• Home
  • »
  • News
  • »
  • sports
  • »
  • PAK vs BAN: ಬಾಂಗ್ಲಾ ವಿರುದ್ಧ ರೋಚಕ ಜಯ, ಸೆಮೀಸ್​ಗೆ ಎಂಟ್ರಿಕೊಟ್ಟ ಪಾಕ್​

PAK vs BAN: ಬಾಂಗ್ಲಾ ವಿರುದ್ಧ ರೋಚಕ ಜಯ, ಸೆಮೀಸ್​ಗೆ ಎಂಟ್ರಿಕೊಟ್ಟ ಪಾಕ್​

ಪಾಕಿಸ್ತಾನಕ್ಕೆ ಗೆಲುವು

ಪಾಕಿಸ್ತಾನಕ್ಕೆ ಗೆಲುವು

PAK vs BAN: ಪಾಕಿಸ್ತಾನ ತಂಡವು ನಿಗದಿತ 18.1 ಓವರ್​ ಗಳಲ್ಲಿ 5  ವಿಕೆಟ್ ನಷ್ಟಕ್ಕೆ 128 ರನ್ ಗಳಿಸುವ ಮೂಲಕ 5 ವಿಕೆಟ್​ ಗಳಿಂದ ಜಯ ದಾಖಲಿಸಿ ಸೆಮಿ ಫೈನಲ್​ಗೆ ಎಂಟ್ರಿ ನೀಡಿದೆ. ಈ ಮೂಲಕ ಗ್ರೂಪ್ 2ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮೀಸ್​ ತಲುಪಿದಂತಾಗಿದೆ.

  • Share this:

ಟಿ20 ವಿಶ್ವಕಪ್‌ನಲ್ಲಿ (T20 WC 2022) ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಪಂದ್ಯದಲ್ಲಿ (PAK vs BAN) ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಮೊದಲು ಆಡಿದ ತಂಡ 8 ವಿಕೆಟ್‌ಗೆ 127 ರನ್ ಗಳಿಸಿತು. ವೇಗಿ ಶಾಹೀನ್ ಅಫ್ರಿದಿ 4 ವಿಕೆಟ್ ಪಡೆದರು. ಈ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡವು ನಿಗದಿತ 18.1 ಓವರ್​ ಗಳಲ್ಲಿ 5  ವಿಕೆಟ್ ನಷ್ಟಕ್ಕೆ 128 ರನ್ ಗಳಿಸುವ ಮೂಲಕ 5 ವಿಕೆಟ್​ ಗಳಿಂದ ಜಯ ದಾಖಲಿಸಿ ಸೆಮಿ ಫೈನಲ್​ಗೆ ಎಂಟ್ರಿ ನೀಡಿದೆ. ಈ ಮೂಲಕ ಗ್ರೂಪ್ 2ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮೀಸ್​ ತಲುಪಿದಂತಾಗಿದೆ.


ಸೆಮೀಸ್​ಗೆ ಎಂಟ್ರಿಕೊಟ್ಟ ಪಾಕ್​:


ಅಲ್ಪ ಗುರಿಯೊಂದಿಗೆ ಕಣಕ್ಕಿಳಿದ ಪಾಕಿಸ್ತಾನಕ್ಕೆ ಆರಂಭಿಕರಾದ ಬಾಬರ್ ಅಜಮ್ (25) ಮತ್ತು ರಿಜ್ವಾನ್ ಉತ್ತಮ ಆರಂಭ ನೀಡಿದರು. ರಿಜ್ವಾನ್ ಹಿಡಿದ ಕ್ಯಾಚ್ ಅನ್ನು ಬಾಂಗ್ಲಾ ವಿಕೆಟ್ ಕೀಪರ್ ನೂರುಲ್ ಹಸನ್ ಕೈಬಿಟ್ಟರು. ರಿಜ್ವಾನ್ ಬದುಕುಳಿದು ಉತ್ತಮ ಇನ್ನಿಂಗ್ಸ್ ಆಡಿದರು. ಆದರೆ ಹ್ಯಾರಿಸ್ ಕ್ರೀಸ್ ಗೆ ಬಂದು ಅದ್ಧೂರಿ ಹೊಡೆತಗಳನ್ನು ಆಡುತ್ತಿದ್ದಂತೆ ಪಾಕಿಸ್ತಾನ ಗೆಲುವಿನ ಸನಿಹ ಬಂದಿತ್ತು. ಕೊನೆಗೆ ಹ್ಯಾರಿಸ್ ಹಾಗೂ ಇಫ್ತಿಕರ್ ಅಹ್ಮದ್ ಔಟಾಗಿದ್ದು ಪಾಕಿಸ್ತಾನ ಪಾಳಯದಲ್ಲಿ ಆತಂಕ ಮೂಡಿಸಿತ್ತು.  ಆದರೆ ಶಾನ್ ಮಸೂದ್ ಕೊನೆಯವರೆಗೂ ಉಳಿದು ತಂಡವನ್ನು ಗೆಲ್ಲಿಸಿದರು.ಬ್ಯಾಟಿಂಗ್​ನಲ್ಲಿ ಎಡವಿದ ಬಾಂಗ್ಲಾ:


ಇನ್ನು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 8 ವಿಕೆಟ್‌ಗೆ 127 ರನ್ ಗಳಿಸಿತು. ಬಾಂಗ್ಲಾ ಬ್ಯಾಟಿಂಗ್ ನಲ್ಲಿ ನಜ್ಮುಲ್ ಶಾಂಟೊ (48 ಎಸೆತಗಳಲ್ಲಿ 54; 7 ಬೌಂಡರಿ) ಮಾತ್ರ ಮಿಂಚಿದರು. ಸೌಮ್ಯ ಸರ್ಕಾರ್ (20). ಕೊನೆಯಲ್ಲಿ ಅಫೀಫ್ ಹುಸೇನ್ (20 ಎಸೆತಗಳಲ್ಲಿ ಔಟಾಗದೆ 24; 3 ಬೌಂಡರಿ) ದಿಟ್ಟ ಬ್ಯಾಟಿಂಗ್ ನಡೆಸಿದರು. ಅಲ್ಲದೇ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾದೇಶಕ್ಕೆ ಕಳೆದ ಪಂದ್ಯದಂತೆ ಉತ್ತಮ ಆರಂಭ ಸಿಗಲಿಲ್ಲ. ಸ್ವಿಂಗ್‌ನಲ್ಲಿದ್ದ ಲಿಟ್ಟನ್ ದಾಸ್ (10) ಅವರನ್ನು ಶಾಹೀನ್ ಆಫ್ರಿದಿ ಸಿಕ್ಸರ್‌ನೊಂದಿಗೆ ಔಟ್ ಮಾಡಿದರು. ನಂತರದ ಎಸೆತದಲ್ಲಿಯೇ ಶಕಿಬುಲ್ ಹಸನ್ (0) ಟಿವಿ ಅಂಪೈರ್‌ನ ವಿವಾದಾತ್ಮಕ ನಿರ್ಧಾರಕ್ಕೆ ಎಲ್ಬಿ ರೂಪದಲ್ಲಿ ಪೆವಿಲಿಯನ್ ತಲುಪಿದರು.


ಇದನ್ನೂ ಓದಿ: Danushka Gunathilaka: ಅತ್ಯಾಚಾರ ಆರೋಪ, ಶ್ರೀಲಂಕಾದ ಸ್ಟಾರ್​ ಬ್ಯಾಟ್ಸ್​ಮನ್ ಧನುಷ್ಕಾ ಗುಣತಿಲಕ​ ಬಂಧನ


ಸೆಮೀಸ್​ ಅಂಕಪಟ್ಟಿ:


ಗ್ರೂಪ್ 1 ರಿಂದ ನ್ಯೂಜಿಲೆಂಡ್ ವಿಜೇತರಾಗಿ. ಇಂಗ್ಲೆಂಡ್ ರನ್ನರ್ ಅಪ್ ಆಗಿ ಸೆಮಿಫೈನಲ್ ತಲುಪಿತು. ಗ್ರೂಪ್ 2 ರಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮಿಸ್ ತಲುಪಿದವು. ಆದರೆ ಗ್ರೂಪ್ 2ರಲ್ಲಿ ಟಾಪರ್ ಯಾರು, ಎರಡನೇ ಸ್ಥಾನ ಯಾರು ಎಂಬುದು ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದ ನಂತರವಷ್ಟೇ ತಿಳಿಯಲಿದೆ.  ಜಿಂಬಾಬ್ವೆ ವಿರುದ್ಧ ಭಾರತ ಗೆದ್ದರೆ 8 ಅಂಕಗಳೊಂದಿಗೆ ಗ್ರೂಪ್ 2ರಲ್ಲಿ ಭಾರತ ಅಗ್ರಸ್ಥಾನದಲ್ಲಿ ಸೆಮೀಸ್​ ತಲುಪಲಿದೆ. ಸೋತರೆ ಪಾಕಿಸ್ತಾನ ಮತ್ತು ಭಾರತ 6 ಅಂಕಗಳೊಂದಿಗೆ ಸಮಬಲಗೊಳ್ಳಲಿವೆ. ಆದರೆ, ನಿವ್ವಳ ರನ್ ರೇಟ್‌ನಲ್ಲಿ ಪಾಕ್ ಟಾಪ್ ಸ್ಥಾನಕ್ಕೇರಲಿದೆ. ಈಗಾಗಲೇ ಟಾಸ್​ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದು, ಕಾರ್ತಿಕ್ ಬದಲಿಗೆ ಪಂತ್​ಗೆ ಅವಕಾಶ ನೀಡಲಾಗಿದೆ.

Published by:shrikrishna bhat
First published: