ಎ ತಂಡಗಳ ಟೆಸ್ಟ್​: ಆಸೀಸ್ ವಿರುದ್ಧ ಭಾರತೀಯರ ದಿಟ್ಟ ಹೋರಾಟ

news18
Updated:September 9, 2018, 5:51 PM IST
ಎ ತಂಡಗಳ ಟೆಸ್ಟ್​: ಆಸೀಸ್ ವಿರುದ್ಧ ಭಾರತೀಯರ ದಿಟ್ಟ ಹೋರಾಟ
  • News18
  • Last Updated: September 9, 2018, 5:51 PM IST
  • Share this:
ನ್ಯೂಸ್ 18 ಕನ್ನಡ

ಬೆಂಗಳೂರಿನ ಹೊರವಲಯದ ಆಲೂರಿನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವೆ 2ನೇ ಅನಧಿಕೃತ ಟೆಸ್ಟ್​ ಪಂದ್ಯ ನಡೆಯುತ್ತಿದ್ದು, ಭಾರತ ಎ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿದೆ.

ಆಸ್ಟ್ರೇಲಿಯಾ ಎ ತಂಡ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 346 ರನ್​ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ ಎ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್​ಗೆ ರವಿಕುಮಾರ್ ಹಾಗೂ ಅಭಿಮನ್ಯು 174 ರನ್​ಗಳ ಕಾಣಿಕೆ ನೀಡಿದರು. ರವಿಕುಮಾರ್ 83 ಹಾಗೂ ಅಭಿಮನ್ಯು 86 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರೆ, 13 ರನ್ ಗಳಿಸಿ ಅಂಕಿತ್ ಬಾವ್ನೆ ಔಟ್ ಆದರು.

ಸದ್ಯ 2ನೇ ದಿನದಾಟದ ಅಂತ್ಯಕ್ಕೆ ಭಾರತ ಎ 3 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿದ್ದು, 123 ರನ್​ಗಳ ಹಿನ್ನಡೆಯಲ್ಲಿದೆ. ನಾಯಕ ಶ್ರೇಯಸ್ ಅಯ್ಯರ್ 30 ಹಾಗೂ ಶುಬ್ಮನ್ ಗಿಲ್ 6 ರನ್ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
First published:September 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading