ಭಾರತ-ಇಂಗ್ಲೆಂಡ್ 2ನೇ ಟೆಸ್ಟ್​; ಮಳೆಯಿಂದ ಮೊದಲ ದಿನದಾಟ ರದ್ದು

news18
Updated:August 9, 2018, 9:46 PM IST
ಭಾರತ-ಇಂಗ್ಲೆಂಡ್ 2ನೇ ಟೆಸ್ಟ್​; ಮಳೆಯಿಂದ ಮೊದಲ ದಿನದಾಟ ರದ್ದು
news18
Updated: August 9, 2018, 9:46 PM IST
ನ್ಯೂಸ್ 18 ಕನ್ನಡ

 

ಲಂಡನ್​ನ ಲಾರ್ಡ್ಸ್ ಅಂಗಳದಲ್ಲಿ ನಡೆಯಬೇಕಿದ್ದ ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಮೊದಲ ದಿನದಾಟದಲ್ಲಿ ಟಾಸ್ ಮುನ್ನವೇ ಶುರುವಾದ ಮಳೆ ದಿನವಿಡಿ ಅಡ್ಡಿಪಡಿಸಿತು. ಪರಿಣಾಮ ಟಾಸ್ ಕೂಡ ಸಾಧ್ಯವಾಗದ ಹಿನ್ನೆಲೆಯಲ್ಲಿ ಮೊದಲ ದಿನದಾಟ ಮಳೆಗೆ ಬಲಿಯಾಗಿದೆ. ಅಂತಿಮವಾಗಿ ಪಿಚ್ ಪರೀಕ್ಷಿಸಿದ ಅಂಪೈರ್ಗಳು ಮೊದಲ ದಿನದಾಟವನ್ನು ರದ್ದುಗೊಳಿಸಿದ್ದಾರೆ.

ಬೆಳಗ್ಗೆನೇ ಮಳೆರಾಯನ ಆಟ ಪ್ರಾರಂಭವಾಗಿದ್ದರಿಂದ ಟಾಸ್​ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಭೋಜನ ವಿರಾಮದ ಬಳಿಕವೂ ಮೈದಾನಕ್ಕೆ ಸೂರ್ಯನ ಕಿರಣ ಗೋಚರಿಸಿಲ್ಲ. ಬಳಿಕವು  ಪದೇ ಪದೇ ಮಳೆ ಸುರಿದಿದ್ದರಿಂದ ಅಂತಿಮವಾಗಿ ಅಂಪೈರ್​ಗಳು ಪರಿಶೀಲಿಸಿ ಮೊದಲ ದಿನದಾಟವನ್ನು ಕೈ ಬಿಡಲು ನಿರ್ಧರಿಸಿದರು.

  

 

First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ