• Home
  • »
  • News
  • »
  • sports
  • »
  • PAK vs NZ, T20 World Cup 2022: ನ್ಯೂಜಿಲ್ಯಾಂಡ್​ ಮನೆಗೆ, ಪಾಕಿಸ್ತಾನ ಫೈನಲ್​ಗೆ; ನಾಳೆ ಭಾರತ ಗೆದ್ರೆ ಭಾನುವಾರ ‘ಬಾಡೂಟ‘ ಫಿಕ್ಸ್!

PAK vs NZ, T20 World Cup 2022: ನ್ಯೂಜಿಲ್ಯಾಂಡ್​ ಮನೆಗೆ, ಪಾಕಿಸ್ತಾನ ಫೈನಲ್​ಗೆ; ನಾಳೆ ಭಾರತ ಗೆದ್ರೆ ಭಾನುವಾರ ‘ಬಾಡೂಟ‘ ಫಿಕ್ಸ್!

ಪಾಕಿಸ್ತಾನಕ್ಕೆ ಜಯ

ಪಾಕಿಸ್ತಾನಕ್ಕೆ ಜಯ

PAK vs NZ, T20 World Cup 2022: ಪಾಕಿಸ್ತಾನ ತಂಡವು 19.1 ಓವರ್ ಗಳಲ್ಲಿ 3  ವಿಕೆಟ್ ನಷ್ಟಕ್ಕೆ 153 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಜಯ ದಾಖಲಿಸಿ ಟಿ20 ವಿಶ್ವಕಪ್ 2022ರ ಫೈನಲ್​ಗೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದೆ.

  • Share this:

ಟಿ20 ವಿಶ್ವಕಪ್ 2022 (T20 WC 2022) ಅಂತಿಮ ಹಂತ ತಲುಪಿದೆ.  ಇಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ (NZ vs PAK) ಮೊದಲ ಸೆಮಿ ಫೈನಲ್ ಪಂದ್ಯ ಸಿಡ್ನಿಯ (Sydney) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಕಿವೀ್ಸ್ ನಿಗದಿತ 20 ಓವರ್ ಗಳಲ್ಲಿ  4 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡವು 19.1 ಓವರ್ ಗಳಲ್ಲಿ 3  ವಿಕೆಟ್ ನಷ್ಟಕ್ಕೆ 153 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಜಯ ದಾಖಲಿಸಿ ಟಿ20 ವಿಶ್ವಕಪ್ 2022ರ ಫೈನಲ್​ಗೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದೆ. ಈ ಮೂಲಕ 2009ರ ನಂತರ ವಿಶ್ವಕಪ್​ ಫೈನಲ್​ಗೆ ಪಾಕ್ ಪ್ರವೇಶಿಸಿದೆ.


ಬ್ಯಾಟಿಂಗ್​ನಲ್ಲಿ ಎಡವಿದ ಕಿವೀಸ್​:


ಇನ್ನು, ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಕಿವೀ್ಸ್ ನಿಗದಿತ 20 ಓವರ್ ಗಳಲ್ಲಿ  4 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ನ್ಯೂಜಿಲ್ಯಾಂಡ್​ ಪರ ಯಾವೊಬ್ಬ ಬ್ಯಾಟರ್ ಸಹ ಪಾಕ್ ವಿರುದ್ಧ ಭರ್ಜರಿಯಾಗಿ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ನ್ಯೂಜಿಲ್ಯಾಂಡ್ ಪರ ಫಿನ್ ಅಲೆನ್ 4 ರನ್, ಡೆವೊನ್ ಕಾನ್ವೇ 21 ರನ್, ಕೇನ್ ವಿಲಿಯಮ್ಸನ್ 46 ರನ್, ಗ್ಲೆನ್ ಫಿಲಿಪ್ಸ್ 6 ರನ್, ಡೇರಿಲ್ ಮಿಚೆಲ್ 53 ರನ್, ಜಿಮ್ಮಿ ನೀಶಮ್ 16 ರನ್ ಗಳಿಸಿದರು.


ಬಾಬರ್-ರಿಜ್ವಾನ್ ಭರ್ಜರಿ ಬ್ಯಾಟಿಂಗ್:


ಈ ಮೊತ್ತ ಬೆನ್ನಟ್ಟಿದ ಪಾಕ್​ಗೆ ಉತ್ತಮ ಆರಂಭ ದೊರಕಿತು. ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗದ ನಾಯಕ ಬಾಬರ್ ಅಜಮ್ ಇಂದು ಭರ್ಜರಿಯಾಗಿ ಕಂಬ್ಯಾಕ್ ಮಾಡಿದರು. ಅವರು 42 ಎಸೆತದಲ್ಲಿ 7 ಫೋರ್​ ಮೂಲಕ 53 ರನ್ ಮತ್ತು ಮೊಹಮ್ಮದ್ ರಿಜ್ವಾನ್ 43 ಎಸೆತದಲ್ಲಿ 5 ಬೌಂಡರಿ ಮೂಲಕ 57 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖರಾದರು. ಉಳಿದಂತೆ ಮೊಹಮ್ಮದ್ ಹ್ಯಾರಿಸ್ 30 ರನ್ ಶಾನ್ ಮಸೂಧ್ 3 ರನ್ ಗಳಿಸಿದರು.ಫೈನಲ್ ಪ್ರವೇಶಿಸಿದ ಪಾಕ್:


ಇನ್ನು, ಟಿ20 ವಿಶ್ವಕಪ್ 2022ರಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ನ್ಯೂಜಿಲ್ಯಾಂಡ್​ ತಂಡವನ್ನು 7 ವಿಕೆಟ್​ ಗಳಿಂದ ಮಣಿಸುವ ಮೂಲಕ ಈ ಬಾರಿಯ ಫೈನಲ್​ಗೆ  ಮೊದಲ ತಂಡವಾಗಿ ಎಂಟ್ರಿಕೊಟ್ಟಿದೆ. ಈ ಮೂಲಕ ನಾಳೆ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆಯೋ ಆ ತಂಡ ನೇರವಾಗಿ ಪಾಕಿಸ್ತಾನದ ಎದುರು ಫೈನಲ್ ಪೈಟ್​ನಲ್ಲಿ ಸೆಣಸಾಡಲಿದೆ.


ಇದನ್ನೂ ಓದಿ: Ind Vs Eng T20 World Cup 2022: ಭಾರತ - ಇಂಗ್ಲೆಂಡ್ ಪಂದ್ಯ; ದಿನಾಂಕ, ಸ್ಥಳ, ಲೈವ್ ಸ್ಟ್ರೀಮಿಂಗ್ ವಿವರ


ನಾಳೆ ಭಾರತ-ಇಂಗ್ಲೆಂಡ್​ ಹಣಾಹಣಿ:


ಇನ್ನು, ಈಗಾಗಲೇ ಪಾಕಿಸ್ತಾನ ಫೈನಲ್ ಪ್ರವೇಶಿಸಿದ್ದು, ನಾಳಿನ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ ಗೆದ್ದು ಪಾಕ್​ ಎದುರು ಸೆಣಸಬೇಕು ಎಂದು ಕೋಟ್ಯಾಂತರ ಭಾರತೀಯ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಾಳಿನ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಪಂದ್ಯವು ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಮಧ್ಯಾಹ್ನ 1:30 ರಿಂದ ನಡೆಯಲಿದೆ. ಪಂದ್ಯ ಆರಂಭಕ್ಕೆ ಅರ್ಧ ಗಂಟೆ ಮೊದಲು 1.00 ಗಂಟೆಗೆ ಟಾಸ್ ನಡೆಯಲಿದೆ. ಅಲ್ಲದೇ ಪಂದ್ಯದ ನೇರ ಪ್ರಸಾರವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವೀಕ್ಷಿಸಬಹುದು. ಡಿಡಿ ಸ್ಪೋರ್ಟ್ಸ್​ನಲ್ಲಿ ಉಚಿತವಾಗಿ ನೋಡಬಹುದು.

Published by:shrikrishna bhat
First published: