• Home
  • »
  • News
  • »
  • sports
  • »
  • IND vs PAK: ಪಾಕ್​ನಲ್ಲಿ ಮ್ಯಾಚ್​ ಆಡಲ್ಲ ಅಂದಿದ್ದಕ್ಕೆ ಪಿಸಿಬಿಗೆ ಉರಿ ಉರಿ! ವಿಶ್ವಕಪ್​ಗೆ ಬರಲ್ಲ ಅಂತ ಪಟ್ಟು ಹಿಡಿದ್ರಾ?

IND vs PAK: ಪಾಕ್​ನಲ್ಲಿ ಮ್ಯಾಚ್​ ಆಡಲ್ಲ ಅಂದಿದ್ದಕ್ಕೆ ಪಿಸಿಬಿಗೆ ಉರಿ ಉರಿ! ವಿಶ್ವಕಪ್​ಗೆ ಬರಲ್ಲ ಅಂತ ಪಟ್ಟು ಹಿಡಿದ್ರಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs PAK: ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದ (ODI World Cup) ತಂಡ ಹಿಂದೆ ಸರಿಯಬಹುದು ಎಂಬ ಸುದ್ದಿ ಇದೆ ಕೇಳಿಬರುತ್ತಿದೆ.

  • Share this:

ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಭಾರತ ಕ್ರಿಕೆಟ್ (Team India) ತಂಡ ಆಡಲು ಹೋಗಲಿದೆಯೇ ಎಂಬ ಬಗ್ಗೆ ನಡೆಯುತ್ತಿರುವ ಮಾತುಕತೆಗಳು ಅಂತ್ಯಗೊಂಡಿವೆ. ಮಂಗಳವಾರ ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಅವರು ಪಾಕಿಸ್ತಾನಕ್ಕೆ ತೆರಳಿ ಭಾರತ ತಂಡ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ಮುನ್ನೆಲೆಗೆ ಬಂದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಸಹ ಪ್ರತಿಕ್ರಿಯಿಸಿದೆ ಎಂಬ ವರದಿಗಳು ಹರಿದಾಡುತ್ತಿವೆ. ಅದರಂತೆ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದ (ODI World Cup) ತಂಡ ಹಿಂದೆ ಸರಿಯಬಹುದು ಎಂಬ ಸುದ್ದಿ ಇದೆ ಕೇಳಿಬರುತ್ತಿದೆ.


ಬಿಸಿಸಿಐ ಗೆ ಟಾಂಗ್​ ಕೊಡ್ತಾ ಪಾಕ್​ ಮಂಡಳಿ?:


ಭಾರತದೊಂದಿಗೆ ಕ್ರಿಕೆಟ್ ಸಂಬಂಧವನ್ನು ಪುನಃಸ್ಥಾಪಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಎರಡೂ ತಂಡಗಳು ತಮ್ಮ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಅದೇ ಸಮಯದಲ್ಲಿ, ಟೀಂ ಇಂಡಿಯಾ ಬಹು ದೇಶಗಳ ಪಂದ್ಯಾವಳಿಗಳಲ್ಲಿ ಪಾಕಿಸ್ತಾನದ ಬದಲಿಗೆ ಬೇರೆಡೆ ಆಯೋಜಿಸಿದರೆ ಮಾತ್ರ ಆಡುತ್ತೇವೆ ಎಂದು ಹೇಳಿಕೊಂಡಿದೆ.  ಪಾಕಿಸ್ತಾನದ ಖಾಸಗಿ ವಾಹಿನಿ ಪ್ರಕಾರ, ಪಿಸಿಬಿ 2023 ರಲ್ಲಿ ಭಾರತ ಆತಿಥ್ಯ ವಹಿಸಲಿರುವ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸಬಹುದು ಎಂದು ವರದಿಯಾಗಿದೆ.


ಈಗ ಪಿಸಿಬಿ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಈ ಬಹು-ತಂಡದ ಟೂರ್ನಿಗಳಲ್ಲಿ ಪಾಕಿಸ್ತಾನ ಟೀಂ ಇಂಡಿಯಾದೊಂದಿಗೆ ಆಡದಿದ್ದರೆ ಐಸಿಸಿ ಮತ್ತು ಎಸಿಸಿ ಈವೆಂಟ್‌ಗಳಲ್ಲಿ ಭಾರಿ ಹಣದ ನಷ್ಟವಾಗಬಹುದು ಎಂದು ಅವರು ತಿಳಿದಿದ್ದಾರೆ.


ಇದನ್ನೂ ಓದಿ: Virat Kohli-Babar Azam: ವಿರಾಟ್ ಕೊಹ್ಲಿ ಜೊತೆ ಬಾಬರ್​ ಅಜಮ್ ಬ್ಯಾಟಿಂಗ್, ವೈರಲ್ ಆಯ್ತು ನೆಟ್ ಪ್ರಾಕ್ಟೀಸ್ ವಿಡಿಯೋ


ಪಾಕಿಸ್ತಾನದ ಖಾಸಗಿ ನ್ಯೂಸ್‌ನ ಮೂಲಗಳ ಪ್ರಕಾರ, ಲಾಹೋರ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಭೆ ನಡೆಯಿತು, ಇದರಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಹೇಳಿಕೆಯನ್ನು ಚರ್ಚಿಸಲಾಗಿದೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಅನ್ನು ಹೊರಕ್ಕೆ ಸ್ಥಳಾಂತರಿಸುವುದರ ಕುರಿತು ಪಿಸಿಬಿ ದೊಡ್ಡ ಹೆಜ್ಜೆ ಇಡಲಿದೆ ಎಂಬ ಸುದ್ದಿ ಹೊರಬೀಳುತ್ತಿದೆ. ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿರುವ ಜಯ್ ಶಾ ಅವರು ಎಲ್ಲಾ ನಿರ್ಧಾರಗಳನ್ನು ಸ್ವಂತವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.


ಭಾರತ-ಪಾಕ್ ಪಂದ್ಯ ನಡೆಯುವುದು ಡೌಟ್​:


ಇನ್ನು, ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ, ‘ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ನಾವು ಪಾಕಿಸ್ತಾನ ಬಿಟ್ಟು ಬೇರೆ ಸ್ಥಳದಲ್ಲಿ ಆಡುಲು ಇಚ್ಛಿಸುತ್ತೇವೆ. 2022ರ ಏಷ್ಯಾಕಪ್‌ನ ಆತಿಥ್ಯವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸಲಾಯಿತು. ಆದರೆ, ಅಲ್ಲಿನ ರಾಜಕೀಯ ಪರಿಸ್ಥಿತಿ ಸರಿಯಿಲ್ಲದ ಕಾರಣ ಯುಎಇಯಲ್ಲಿ ಟೂರ್ನಿ ನಡೆಸಲಾಯಿತು. 2023ರಲ್ಲಿ, ಈ ಪಂದ್ಯಾವಳಿಯು ಪಾಕಿಸ್ತಾನದಲ್ಲಿ 50 ಓವರ್ ಮಾದರಿಯಲ್ಲಿ ನಡೆಯಲಿದೆ. ಆದರೆ, ಬಿಸಿಸಿಐನ MGM ಸಭೆಯಲ್ಲಿ ಪಾಕಿಸ್ತಾನಕ್ಕೆ ಹೋಗುವ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ‘ ಎಂದು ತಿಳಿಸದುಬಂದಿದೆ.


ಇದನ್ನೂ ಓದಿ: Asia Cup 2023 IND vs PAK: ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಹೋಗುತ್ತಾ ಟೀಂ ಇಂಡಿಯಾ? ಬಿಗ್ ಅಪ್‌ಡೇಟ್ಸ್ ಕೊಡ್ತು ಬಿಸಿಸಿಐ!


ಮುಂದಿನ ವರ್ಷ ಪಾಕ್​ನಲ್ಲಿ ಏಷ್ಯಾಕಪ್​:


ಮುಂದಿನ ವರ್ಷ 50 ಓವರ್‌ಗಳ ಮಾದರಿಯಲ್ಲಿ ಏಷ್ಯಾ ಕಪ್ ಮತ್ತು 2025 ರಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ಪಾಕಿಸ್ತಾನದಲ್ಲಿ ನಡೆಯಲಿದೆ. ಸುಮಾರು ಒಂದು ದಶಕದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಾಕಿಸ್ತಾನಕ್ಕೆ ಮರಳಿದೆ. ಅದರ ನಂತರ, ಪಾಕಿಸ್ತಾನವು ಎರಡು ಪ್ರಮುಖ ಐಸಿಸಿ ಟೂರ್ನಿಗಳ ಆತಿಥ್ಯವನ್ನು ಪಡೆದಿರುವುದು ಇದೇ ಮೊದಲು.

Published by:shrikrishna bhat
First published: