Varinder Singh: ಭಾರತ ತಂಡದ ಹಾಕಿ ದಂತಕಥೆ, ವಿಶ್ವಕಪ್ ಪದಕ ವಿಜೇತ ಆಟಗಾರ ನಿಧನ

ವರಿಂದರ್ ಸಿಂಗ್ ನಿಧನ

ವರಿಂದರ್ ಸಿಂಗ್ ನಿಧನ

1972ರ ಒಲಿಂಪಿಕ್ (Olympic) ಚಿನ್ನದ (Gold) ಪದಕ ವಿಜೇತ ಭಾರತದ ಹಾಕಿ (Hockey) ತಂಡದ ದಂತಕಥೆ ವರಿಂದರ್ ಸಿಂಗ್ (Varinder Singh) (75) ನಿಧನರಾಗಿದ್ದಾರೆ.

  • Share this:

1972ರ ಒಲಿಂಪಿಕ್ (Olympic) ಚಿನ್ನದ (Gold) ಪದಕ ವಿಜೇತ ಭಾರತದ ಹಾಕಿ (Hockey) ತಂಡದ ದಂತಕಥೆ ವರಿಂದರ್ ಸಿಂಗ್ (Varinder Singh) (75) ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ ಹುಟ್ಟೂರಾದ ಜಲಂಧರ್‌ನಲ್ಲಿರುವ ಸ್ವಗೃಹದಲ್ಲಿ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಇವರ ನಿಧನದ ಮಾಹಿತಿಯನ್ನು ಹಾಕಿ ಇಂಡಿಯಾ ತನ್ನ ಅಧಿಕೃತ ಟ್ವಿಟರ್​ ಮೂಲಕ ತಿಳಿಸಿದೆ. ಇನ್ನು, ವಾರಿಂದರ್ ಸಿಂಗ್ ಅವರು ಮೇ 16, 1947 ರಂದು ಜಲಂಧರ್‌ನಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಹಾಕಿಯಲ್ಲಿ ಆಸಕ್ತಿ ಹೊಂದಿದ್ದ ಸಿಂಗ್ ಅವರು ಕಷ್ಟಪಟ್ಟು ಕೆಲಸ ಮಾಡಿ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಅವರು ಒಲಿಂಪಿಕ್ಸ್, ವಿಶ್ವಕಪ್ ಮತ್ತು ಏಷ್ಯನ್ ಗೇಮ್ಸ್‌ನಂತಹ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಿದ್ದಾರೆ.  ವರಿಂದರ್ ಸಿಂಗ್ ನಿಧನಕ್ಕೆ ಹಾಕಿ ಇಂಡಿಯಾ ಕಂಬನಿ ಮಿಡಿದಿದ್ದು, ಜಗತ್ತಿನಾದ್ಯಂತ ಇರುವ ಹಾಕಿ ಭ್ರಾತೃತ್ವ ವರಿಂದರ್ ಸಿಂಗ್ ಅವರನ್ನು ಸದಾ ನೆನಪಿನಲ್ಲಿಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


ಭಾರತ ಹಾಕಿ ತಂಡದ ದಂತಕಥೆ ವರಿಂದರ್:


ಹೌದು, ವರಿಂದರ್ ಸಿಂಗ್ ಅವರು ಭಾರತ ಹಾಕಿ ತಂಡದ ದಂತಕಥೆ ಎಂದೇ ಹೇಳಲಾಗುತ್ತದೆ. ಇವರು 1975 ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದರು. ಅಲ್ಲದೇ ವಿಶ್ವಕಪ್ ಫೈನಲ್‌ನಲ್ಲಿ ಭಾರತ 2-1 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡಿತು.


ವಾರಿಂದರ್ ಮ್ಯೂನಿಚ್‌ನಲ್ಲಿ ನಡೆದ 1972ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಇವುಗಳಲ್ಲದೆ, 1973 ಮತ್ತು 1978 ರ ಏಷ್ಯನ್ ಗೇಮ್ಸ್‌ನಲ್ಲಿ ಹಾಕಿ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದ ಭಾರತ ತಂಡದ ಭಾಗವಾಗಿದ್ದರು ವಾರಿಂದರ್ ಸಿಂಗ್. 2007 ರಲ್ಲಿ, ಅವರು ಕೇಂದ್ರ ಸರ್ಕಾರದಿಂದ ಪ್ರತಿಷ್ಠಿತ ಧ್ಯಾನ್ ಚಂದ್ ಜೀವನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದರು.


ಇದನ್ನೂ ಓದಿ: ರಣವೀರ್ ಸಿಂಗ್ vs ಕಪಿಲ್ ದೇವ್ ಪಡೆ; ಹೇಗಿದೆ ನೋಡಿ ಉಭಯ ತಂಡಗಳ PHOTOS


ವರಿಂದರ್​ ನಿಧನಕ್ಕೆ ಕಂಬನಿ ಮಿಡಿದ ಭಾರತ ಹಾಕಿ ತಂಡ:


ಇನ್ನು, ವರಿಂದರ್​ ಸಿಂಗ್ ನಿಧನಕ್ಕೆ ಭಾರತವೇ ಕಂಬನಿ ಮಿಡಿದಿದ್ದು, ಇವರ ನಿಧನವನ್ನು ಭಾರತ ಹಾಕಿ ಅಸೋಸಿಯೇಶನ್ ದೃಢಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘‘ಶ್ರೇಷ್ಠ ಹಾಕಿ ಆಟಗಾರ ಶ್ರೀ ವರೀಂದರ್ ಸಿಂಗ್ ಅವರ ಇಂದು ನಿಧನರಾಗಿದ್ದಾರೆ. ಅಗಲಿದ ವ್ಯಕ್ತಿಯ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಮತ್ತು ಈ ಭರಿಸಲಾಗದ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ನೀಡಲಿ ಎಂದು ನಾವು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇವೆ‘ ಎಂದು ಬರೆದುಕೊಂಡಿದ್ದಾರೆ.



ಧ್ಯಾನ್‌ಚಂದ್ ಪ್ರಶಸ್ತಿಗೆ ಭಾಜನರಾದ ಸಿಂಗ್:


1974 ಮತ್ತು 1978 ರಲ್ಲಿ ಭಾರತ ಹಾಕಿ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆಲುವಿನ ತಂಡದ ಸದಸ್ಯರಾಗಿದ್ದರು. ಭಾರತದ ಈ ಹಾಕಿ ದಿಗ್ಗಜ 1975ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿಯೂ ಪ್ರತಿನಿಧಿಸಿದ್ದಾರೆ. ಹಾಕಿ ಕ್ರೀಡೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ 2007ರಲ್ಲಿ ವರೀಂದರ್ ಸಿಂಗ್ ಅವರಿಗೆ ಪ್ರತಿಷ್ಠಿತ ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು