• Home
  • »
  • News
  • »
  • sports
  • »
  • PAK vs NZ T20 WC 2022: ಟಾಸ್​ ಗೆದ್ದ ಕಿವೀಸ್​, ಇಲ್ಲಿದೆ ಉಭಯ ತಂಡಗಳ ಅಂತಿಮ ಪ್ಲೇಯಿಂಗ್​ 11

PAK vs NZ T20 WC 2022: ಟಾಸ್​ ಗೆದ್ದ ಕಿವೀಸ್​, ಇಲ್ಲಿದೆ ಉಭಯ ತಂಡಗಳ ಅಂತಿಮ ಪ್ಲೇಯಿಂಗ್​ 11

PAK vs NZ

PAK vs NZ

PAK vs NZ T20 WC 2022: ಈಗಾಗಲೇ ಟಾಸ್​ ಗೆದ್ದಿರುವ ನ್ಯೂಜಿಲ್ಯಾಂಡ್ ತಂಡವು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಗ್ರೂಪ್-1ರ ಅಗ್ರಸ್ಥಾನಿಯಾಗಿ ನ್ಯೂಜಿಲೆಂಡ್ ಸೆಮೀಸ್ ತಲುಪಿದರೆ, ಗ್ರೂಪ್-2ರ ರನ್ನರ್ ಅಪ್ ಆಗಿ ಪಾಕಿಸ್ತಾನ ನಾಕೌಟ್ ಸ್ಥಾನ ತಲುಪಿದೆ.

  • Share this:

ಟಿ20 ವಿಶ್ವಕಪ್ 2022 (T20 WC 2022) ಅಂತಿಮ ಹಂತ ತಲುಪಿದೆ.  ಇಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ (NZ vs PAK) ಮೊದಲ ಸೆಮಿ ಫೈನಲ್ ಪಂದ್ಯ ಸಿಡ್ನಿಯ (Sydney) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಪಂದ್ಯ ಮಧ್ಯಾಹ್ನ 1:30 ಕ್ಕೆ ನೇರ ಪ್ರಸಾರವಾಗಲಿದೆ. ಈಗಾಗಲೇ ಟಾಸ್​ ಗೆದ್ದಿರುವ ನ್ಯೂಜಿಲ್ಯಾಂಡ್ ತಂಡವು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಗ್ರೂಪ್-1ರ ಅಗ್ರಸ್ಥಾನಿಯಾಗಿ ನ್ಯೂಜಿಲೆಂಡ್ ಸೆಮೀಸ್ ತಲುಪಿದರೆ, ಗ್ರೂಪ್-2ರ ರನ್ನರ್ ಅಪ್ ಆಗಿ ಪಾಕಿಸ್ತಾನ ನಾಕೌಟ್ ಸ್ಥಾನ ತಲುಪಿದೆ. ಅಲ್ಲದೇ ಟಾಸ್​ ಇಂದು ಮಹತ್ವದ ಪಾತ್ರ ನಿರ್ವಹಿಸಲಿದ್ದು, ಅಂತಿಮ ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ನೋಡಬೇಕಿದೆ.


ಪಿಚ್ ವರದಿ:


ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಟಿ20 ವಿಶ್ವಕಪ್ 2022ರ ಸೆಮಿ ಫೈನಲ್ ನಲ್ಲಿ ಸಿಡ್ನಿ ಮೈದಾನದಲ್ಲಿ ಮುಖಾಮುಖಿ ಆಗುತ್ತಿದೆ. ಈ ಪಿಚ್ ಒಂದು ಮೇಲ್ಮೈಯಾಗಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಟರ್‌ಗಳಿಗೆ ಸಹಾಯ ಮಾಡಿದೆ, ಸರಾಸರಿ ಸ್ಕೋರ್ 150. ಮೊದಲು ಬ್ಯಾಟಿಂಗ್ ಮಾಡಿದ ತಂಡವು ಈ ಸ್ಥಳದಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆದ್ದಿದೆ ಮತ್ತು ಈ ಪಂದ್ಯದಲ್ಲೂ ಅದೇ ನಿರೀಕ್ಷೆಯಿದೆ. ಆದರೆ ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಪಂದ್ಯ ಮತ್ತಷ್ಟು ರೋಚಕವಾಗಿರಲಿದೆ.ಪಾಕಿಸ್ತಾನ-ಕಿವೀಸ್​ ಹೆಡ್​ ಟು ಹೆಡ್​:


ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ 28 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ವೇಳೆ ಕಿವೀ ತಂಡದ ವಿರುದ್ಧ ಪಾಕ್ ತಂಡದ ಅಬ್ಬರ ಜೋರಾಗಿದೆ. ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ 17 ಪಂದ್ಯಗಳನ್ನು ಗೆದ್ದಿದೆ. ಆದರೆ ನ್ಯೂಜಿಲೆಂಡ್ ಪಾಕಿಸ್ತಾನ ವಿರುದ್ಧ 11 ಪಂದ್ಯಗಳನ್ನು ಗೆದ್ದಿದೆ.


ಇದನ್ನೂ ಓದಿ: PAK vs NZ: ಇಂದು ಪಾಕ್​-ಕಿವೀಸ್​ ಸೆಮೀಸ್​ ಫೈಟ್​, ಪಾಕಿಸ್ತಾನದಲ್ಲಿ ಸರ್ಕಾರಿ ರಜೆ ಘೋಷಣೆ


ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು 6 ಬಾರಿ ಮುಖಾಮುಖಿಯಾಗಿದ್ದವು. ಪಾಕಿಸ್ತಾನ 4 ಬಾರಿ ಮತ್ತು ಕಿವೀಸ್ 2 ಬಾರಿ ಗೆದ್ದಿವೆ. ಅಲ್ಲದೆ ಕಳೆದ 5 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ 4 ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲೆಂಡ್ ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ODI ಮತ್ತು T20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಈ ಎರಡು ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದವು. ಪಾಕಿಸ್ತಾನವು ಎಲ್ಲದರಲ್ಲಿಯೂ ಗೆದ್ದಿದೆ.


PAK vs NZ ಅಂತಿಮ ತಂಡ:


ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್ (ವಾಕ್), ಬಾಬರ್ ಅಜಮ್ (ಸಿ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರೌಫ್ ಮತ್ತು ಶಾಹೀನ್ ಶಾ ಆಫ್ರಿದಿ.


ಇದನ್ನೂ ಓದಿ: Ind Vs Eng T20 World Cup 2022: ಇಂಗ್ಲೆಂಡ್​-ಟೀಂ ಇಂಡಿಯಾ ನಡುವೆ ನಾಳೆ ಬಿಗ್ ಫೈಟ್​, ಅಕ್ಷರ್​ ಬದಲು ಸ್ಪಿನ್ ಮಾಂತ್ರಿಕನಿಗೆ ಸಿಗುತ್ತಾ ಚಾನ್ಸ್?


ನ್ಯೂಜಿಲ್ಯಾಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ (wk), ಕೇನ್ ವಿಲಿಯಮ್ಸನ್ (c), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

Published by:shrikrishna bhat
First published: