• Home
  • »
  • News
  • »
  • sports
  • »
  • ENG vs PAK Final: ಟಿ20ಯಲ್ಲಿ ನಡೆಯದ ಪಾಕ್ ಆಟ, ಇಂಗ್ಲೆಂಡ್‌ಗೆ ವಿಶ್ವಕಪ್ ಕಿರೀಟ! 2ನೇ ಬಾರಿ ಗೆದ್ದು ಬೀಗಿದ ಆಂಗ್ಲರು!

ENG vs PAK Final: ಟಿ20ಯಲ್ಲಿ ನಡೆಯದ ಪಾಕ್ ಆಟ, ಇಂಗ್ಲೆಂಡ್‌ಗೆ ವಿಶ್ವಕಪ್ ಕಿರೀಟ! 2ನೇ ಬಾರಿ ಗೆದ್ದು ಬೀಗಿದ ಆಂಗ್ಲರು!

ಟಿ20 ವಿಶ್ವಕಪ್​ 2022 ಗೆದ್ದ ಇಂಗ್ಲೆಂಡ್​

ಟಿ20 ವಿಶ್ವಕಪ್​ 2022 ಗೆದ್ದ ಇಂಗ್ಲೆಂಡ್​

PAK vs ENG T20 World Cup 2022: ಇಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ 2022 ಫೈನಲ್ ಕಾದಾಟದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಿದವು. ಈ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್​ ಭರ್ಜರಿ ಜಯ ದಾಖಲಿಸುವ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್​ ಅನ್ನು ಗೆದ್ದು ಬೀಗಿದೆ. 

ಮುಂದೆ ಓದಿ ...
  • Share this:

ಇಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ 2022 (T20 World Cup 2022) ಫೈನಲ್ ಕಾದಾಟದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ (ENG vs PAK) ತಂಡಗಳು ಸೆಣಸಾಡಿದವು. ಈ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್​ ಭರ್ಜರಿ ಜಯ ದಾಖಲಿಸುವ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್​ ಅನ್ನು ಗೆದ್ದು ಬೀಗಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ (Pakistan) ತಂಡವು 137 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ (England)​ ತಂಡ ನಿಗದಿತ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 139 ರನ್ ಗಳಿಸುವ ಮೂಲಕ ಟಿ20 ವಿಶ್ವಕಪ್​ 2022ಗೆ ಮುತ್ತಿಕ್ಕಿದೆ.


2ನೇ ಬಾರಿ ವಿಶ್ವಕಪ್​ ಗೆದ್ದ ಆಂಗ್ಲರು:


ಪಾಕಿಸ್ತಾನ ನೀಡದ 138 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೂ ಸಹ ಆರಂಭಿಕ ಆಘಾತ ಉಂಟಾಯಿತು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಅಲೇಕ್ಸ್ ಹೇಲ್ಸ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ ನಾಯಕ ಜೋಸ್ ಬಟ್ಲರ್ 26 ರನ್ ಗಳಿಸಿ ಔಟ್​ ಆಗುವ ಮೂಲಕ ತಂಡಕ್ಕೆ ಆರಂಭಿಕ ಆಘಾತ ಆಯಿತು. ಆದರೆ ಏಕದಿನ ವಿಶ್ವಕಪ್​ ಹೀರೋ ಬೆನ್ ಸ್ಟೋಕ್ಸ್ 49 ಎಸೆತದಲ್ಲಿ 1 ಸಿಕ್ಸ್ 5 ಪೋರ್​ಗಳ ಮೂಲಕ 52 ರನ್ ಗಳಿಸಿ ತಂಡದ ಗೆಲುವಿನಲ್ಲಿ ಹೀರೋ ಆಗಿ ಹೊರಹೊಮ್ಮಿದರು. ನಂತರ ಫಿಲ್ ಸಾಲ್ಟ್ 10 ರನ್, ಹ್ಯಾರಿ ಬ್ರೋಕ್ 20 ರನ್,  ಮೋಯಿನ್ ಅಲಿ 19 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.



ಇಂಗ್ಲೆಂಡ್​ ಪರ ಮತ್ತೆ ಹೀರೋ ಆದ ಬೆನ್​ ಸ್ಟೋಕ್ಸ್:


ಹೌದು, ಒಂದು ಹಂತದಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿತ್ತು. ಆದರೆ ಇಂಗ್ಲೆಂಡ್​ ತಂಡದ ಸ್ಟಾರ್​ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆಮಗ್ಲರಿಗೆ 2ನೇ ಬಾರಿಗೆ ವಿಶ್ವಕಪ್​ ಒಲಿಯಿತು. ಏಕದಿನ ವಿಶ್ವಕಪ್​ನಲ್ಲಿ ಕೊನೆಯವರೆಗೂ ನಿಂತು ತಂಡವನ್ನು ಗೆಲ್ಲಿಸಿದ ರೀತಿಯಲ್ಲಿ ಈ ಬಾರಿಯೀ ಸ್ಟೋಕ್ಸ್ ಏಕಾಂಗಿಯಾಗಿ ನಿಂತು ತಂಡವನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಆಂಗ್ಲರ ಪರ ಹೀರೋ ಆಗಿ ಮಿಂಚಿದರು.


ಸಾಧಾರಣ ಮೊತ್ತದ ಟಾರ್ಗೆಟ್ ನೀಡಿದ್ದ ಪಾಕ್:


ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ  ಪಾಕಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಇನ್ನು, ಪಾಕಿಸ್ತಾನ ಪರ ಮಹತ್ವದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಬೇಗ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರೆ, ಆಂಗ್ಲರ ದಾಳಿಗೆ ಪಾಕ್​ ತತ್ತರಿಸಿ ಹೋಯಿತು. ಪಾಖ್ ಪರ ಮೊಹಮ್ಮದ್ ರಿಜ್ವಾನ್ 15 ರನ್, ಬಾಬರ್ ಅಜಮ್ 32 ರನ್, ಮೊಹಮ್ಮದ್ ಹ್ಯಾರಿಸ್ 8 ರನ್, ಶಾನ್ ಮಸೂದ್ 38 ರನ್, ಇಫ್ತಿಕರ್ ಅಹ್ಮದ್ ಶೂನ್ಯ, ಶಾದಾಬ್ ಖಾನ್ 20 ರನ್, ಮೊಹಮ್ಮದ್ ನವಾಜ್ 5 ರನ್, ಮೊಹಮ್ಮದ್ ವಾಸಿಂ 4 ರನ್, ಶಾಹೀನ್ ಶಾ ಆಫ್ರಿದಿ 5 ರನ್ ಮತ್ತು ಹ್ಯಾರಿಸ್ ರೌಫ್ 1 ರನ್ ಗಳಿಸಿ ಔಟಾಗದೇ ಉಳಿದರು.


ಇದನ್ನೂ ಓದಿ: ENG vs PAK Final: ಒಂದೇ ಒಂದು ಮಾತಿನಿಂದ ಟೀಂ ಇಂಡಿಯಾ ಅಭಿಮಾನಿಗಳ ಮನ ಗೆದ್ದ ಬಟ್ಲರ್


ಸಂಘಟಿತ ಬೌಲಿಂಗ್ ಮಾಡಿದ ಪಾಕಿಸ್ತಾನ:


ಇನ್ನು, ಪಂದ್ಯದಲ್ಲಿ ಸಾಧಾರಣ ಮೊತ್ತವನ್ನು ಕಲೆಹಾಕಿದರೂ ಸಹ ಪಂದ್ಯವನ್ನು ರೋಚಕ ಹಂತದವರೆಗೆ ಪಾಕ್​ ಬೌಲರ್​ಗಳು ತೆಗೆದುಕೊಂಡು ಹೋದರು. ಪಾಕಿಸ್ತಾನದ ಪರ ಹ್ಯಾರಿಸ್​ ರೂಪ್ 2 ವಿಕೆಟ್​ ಪಡೆದರೆ ಮೊಹಮ್ಮದ್ ವಾಸಿಮ್, ಶಾಬಾಜ್ ಖಾನ್ ಮತ್ತು ಅಫ್ರಿದಿ ತಲಾ 1 ವಿಕೆಟ್ ಪಡೆದು ಮಿಂಚಿದರೂ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಲಿಲ್ಲ.

Published by:shrikrishna bhat
First published: