• Home
  • »
  • News
  • »
  • sports
  • »
  • T20 WC 2022 PAK vs SA: ಆಫ್ರಿಕಾ ವಿರುದ್ಧ ಪಾಕ್​ ತಂಡಕ್ಕೆ ಭರ್ಜರಿ ಜಯ, ಟೀಂ ಇಂಡಿಯಾಗೆ ಹೆಚ್ಚಿದ ಟೆನ್ಷನ್

T20 WC 2022 PAK vs SA: ಆಫ್ರಿಕಾ ವಿರುದ್ಧ ಪಾಕ್​ ತಂಡಕ್ಕೆ ಭರ್ಜರಿ ಜಯ, ಟೀಂ ಇಂಡಿಯಾಗೆ ಹೆಚ್ಚಿದ ಟೆನ್ಷನ್

ಪಾಕಿಸ್ತಾನಕ್ಕೆ ಜಯ

ಪಾಕಿಸ್ತಾನಕ್ಕೆ ಜಯ

T20 WC 2022 PAK vs SA: ಟಿ20 ವಿಶ್ವಕಪ್‌ನ ಸೆಮಿಫೈನಲ್ ರೇಸ್ ಇನ್ನಷ್ಟು ರೋಚಕವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ಗೆಲುವಿನಿಂದ ಟೀಂ ಇಂಡಿಯಾದ ಟೆನ್ಷನ್ ಹೆಚ್ಚಾಗಿದೆ.

  • Share this:

ಟಿ20 ವಿಶ್ವಕಪ್ ನ (T20 WC 2022) ಸೆಮಿಫೈನಲ್ ರೇಸ್ ಮತ್ತಷ್ಟು ರೋಚಕವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್ (SA vs PAK) ಗೆಲುವಿನೊಂದಿಗೆ ಇದೀಗ ಟೀಂ ಇಂಡಿಯಾ (Team India) ಟೆನ್ಷನ್ ಹೆಚ್ಚಿದ್ದು, ಸೆಮಿಫೈನಲ್ ರೇಸ್ ನಲ್ಲಿ ಹೊಸ ಟ್ವಿಸ್ಟ್ ಮೂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನೊಂದಿಗೆ ಪಾಕಿಸ್ತಾನದ ಸೆಮಿಫೈನಲ್ ಸವಾಲು ಇನ್ನೂ ಮುಂದುವರೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ 33 ರನ್‌ಗಳ ಭರ್ಜರರಿ ಜಯ ಸಾಧಿಸಿದೆ. ವರುಣ ಅಡ್ಡಿಪಡಿಸಿದ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ಪ್ರಕಾರ ದಕ್ಷಿಣ ಆಫ್ರಿಕಾ 14 ಓವರ್‌ಗಳಲ್ಲಿ 9 ವಿಕೆಟ್‌ಗೆ 108 ರನ್ ಗಳಿಸಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ ನಾಲ್ಕು ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಐದು ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ ಸೆಮಿಸ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.


ಪಾಕ್ ಜಯ-ಟೀಂ ಇಂಡಿಯಾಗೆ ಟೆನ್ಷನ್:


ಭಾರತ ಸೆಮಿಫೈನಲ್ ತಲುಪಬೇಕಾದರೆ ಜಿಂಬಾಬ್ವೆ ವಿರುದ್ಧದ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಎರಡನೇ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ ತಲುಪಲಿದೆ, ಆದರೆ ಜಿಂಬಾಬ್ವೆ ಟೀಂ ಇಂಡಿಯಾವನ್ನು ಸೋಲಿಸಿದರೆ, ಭಾರತವು ಸೆಮಿಫೈನಲ್ ತಲುಪಲು ಬಾಂಗ್ಲಾದೇಶ ಪಾಕಿಸ್ತಾನ ಅಥವಾ ನೆದರ್ಲ್ಯಾಂಡ್ಸ್ ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕಾಗುತ್ತದೆ.



ಪಾಕಿಸ್ತಾನದ ನಿವ್ವಳ ರನ್ ರೇಟ್ ಹೆಚ್ಚು:


ಒಂದು ವೇಳೆ ದಕ್ಷಿಣ ಆಫ್ರಿಕಾ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿದರೆ, ಭಾರತವು ಜಿಂಬಾಬ್ವೆ ವಿರುದ್ಧ ಸೋತರೆ ಮತ್ತು ಪಾಕಿಸ್ತಾನವು ಬಾಂಗ್ಲಾದೇಶವನ್ನು ಸೋಲಿಸಿದರೆ, ದಕ್ಷಿಣ ಆಫ್ರಿಕಾ 7 ಅಂಕಗಳನ್ನು ಹೊಂದಿರುತ್ತದೆ. ಭಾರತ-ಪಾಕಿಸ್ತಾನ ತಲಾ 6 ಅಂಕಗಳನ್ನು ಹೊಂದಿರುತ್ತದೆ. ಪ್ರಸ್ತುತ, ಪಾಯಿಂಟ್ ಪಟ್ಟಿಯಲ್ಲಿ ಭಾರತಕ್ಕಿಂತ ಪಾಕಿಸ್ತಾನದ ನಿವ್ವಳ ರನ್ ರೇಟ್ ಹೆಚ್ಚಾಗಿದೆ. ಇನ್ನುಳಿದ ಪಂದ್ಯದಲ್ಲಿ ಭಾರತ ಸೋತರೆ ಮತ್ತು ಪಾಕಿಸ್ತಾನ ಬಾಂಗ್ಲಾದೇಶವನ್ನು ಸೋಲಿಸಿದರೆ, ಪಾಕಿಸ್ತಾನದ ನೆಟ್ ರನ್ ರೇಟ್ ಇನ್ನೂ ಉತ್ತಮವಾಗಿರುತ್ತದೆ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳು ಗುಂಪು-2 ರಿಂದ ಸೆಮಿಫೈನಲ್ ತಲುಪುತ್ತವೆ.


ಭಾರತಕ್ಕಾಗಿ ಮಾಡು ಇಲ್ಲವೇ ಮಡಿ:


ಈ ಅಂಕಪಟ್ಟಿ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವನ್ನಾಗಿ ಮಾಡುತ್ತದೆ. ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯಬಹುದು, ಇಲ್ಲದಿದ್ದರೆ ಅವರು ಸೆಮಿಫೈನಲ್‌ಗೆ ಮುನ್ನಡೆಯಲು ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಅವಲಂಬಿಸಬೇಕಾಗಬಹುದು.


ಭರ್ಜರಿ ಪ್ರದರ್ಶನ ನೀಡಿದ ಪಾಕ್:


ಇನ್ನು, ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಅಜಮ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಇದರ ನಂತರ, ಪಾಕಿಸ್ತಾನ 43 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು, ಆದರೆ ಇಫ್ತಿಕರ್ ಅಹ್ಮದ್ ಮತ್ತು ಶಾದಾಬ್ ಖಾನ್ ಅವರ ಆಕ್ರಮಣಕಾರಿ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ 20 ಓವರ್‌ಗಳಲ್ಲಿ 185 ರನ್ ಗಳಿಸಿತು. ಶಾದಾಬ್ ಖಾನ್ 22 ಎಸೆತಗಳಲ್ಲಿ 52 ಮತ್ತು ಇಫ್ತಿಕರ್ ಅಹ್ಮದ್ 35 ಎಸೆತಗಳಲ್ಲಿ 51 ರನ್ ಗಳಿಸಿದರು. ನಾರ್ಕಿಯಾ ಆಫ್ರಿಕಾ ಪರ 4 ವಿಕೆಟ್‌ಗಳನ್ನು ಪಡೆದರು.


ಪಾಕಿಸ್ತಾನದ ಸವಾಲನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕಳಪೆ ಆರಂಭ ಪಡೆಯಿತು. ಮೊದಲ ಓವರ್‌ನಲ್ಲಿ ಕ್ವಿಂಟನ್ ಡಿ ಕಾಕ್ ಶೂನ್ಯ ರನ್ ಗಳಿಸಿ ಔಟಾದರು. ಮಳೆಯ ಅಡಚಣೆಯಿಂದಾಗಿ ದಕ್ಷಿಣ ಆಫ್ರಿಕಾ ಗೆಲುವಿಗೆ 14 ಓವರ್‌ಗಳಲ್ಲಿ 142 ರನ್‌ಗಳ ಗುರಿಯನ್ನು ನೀಡಲಾಯಿತು, ಆದರೆ ಚೇಸಿಂಗ್‌ನಲ್ಲಿ 108/9 ಮಾತ್ರ ಸಾಧ್ಯವಾಯಿತು. ಈ ಮೂಲಕ ಪಾಕ್ ಸೆಮೀಸ್​ ಆಸೆ ಮತ್ತೆ ಚಿಗುರಿದೆ ಎನ್ನಬಹುದು.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು