• Home
  • »
  • News
  • »
  • sports
  • »
  • PAK vs ENG: ಪಾಕ್​ನಲ್ಲಿ ಇಂಗ್ಲೆಂಡ್ ತಂಡದ ಮೇಲೆ ವೈರಸ್ ದಾಳಿ, ಪಂದ್ಯಕ್ಕೂ ಮುನ್ನ ಅರ್ಧದಷ್ಟು ಮಂದಿ ಅಸ್ವಸ್ಥರು

PAK vs ENG: ಪಾಕ್​ನಲ್ಲಿ ಇಂಗ್ಲೆಂಡ್ ತಂಡದ ಮೇಲೆ ವೈರಸ್ ದಾಳಿ, ಪಂದ್ಯಕ್ಕೂ ಮುನ್ನ ಅರ್ಧದಷ್ಟು ಮಂದಿ ಅಸ್ವಸ್ಥರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

PAK vs ENG: ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ 3 ಟೆಸ್ಟ್ ಪಂದ್ಯಗಳ ಸರಣಿ ಡಿಸೆಂಬರ್ 1 ರಿಂದ ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ವೈರಸ್ ಕಾಟ ಹೆಚ್ಚಿದೆ.

  • Share this:

ಪಾಕಿಸ್ತಾನ ಮತ್ತು ಇಂಗ್ಲೆಂಡ್ (PAK vs ENG) ನಡುವಿನ 3 ಟೆಸ್ಟ್ ಪಂದ್ಯಗಳ ಸರಣಿ ಡಿಸೆಂಬರ್ 1 ರಿಂದ (ಇಂದಿನಿಂದ) ರಾವಲ್ಪಿಂಡಿಯಲ್ಲಿ ಆರಂಭವಾಗಿದೆ. ಅದಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ವೈರಸ್ ಕಾಟ ಹೆಚ್ಚಾಗಿದೆ. ಇದರಿಂದ 14 ಆಟಗಾರರ ಸ್ಥಿತಿ ಹದಗೆಟ್ಟಿದೆ. ನಾಯಕ ಬೆನ್ ಸ್ಟೋಕ್ಸ್ (Ben Stokes), ಮೊಯಿನ್ ಅಲಿ (Moeen Ali ) ಸೇರಿದಂತೆ ಅನೇಕ ಆಟಗಾರರ ಆರೋಗ್ಯ ಸರಿಯಿಲ್ಲ. ತಂಡದಲ್ಲಿ ಕೇವಲ 5 ಇಂಗ್ಲೆಂಡ್ ಆಟಗಾರರಿಗೆ ಈ ವೈರಸ್‌ ಕಾಟಕ್ಕೆ ಒಳಗಾಗಿಲ್ಲ. ಇದರಲ್ಲಿ ಜ್ಯಾಕ್ ಕ್ರೌಲಿ, ಕೀಟನ್ ಜೆನ್ನಿಂಗ್ಸ್, ಹ್ಯಾರಿ ಬ್ರೂಕ್, ಜೋ ರೂಟ್, ಓಲಿ ಪೋಪ್ ಸೇರಿದ್ದಾರೆ.


ಪಾಕಿಸ್ತಾನ ವಿರುದ್ಧದ ರಾವಲ್ಪಿಂಡಿ ಟೆಸ್ಟ್‌ಗೆ ಇಂಗ್ಲೆಂಡ್ ಒಂದು ದಿನದ ಹಿಂದೆ ಆಡುವ ಹನ್ನೊಂದನ್ನು ಘೋಷಿಸಿತ್ತು. ಅವರ ಆಡುವ ಹನ್ನೊಂದು ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಯಿತು. ಈ ಪೈಕಿ 7 ಆಟಗಾರರು ಈಗ ಈ ವೈರಸ್‌ನ ಪ್ರಭಾವಕ್ಕೆ ಒಳಗಾಗಿದ್ದಾರೆ. ಇದರಲ್ಲಿ ಬೆನ್ ಡಕೆಟ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟನ್, ಬೆನ್ ಫೋಕ್ಸ್, ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್ ಸೇರಿದ್ದಾರೆ.


ಆಂಗ್ಲರಿಗೆ ಪಾಕ್​ ನೆಲದಲ್ಲಿ ವೈರಸ್ ಕಾಟ:


ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ವಕ್ತಾರರ ಪ್ರಕಾರ, ಈ ವೈರಸ್ ಕೊರೋನಾಗೆ ಸಂಬಂಧಿಸಿಲ್ಲ. ಕ್ರೀಡಾಪಟುಗಳು ವಾಂತಿ, ಬೇಧಿಯಿಂದ ಬಳಲುತ್ತಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ವೈರಸ್‌ನ ಪರಿಣಾಮ ಕಡಿಮೆಯಾಗಲಿದೆ ಎಂದು ಭಾವಿಸುತ್ತೇವೆ. ಆದರೆ ಬುಧವಾರ ಅಭ್ಯಾಸ ನಡೆಸಿದಾಗ ಕೆಲ ಆಟಗಾರರು ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದಿದ್ದರು. ತಂಡದ ವಕ್ತಾರ ಡ್ಯಾನಿ ರೂಬೆನ್ ಆಟಗಾರನ ಅನಾರೋಗ್ಯದ ಬಗ್ಗೆ ವಿವರಿಸಲಿಲ್ಲ. ಎಷ್ಟು ಮಂದಿ ಇಂಗ್ಲೆಂಡ್ ಆಟಗಾರರು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿಲ್ಲ. ಆದರೆ ಅಸ್ವಸ್ಥರಾಗಿರುವ ಆಟಗಾರರಿಗೆ ವಿಶ್ರಾಂತಿಗಾಗಿ ಹೋಟೆಲ್‌ನಲ್ಲಿಯೇ ಇರುವಂತೆ ಸೂಚಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದರು.


ಟ್ರೋಫಿ ಅನಾವರಣ ಕಾರ್ಯಕ್ರಮ ಮುಂದೂಡಿಕೆ:


ಸ್ಟೋಕ್ಸ್ ಅನುಪಸ್ಥಿತಿಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸರಣಿಗಾಗಿ ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ಮುಂದೂಡಿತ್ತು. ಹೀಗಾಗಿ ಇಂದು ಟೆಸ್ಟ್‌ಗೆ ಟಾಸ್‌ಗೂ ಮುನ್ನ ಟ್ರೋಫಿ ಅನಾವರಣ ಮಾಡಲಾಗಿದೆ. ಮೂರು ಟೆಸ್ಟ್‌ಗಳ ಸರಣಿಗೆ ಇಂಗ್ಲೆಂಡ್ ತಂಡವನ್ನು ಈಗಾಗಲೇ ಪ್ರಕಟಿಸಿದೆ. ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್ ಇದರಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಜಾಕ್ ಕ್ರೌಲಿ ಅವರೊಂದಿಗೆ ಬೆನ್ ಡಕೆಟ್ ಇನ್ನಿಂಗ್ಸ್ ತೆರೆಯಲಿದ್ದಾರೆ.


ಇದನ್ನೂ ಓದಿ: IND vs BAN: ಟೀಂ ಇಂಡಿಯಾ ಮುಂದಿನ ಸರಣಿ ಯಾರ ವಿರುದ್ಧ? ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ


ಪಾಕಿಸ್ತಾನ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಇಸ್ಲಾಮಾಬಾದ್‌ನ ಸೆರೆನಾ ಹೋಟೆಲ್‌ಗೆ ಬಂದಿಳಿದಿದೆ. ಈ ಪ್ರವಾಸಕ್ಕೆ ತಂಡವು ಎಲ್ಲಾ ಅಗತ್ಯ ಕಾಳಜಿಯನ್ನು ತೆಗೆದುಕೊಂಡಿದೆ. ಜೊತೆಗೆ ಬಾಣಸಿಗನನ್ನೂ ಕರೆತಂದಿದ್ದಾರೆ. ಇಷ್ಟೆಲ್ಲಾ ಕಾಳಜಿ ವಹಿಸಿದರೂ ಅವರ ಸ್ಥಿತಿ ಹದಗೆಟ್ಟಿದೆ. ಈ ಹಿಂದೆಯೂ ಟಿ20 ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್ ತಂಡ ಟಿ20 ಸರಣಿಗಾಗಿ ಪಾಕಿಸ್ತಾನಕ್ಕೆ ಬಂದಿದ್ದಾಗ ಆಟಗಾರರ ಆರೋಗ್ಯ ಹದಗೆಟ್ಟಿತ್ತು. ಆಗ ಮೊಯಿನ್ ಅಲಿ ಅವರು ಆಟಗಾರರಿಗೆ ನೀಡುವ ಆಹಾರ ಕೆಟ್ಟದಾಗಿದೆ ಎಂದು ಹೇಳಿತ್ತು. ಅದಕ್ಕಾಗಿಯೇ ಈ ಬಾರಿ ಇಂಗ್ಲೆಂಡ್ ತಂಡ ಪಾಕ್ ಪ್ರವಾಸಕ್ಕೆ ಬಾಣಸಿಗರೊಂದಿಗೆ ಆಗಮಿಸಿದೆ.


PAK vs ENG ಪ್ಲೇಯಿಂಗ್​ 11:


ಇಂಗ್ಲೆಂಡ್​ ಪ್ಲೇಯಿಂಗ್​ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ವಿಲ್ ಜ್ಯಾಕ್ಸ್, ಜ್ಯಾಕ್ ಲೀಚ್, ಆಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್.


ಪಾಕಿಸ್ತಾನ​ ಪ್ಲೇಯಿಂಗ್​ 11: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ನಸೀಮ್ ಶಾ, ಹಾರಿಸ್ ರೌಫ್, ಮೊಹಮ್ಮದ್ ಅಲಿ, ಜಾಹಿದ್ ಮಹಮೂದ್.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು