain Babar Azams private videos, chats leaked on Social video
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್


ಬಾಬರ್​ ಅಜಮ್​ ವಿರುದ್ಧ ಬೆದರಿಕೆ ಆರೋಪ


ಬಾಬರ್​ ಇಂತಹ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಹಮೀಜಾ ಮುಕ್ತಾರ್ ಎಂಬ ಮಹಿಳೆಗೆ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ ಆರೋಪವನ್ನು ಈ ಹಿಂದೆ ಅಜಮ್ ಎದುರಿಸಿದ್ದರು. ಪಾಕಿಸ್ತಾನ ತಂಡದ ನಾಯಕ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಮತ್ತು ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಳು. ವರದಿಗಳ ಪ್ರಕಾರ ಆಜಮ್ ಮಹಿಳೆಗೆ ತನ್ನೊಂದಿಗೆ ಲೈಂಗಿಕ ಸಂಬಂಧವನ್ನು ಮುಂದುವರೆಸಿದರೆ, ಆಕೆಯ ಗೆಳೆಯ ಪಾಕ್ ತಂಡಕ್ಕೆ ಸೇರಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ದೂರಿನಲ್ಲಿ ಮುಕ್ತಾರ್ ಹೇಳಿದ್ದಳು ಎನ್ನಲಾಗಿತ್ತು.ಒಟ್ಟಿನಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುವ ವಿಡಿಯೋಗಳ ಆಧಾರದ ಮೇಲೆ ಯಾರೊಬ್ಬರ ಘನತೆಯನ್ನು ತೀರ್ಮಾನ ಮಾಡಲು ಸಾಧ್ಯವಿಲ್ಲ. ಇದರ ಬಗ್ಗೆ ಸ್ವತಃ ಬಾಬರ್​ ಅಜಮ್​ ಸ್ಪಷ್ಟನೆ ನೀಡಬೇಕು ಅಥವಾ ಆ ವಿಡಿಯೋದಲ್ಲಿ ಇರುವವರು ಆರೋಪ ಮಾಡಿದರೆ ಮಾತ್ರ ಇದು ಸತ್ಯವೋ ಅಥವಾ ಸುಳ್ಳೋ ಎನ್ನುವುದನ್ನು ತಿಳಿಯಬಹುದಾಗಿದೆ.

Published by:Rajesha B
First published: